ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ಭೂ ವ್ಯವಹಾರಗಳ ಮೇಲೆ ಬಿಜೆಪಿ ಹೊಸ ಬೆಳಕು

By Srinath
|
Google Oneindia Kannada News

Yeddyurappa, Deve Gowda
ಬೆಂಗಳೂರು, ಮೇ 8: ಜಾತ್ಯತೀತ ಜನತಾದಳ ಪರಿವಾರದವರು ನಾಲ್ಕಾರು ವರ್ಷಗಳ ಹಿಂದೆ 680 ಕೋಟಿ ರು. ಮೌಲ್ಯದ ವಾಣಿಜ್ಯ ಮತ್ತು ಕೃಷಿ ಸ್ಥಿರಾಸ್ತಿಯನ್ನು ಗುಡ್ಡೆ ಹಾಕಿದ್ದಾರೆ ಎಂದು ಪಕ್ಷದ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ರಾಜ್ಯ ಬಿಜೆಪಿ ಗುರುತರ ಆರೋಪ ಮಾಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಅವರು 2005-07 ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಪುತ್ರರು ಖರೀದಿಸಿರುವ 'ಭೂಮಂಡಲ'ದ ವಿರಾಟ ದರ್ಶನ ಮಾಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಜೆಡಿಎಸ್ ಸಾರಿರುವ ಜನಾಂದೋಲನದ ತೀವ್ರತೆಯನ್ನು ಕುಗ್ಗಿಸಲು ಬಿಜೆಪಿ ಈ ತಂತ್ರವನ್ನು ರೂಪಿಸಿದೆ ಎನ್ನಲಾಗಿದೆ.

ಗೌಡ ಕುಟುಂಬ ಖರೀದಿಸಿರುವ ಆಸ್ತಿಯ ಬಗ್ಗೆ ಯಾವುದೇ ಗೊಂದಲ ಬೇಡ. ರಾಜ್ಯದಲ್ಲಿ ದೀರ್ಘ ಕಾಲದಿಂದ ಈ ಕುಟುಂಬ ಅತ್ಯಂತ ಭ್ರಷ್ಟ ಎನಿಸಿಕೊಂಡಿದೆ. ಯಾರಾದರೂ ಇದರ ದಾಖಲೆಗಳ ಸಾಕ್ಷ್ಯ ಕೋರಿದರೆ ಒದಗಿಸಲು ತಾವು ಸಿದ್ಧವಿರುವುದಾಗಿ ಪುಟ್ಟಸ್ವಾಮಿ ಆಪಾದಿಸಿದ್ದಾರೆ.

ಗೌಡ ಆಯೋಜಿಸಿರುವ ಆಂದೋಲನಕ್ಕೆ ಅರ್ಥವೇ ಇಲ್ಲ. ಅದೊಂದು ದೊಡ್ಡ ಜೋಕ್. ಅಪ್ಪ-ಮಕ್ಕಳ ಮೇಲೆ ಭ್ರಷ್ಟತೆಯ ಸರಮಾಲೆಯೇ ಇದೆ. ಈಗಿನ ಪ್ರಹಸನ ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ ಎಂದು ಜೆಡಿಎಸ್ ನ ಮಾಜಿ ಕುಟುಂಬಸ್ಥ ಕುಟುಕಿದರು.

English summary
Political Secretary of CM Yeddyurappa B J Puttaswamy, has released the list of properties bought by Gowda, his sons, including Former CM H D Kumaraswamy during 2005-07. The revelation appeared to be an exercise by the BJP to blunt the campaign the JD(S) supremo has been leading against the BJP government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X