ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಘದಿಂದ ವ್ಯಕ್ತಿ ಶಕ್ತಿಯಾಗಿ ಪರಿವರ್ತಿಸುವ ಕೆಲಸ

By Prasad
|
Google Oneindia Kannada News

Sangh Shiksha Varg – 2011
ಚನ್ನೇನಹಳ್ಳಿ, ಮೇ 9 : ಇಂದು ನಮ್ಮ ದೇಶದ ಮೇಲೆ ಹಲವು ಸವಾಲುಗಳು ಎರಗುತ್ತಿವೆ. ವಿದೇಶೀ ಕಂಪನಿಗಳು ಇಲ್ಲಿ ಬೀಡು ಬಿಡುತ್ತಿವೆ. ಅದರಿಂದ ಹಲವು ಬದಲಾವಣೆಗಳು ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಿ ಸಂಭವಿಸುತ್ತವೆ. ಅವುಗಳಿಂದ ದೇಶವನ್ನು ರಕ್ಷಿಸಲು ಶಕ್ತಿ ಬೇಕಾಗಿದೆ. ಆದರೆ ಇಂದಿನ ಯುವ ಜನತೆ ಗುರಿ ಇಲ್ಲದವರಾಗಿದ್ದಾರೆ. ಅವರಿಗೆ ಬೇಕಾದ ಗುರಿ, ಅದನ್ನು ಮುಟ್ಟಲು ಬೇಕಾದ ಶಿಕ್ಷಣ ಶಕ್ತಿ ಇಂದು ಬೇಕಾಗಿದೆ. ಅದನ್ನು ಆರೆಸ್ಸಸ್ ಮಾಡುತ್ತಿದೆ ಎಂದು ಬೆಂಗಳೂರಿನ ಯುವ ಉದ್ಯಮಿ ಪಾರಸ್ ಜೈನ್ ಹೇಳಿದ್ದಾರೆ.

ಹೀಗೆ ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸುವ ಕೆಲಸ ಸಂಘ ಮಾಡುತ್ತಿದೆ. ಸಂಘದ ಈ ಕೆಲಸ ಹೊರಗಿನವರಿಗೆ ಸರಿಯಾಗಿ ತಿಳಿಯುತ್ತಿಲ್ಲ. ವ್ಯಕ್ತಿ ನಿರ್ಮಾಣದ ಕೆಲಸ ಈ ದೇಶದಲ್ಲಿ ಮಾತ್ರ ಈ ಪ್ರಮಾಣದಲ್ಲಿ ನಡೆಯುತ್ತಿದೆ. ಕುಟುಂಬ, ಸಮಾಜ, ದೇಶ ಪ್ರೇಮದ ಶಿಕ್ಷಣ ಪಡೆದ ಸ್ವಯಂಸೇವಕರು ಎಲ್ಲೆಡೆ ಸ್ಥಾನ ಪಡೆದರೆ ಎಲ್ಲ ಭೇದ ಭಾವಗಳು, ಅಪಾಯಗಳು ದೂರಾಗುವುದು ಖಂಡಿತ ಎಂದು ಭರವಸೆಯಿಂದ ನುಡಿದರು. ಅವರು ಬೆಂಗಳೂರು ಸಮೀಪದ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ನಡೆದ ಆರೆಸ್ಸೆಸ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.

ಕರ್ನಾಟಕ ದಕ್ಷಿಣದ 378 ಸ್ಥಾನದಿಂದ 645 ಯುವಕರು, ಸಮಗ್ರ ಕರ್ನಾಟಕದ ಆಯ್ದ 32 ಸ್ಥಾನಗಳಿಂದ ಬಂದ 33 ಗಣ್ಯರು 20 ದಿನಗಳ ಪ್ರಥಮ ವರ್ಷದ ಶಿಕ್ಷಣ ಪಡೆದರು. ಇದೇ ಸಂದರ್ಭದಲ್ಲಿ ಕರ್ನಾಟಕ ದಕ್ಷಿಣದ 142 ಸ್ಥಾನಗಳಿಂದ ಬಂದ 180 ಕಾಲೇಜು ವಿದ್ಯಾರ್ಥಿಗಳು, ಅದರಲ್ಲಿ 33 ಅಧ್ಯಾಪಕರು ಇಲ್ಲಿ ಒಂದು ವಾರದ ಶಿಕ್ಷಣ ಪಡೆದಿದ್ದಾರೆ.

ಈ ತರಬೇತಿ ಶಿಬಿರಕ್ಕೆ ಶತಾವಧಾನಿ ಡಾ. ರಾ.ಗಣೇಶ್, ಸಮಾಜ ಮುಖಿ ಚಿಂತನೆಯ ಸಂತ ಪೇಜಾವರ ಶ್ರೀಗಳು ಮುಂತಾದ ಗಣ್ಯರು ಭೇಟಿ ನೀಡಿದ್ದಾರೆ. ಮೇ 1ರ ಭಾನುವಾರ ಬೆಂಗಳೂರಿನ 175 ಕುಟುಂಬಗಳ ತಾಯಂದಿರು ತಾವೇ ಅಡುಗೆ ಮಾಡಿ ತಂದು ತಾಯ್ತನದ ಪ್ರೀತಿಯನ್ನು ಶಿಬಿರಾರ್ಥಿಗಳಿಗೆ ಉಣಬಡಿಸಿದ್ದಾರೆ. ಸಹಜೀವನ ಸಾಮರಸ್ಯ ಮುಂತಾದ ಸದ್ಗುಣಗಳ ಶಿಕ್ಷಣವನ್ನು ನೀಡುವ ಈ ಶಿಬಿರ ಚೇತೋಹಾರಿಯಾಗಿತ್ತು. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ವಕೀಲರು, ವೈದ್ಯರು ಮುಂತಾದ ಸಮಾಜದ ಎಲ್ಲ ಕ್ಷೇತ್ರಗಳ ಶಿಬಿರಾರ್ಥಿಗಳು ಇಲ್ಲಿದ್ದುದು ವಿಶೇಷ.

ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಸಂಪರ್ಕ ಪ್ರಮುಖರಾದ ಶ್ರೀಪಟ್ಟಾಭಿರಾಮ್, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಸಂಘ ಕೈಗೆತ್ತಿಕೊಂಡಿದೆ. ಇಲ್ಲಿ ವ್ಯಕ್ತಿ ಸುಖದ ಕಲ್ಪನೆಯಿಲ್ಲ. ಬದಲಾಗಿ ರಾಷ್ಟ್ರ ಸುಖ – ವೈಭವದ ಸಾಧನೆಯೇ ಗುರಿ. ಅದಕ್ಕಾಗಿ ವ್ಯಕ್ತಿ ವ್ಯಕ್ತಿಗಳನ್ನು ಜೋಡಿಸಿ, ಸಂಸ್ಕಾರ ನೀಡಿ ಅವರ ಮೂಲಕ ಗುರಿಸಾಧನೆಯ ಕನಸನ್ನು ಸಂಘ ಕಂಡಿದೆ. ಅದಕ್ಕಾಗಿ ಶಿಕ್ಷಣ, ಸಂಸ್ಕಾರ, ತರಬೇತಿ ನೀಡುತ್ತಿದೆ ಎಂದರು. ಶಿಬಿರಾರ್ಥಿಗಳಿಂದ ಆಕರ್ಷಕ ಶಾರೀರಿಕ ಪ್ರದರ್ಶನ, 'ಭೋಗ ಮೆಟ್ಟಿ ತ್ಯಾಗ ಮೆರೆದ ಜನ್ಮ ಭೂಮಿ ಭಾರತ' ಈ ಗೀತೆ ನೆರೆದವರ ಮನ ಸೂರೆಗೊಂಡಿತು.

English summary
The Valedictory ceremony of Sangh Shiksha Varg – 2011, annual training camp, organised by Rashtriya Swayamsevak Sangh (RSS) Karnataka South for the selected swayamsevaks was held at Janaseva Vidya Kendra Channenahalli, near Bangalore. Sri Paras Jain, Managing Director of Adishwar presided over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X