ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಸಾಮಾ ಹೆಂಡತಿಯರು ನನಗೆ ಬೇಕಾಗಿದ್ದಾರೆ: ಒಬಾಮಾ

By Srinath
|
Google Oneindia Kannada News

obama (pic: horufadhi)
ವಾಷಿಂಗ್ಟನ್, ಮೇ 09 : ಮೋಸ್ಟ್ ವಾಂಟೆಡ್ ಉಗ್ರ ಒಸಾಮಾ ಬಿನ್ ಲಾಡೆನ್ ನನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡುವಾಗ ಬದುಕುಳಿದ ಅವನ ಮೂವರು ಪತ್ನಿಯರನ್ನು ತನಗೊಪ್ಪಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕ ತಾಕೀತು ಮಾಡಿದೆ.

ಒಬಿಎಲ್ ವಿಧವೆಯರನ್ನು ತಾನು ವಿಚಾರಣೆಗೆ ಒಳಪಡಿಸಿ, ಅಲ್ ಖೈದಾ ಉಗ್ರ ಸಂಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಾಗಿದೆ. ಆದ್ದರಿಂದ ಆ ಮೂವರನ್ನೂ ತನಗೆ ಹಸ್ತಾಂತರಿಸುವಂತೆ ಅಮೆರಿಕ ಸ್ಪಷ್ಟವಾಗಿ ಹೇಳಿದೆ.

ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಥಾಮಸ್ ಡೊನಿಲಾನ್ ಇದನ್ನು ದೃಢಪಡಿಸಿದ್ದು, ಒಬಿಎಲ್ ಅಡಗುದಾಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರೆ ಅದನ್ನೂ ತನ್ನೊಂದಿಗೆ ಹಂಚಿಕೊಳ್ಳುವಂತೆ ಪಾಕ್ ಗೆ ಅಮೆರಿಕ ಸೂಚಿಸಿದೆ ಎಂದು ಅವರು ಹೇಳಿದ್ದಾರೆ.

ಒಬಿಎಲ್ ನಿಧನಾನಂತರದ ಬೆಳವಣಿಗೆಗಳು, ಮಾಹಿತಿಗಳನ್ನು ಪರಾಮರ್ಶಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಇದು ನೇರವಾಗಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.

English summary
The US has asked for access to Osama Bin Laden's 3 widows. The three women, who are in Pakistani custody since the May 1 American raid that killed bin Laden inside his Abbottabad hideout, US officials hope could unravel the mystery besides possibly providing more information about al Qaeda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X