• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರೋಗ್ಯಕಾರಿ ಆಡಿನ ಹಾಲು ಮಾರುಕಟ್ಟೆಗೆ ಬಿಡುಗಡೆ

By Srinath
|

ಉಡುಪಿ, ಮೇ 09: ತಾಲೂಕಿನ ನಡೂರು ಆಡು ಫಾರಂನಲ್ಲಿ ಸಂಸ್ಕರಿಸಿದ ಆಡಿನ ಹಾಲನ್ನು ಮಾರಾಟಕ್ಕೆ ಬಿಡುಗಡೆ ಮಾಡಲಾಗಿದೆ. ಸ್ಯದಕ್ಕೆ ಬೆಂಗಳೂರು ಮತ್ತು ಮಂಗಳೂರಿಗೆ ಈ ಹಾಲಿನ ಪ್ಯಾಕೆಟ್ ಪೂರೈಕೆಯಾಗುತ್ತಿದೆ. ಅಂದಹಾಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ಆಡಿನ ಹಾಲನ್ನು ಪ್ಯಾಶ್ಚರೀಕರಿಸಿ, ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಅರ್ಧ ಲೀಟರ್ ಆಡಿನ ಹಾಲಿನ ದರ 40 ರೂ.

ಜೈಕರ್ ಕೈರನ್ ಎಂಬುವವರು ಉಡುಪಿಯಿಂದ 25 ಕಿಮೀ ದೂರದಲ್ಲಿರುವ ನಡೂರು ಗ್ರಾಮದಲ್ಲಿ ಈ ಫಾರಂ ಅನ್ನು 2001ರಲ್ಲಿ ಸ್ಥಾಪಿಸಿದ್ದಾರೆ. ಸದ್ಯಕ್ಕೆ ಇಲ್ಲಿ ದಿನನಿತ್ಯ 500 ಲೀಟರ್ ಆಡಿನ ಹಾಲು ಉತ್ಪಾದನೆಯಾಗುತ್ತಿದೆ. ಮುಂದಿನ ವರ್ಷದ ವೇಳೆಗೆ ಹಾಲು ಉತ್ಪಾದನೆ ಸಾಮರ್ಥ್ಯ 1,000 ಲೀಟರ್ ಗೆ ಏರಲಿದೆ ಎಂದು ಕೈರನ್ ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿ ಅವರು ಆಡಿನ ಹಾಲು ಆರೋಗ್ಯಕರವೆಂದು ಸೇವನೆ ಮಾಡುತ್ತಿದ್ದರು. ಮಕ್ಕಳಿಗೆ ಅಸ್ತಮಾ, ದೃಷ್ಟಿದೋಷ, ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗಳಿಗೆ ಆಡಿನ ಹಾಲನ್ನು ನಿಯಮಿತವಾಗಿ ಸೇವನೆ ಮಾಡಿದರೆ ಪರಿಹಾರ ಸಿಗುತ್ತದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ರಕ್ತದಲ್ಲಿ ಲವಣಾಂಶ, ಜೀವಸತ್ವ ಮತ್ತು ಹಿಮೊಗ್ಲೋಬಿನ್ ಪ್ರಮಾಣ ಏರಿಕೆಯಾಗುತ್ತದೆ.

ಆಡಿನ ಹಾಲಿನಲ್ಲಿ ಪ್ರತ್ಯಾಮ್ಲೀಯ ಗುಣ ಇರುವುದರಿಂದ ಹೊಟ್ಟೆ ಹುಣ್ಣು, ಅರೆ ತಲೆನೋವು ನಿವಾರಣೆಯಾಗುತ್ತದೆ. ಇನ್ನು, ಆಡಿನ ಹಾಲಿನಲ್ಲಿ ಪ್ರೊಟೀನ್ ಹೆಚ್ಚಾಗಿದ್ದು, ಅದನ್ನು ಒಂದು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಪ್ರತಿದಿನ ಕೊಡುವುದರಿಂದ ಮಕ್ಕಳ ಬೆಳವಣಿಗೆ ಸದೃಢವಾಗಿರುತ್ತದೆ ಎಂದು ಕೈರನ್ ವಿವರಿಸುತ್ತಾರೆ. ನೀಲಗಿರೀಸ್ ಮಳಿಗೆಗಳು ಸೇರಿದಂತೆ ನಿಗದಿತ ಸ್ಥಳಗಳಲ್ಲಿ ಈ ಹಾಲು ಮಾರಾಟಕ್ಕೆ ದೊರಕುತ್ತದೆ. ವಿದೇಶಗಳಲ್ಲಿ ಆಡಿನ ಹಾಲು ಮತ್ತು ಅದರ ಉತ್ಪನ್ನಗಳು ವ್ಯಾಪಕವಾಗಿ ಬಳಕೆಯಲ್ಲಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nadur Goat Farm in Udupi in Karnataka has started producing goat milk. The Processed Goat Milk which is healthy for children is now available in packets in Bangalore and Mangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more