• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವಳು ಲಾಡೆನ್ ಅಣ್ಣನ ಮಗಳು, ಮಾಡೆಲ್ ವಫಾ ಡಫೂರ್ !

By Srinath
|

ನ್ಯೂಯಾರ್ಕ್, ಮೇ 08 : ಒಸಾಮಾ ಬಿನ್ ಲಾಡೆನ್ ಎಂಬ ಭಯೋತ್ಪಾದಕನು ಕಂಡೋರ ಮಕ್ಕಳನ್ನು ಬಾವಿಗೆ ತಳ್ಳುವ ಹರಾಮಿ ಎಂಬುದು ಈ ಚಿತ್ರ ನೋಡಿದಾಗ ನಿಮಗೇ ದೃಢಪಡುತ್ತದೆ. ಯಾವುದೇ ಅನುಮಾನ ಬೇಡ. ಇದು ಲಾಡೆನ್ ನ ಸ್ವಂತ ಅಣ್ಣನ ಮಗಳ ಚಿತ್ರ. ಅವಳ ಹೆಸರು ವಫಾ ಡಫೂರ್ ಲಾಡೆನ್. 30ರ ಸ್ಫುರದ್ರೂಪಿ. ಅದನ್ನು ಇಡೀ ಜಗತ್ತಿಗೆ ತೋರಿಸಲು ಆರಿಸಿಕೊಂಡಿರುವುದು ಮಾಡೆಲ್ ವೃತ್ತಿ. ಜತೆಗೆ ಗಿಟಾರೂ ಬಾರಿಸುತ್ತಾಳೆ.

ಒಬಿಎಲ್ ನ ಸೋದರ ಯೆಸಲೀಮ್ ಎಂಬುವವನ ಮಗಳೇ ಈ ಬಿನ್ನಾಣಗಿತ್ತಿ ವಫಾ. ಅಂದಹಾಗೆ ಒಬಿಎಲ್ ಯಾವ ನಗರದಲ್ಲಿ ಅವಳಿ ಕಟ್ಟಡಗಳಿಗೆ ವಿಮಾನಗಳನ್ನು ನುಗ್ಗಿಸಿ, ಅಮೆರಿಕನ್ನರ ಪ್ರತಿಷ್ಠೆಗೆ ಪೆಟ್ಟುಕೊಟ್ಟಿದ್ದನೋ ಅದೇ ಮಹಾನಗರ (ನ್ಯೂಯಾರ್ಕ್) ಇವಳ ತವರು. ಜೆಡ್ಡಾದಲ್ಲಿ ಹುಟ್ಟು ಪಡೆದ ವಫಾ, 10 ವರ್ಷದವಳಾಗಿದ್ದಾಗ ಅವಳಮ್ಮ ತನ್ನ ಗಂಡನನ್ನು ಬಿಟ್ಟು ಸ್ವಿಟ್ಸರ್ಲೆಂಡ್ ಗೆ ಹೊರಟುಹೋದಳು. ವಫಾ ಅಮ್ಮನ ಹಿಂದೆ ಹೆಜ್ಜೆ ಹಾಕಿದಳು.

2001ರ ಸೆಪ್ಟೆಂಬರ್ 11ರಂದು ಡಬ್ಲ್ಯುಟಿಸಿ ಕೇಂದ್ರ ಧರೆಗುರುಳುತ್ತಿದ್ದಂತೆ ವಫಾ ಭೋರಿಟ್ಟಿದ್ದಳು. ಎಲ್ಲ ಅಮೆರಿಕನ್ನರಂತೆ ಸಹಜವಾಗಿಯೇ 'ಯಾವೋನು ... ಇಂತಹ ಮಾನಗೇಡಿ ಕೆಲಸ ಮಾಡಿರುವುದು' ಎಂದು ಕಿರುಚಾಡಿದ್ದಳು. ಸ್ವತಃ ತನ್ನ ಚಿಕ್ಕಪ್ಪನದೇ ಈ ಕುಕೃತ್ಯ ಎಂದಾಗ ಇವಳು ಮಾಡಿದ ಮೊದಲ ಕೆಲಸವೆಂದರೆ ತನ್ನ ಹೆಸರಿಗೆ ಅಂಟಿಕೊಂಡಿದ್ದ ಲಾಡೆನ್ ಎಂಬ ಬಾಲಂಗೋಚಿಯನ್ನು ಕಿತ್ತು ಹಾಕಿದ್ದು. ತನ್ನ ಅಮ್ಮನ ಹೆಸರಷ್ಟೇ ತನಗಿರಲಿ ಎಂದು ಘೋಷಿಸಿದಳು.

ದಾಳಿ ನಡೆದಾಗ ವಫಾ ಜಿನಿವಾದಲ್ಲಿ ಅಮ್ಮನೊಂದಿಗೆ ಇದ್ದಳು. ಘಟನೆಯ ಬಳಿಕ ಎಷ್ಟು ಅಧೀರಳಾಗಿದ್ದಳೆಂದರೆ ಆರು ತಿಂಗಳ ಕಾಲ ಅವಳನ್ನು ಮನೋವ್ಯಾಕುಲತೆ ಕಾಡಿತ್ತು. ಮುಂದೆ ಎಂದಿಗೂ, ಎಲ್ಲೂ ಅಪ್ಪಿತಪ್ಪಿಯೂ ತಾನು ಒಬಿಎಲ್ ನ ಮಗಳು ಎಂದು ಹೇಳಿಕೊಳ್ಳಲಿಲ್ಲ. ಲಾಡೆನ್ ಕುಟುಂಬದ ಬಗ್ಗೆ ಎಳ್ಳಷ್ಟೂ ಹೆಮ್ಮೆ ಇಲ್ಲ ಎಂದಳು.

ಮುಂದ... ಅಮೆರಿಕದ ಪ್ರಮುಖ ಮ್ಯಾಗಜೀನ್ ಗೆ ಲ್ಯಾಂಝೆರಿ ಉಡುಗೆಯಲ್ಲಿ ತನ್ನ ಸೊಬಗನ್ನು ಭರಪೂರ ತೆರೆದಿಟ್ಟಳು. ಈಜುಡುಗೆ ಇವಳಿಗೆ ಬಲು ಅಚ್ಚುಮೆಚ್ಚು. ಅಲ್ಲಿಂದ ಮುಂದಕ್ಕೆ ಅದೇ ಅವಳ ವೃತ್ತಿ ಜೀವನವಾಯಿತು. ಯಾವುದೇ ಎಗ್ಗಿಲ್ಲದೆ ದೇಹ ಪ್ರದರ್ಶನಕ್ಕಿಳಿದಳು. ಇದೇ ವೇಳೆ ಒಬಿಎಲ್ ನಿಂದ ಶಾಶ್ವತವಾಗಿ ದೂರವಾಗತೊಡಗಿದಳು.

English summary
Meet... Osama bin Ladens elder brothers daughter Wafah Darfur Laden. Wafah Darfur in her early 30s is not a terrorist but mesmerizing model. Always ready to pose in seductive swimwear. Yes, she is a well known model cum musician settled in New York.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X