• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾತಕಿ ದಾವೂದ್ ಇಬ್ರಾಹಿಂ ಪುತ್ರನ ವಿವಾಹ ದುಬೈಗೆ ಶಿಫ್ಟ್

By Srinath
|

ಹೊಸದಿಲ್ಲಿ, ಮೇ 08 : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಸ್ಕರ್ ಉಗ್ರ ಪಾತಕಿ ಒಸಾಮಾ ಬಿನ್ ಲ್ಯಾಡೆನ್ ಸಾವಿನ ಸಮ್ಮುಖದಲ್ಲಿ ತನ್ನ ಕಾರಸ್ಥಾನವನ್ನು ಕರಾಚಿಯಿಂದ ಸ್ಥಳಾಂತರಿಸಿದ್ದಾಯಿತು. ಅದೇ ರೀತಿ ಈಗ ಮಗನ ಮದುವೆಯನ್ನೂ ದುಬೈಗೆ ವರ್ಗಾಯಿಸುವಂತೆ ಪಾಕಿಸ್ತಾನದ ಐಎಸ್ಐ ದಾವೂದ್ ಗೆ ಸಲಹೆ ನೀಡಿದೆ.

ದಾವೂದ್ ಮಗ ಮೊಯಿನ್ ಪಾಕಿಸ್ತಾನದ ಮೂಲದ ಕೆನಡಾದ ಜವಳಿ ವ್ಯಾಪಾರಿಯ ಪುತ್ರಿಯನ್ನು ಮೇ 28ರಂದು ವರಿಸಲಿದ್ದಾನೆ. ಅತ್ತ ಲಾಡೆನ್ ಶವವಾಗಿ ಉರುಳುತ್ತಿದ್ದಂತೆ 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಐಎಸ್ಐ ಸೂಚನೆಯ ಮೇರೆಗೆ ಮೇ 1ರ ರಾತ್ರಿ ಕರಾಚಿಯಿಂದ ಸೌದಿ ಅರೇಬಿಯಾಕ್ಕೆ ಪಲಾಯನ ಮಾಡಿದ್ದಾನೆ ಎಂದು ವರದಿಯಾಗಿದೆ.

ಛೋಟಾ ಶಕೀಲ್ ಸಹ ದಾವೂದ್ ಜತೆಗೇ ಕರಾಚಿಯಿಂದ ಕಳಚಿಕೊಂಡಿದ್ದಾನೆ. ಅಮೆರಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಲಾಡೆನ್ ಹತನಾದ ಬಳಿಕ ಪ್ರಾಣಭಯಕ್ಕೆ ಸಿಲುಕಿರುವ ದಾವೂದ್ ತನ್ನ ಮಗನ ಮದುವೆ ಸ್ಥಳವನ್ನು ದುಬೈಗೆ ವರ್ಗಾಯಿಸಿರುವುದಾಗಿ ಮೂಲಗಳು ಹೇಳಿವೆ.

English summary
Days after reports claimed that Dawood Ibrahim Kaskar has fled Karachi, intelligence officials say Pakistan's ISI has advised India's most wanted criminal to shift the venue of his son Moin's May 28 wedding from Karachi to Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X