ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಝೂನ ಪ್ರಾಣಿ ದತ್ತು ತೆಗೆದುಕೊಳ್ಳಲಿದ್ದಾರೆ ಧೋನಿ

By Bm Lavakumar
|
Google Oneindia Kannada News

Javagal Srinath in Mysore Zoo
ಮೈಸೂರು, ಮೇ. 7 : ಮೈಸೂರಿಗೆ ಸಧ್ಯದಲ್ಲಿಯೇ ಭೇಟಿ ನೀಡಲಿರುವ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲಿದ್ದಾರಂತೆ. ಈ ವಿಷಯವನ್ನು ಮಾಜಿ ವೇಗದ ಬೌಲರ್, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ತಿಳಿಸಿದ್ದಾರೆ.

ಮೈಸೂರಿನ ಮೃಗಾಲಯಕ್ಕೆ ಪ್ರಾಣಿವಿನಿಮಯ ಯೋಜನೆಯಡಿ ಆಫ್ರಿಕಾದಿಂದ ತರಲಾಗಿದ್ದ ನಾಲ್ಕು ಚೀತಾಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅನುವುಮಾಡಿಕೊಡುವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು.

ಕಳೆದ ಮಾರ್ಚ್ 26ರಂದು ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ತರಲಾಗಿತ್ತಾದರೂ ಅವು ಇಲ್ಲಿಯ ಹವಾಗುಣಕ್ಕೆ ಹೊಂದಿಕೊಳ್ಳುವ ಕೆಲವು ಸಮಯ ಬೇಕಾಗಿದ್ದರಿಂದ ಅವುಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಈ ನಡುವೆ ಹೆಣ್ಣು ಚೀತಾ ಏಪ್ರಿಲ್ 27ರಂದು ಮೂರು ಮರಿಗಳಿಗೆ ಜನ್ಮನೀಡಿದೆ. ಈ ಮರಿಗಳು ಇನ್ನೂ ಕಣ್ಣು ಬಿಡದ ಕಾರಣ ಅವುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಆರೈಕೆ ಮಾಡಲಾಗುತ್ತಿದೆ.

ಈ ಚೀತಾಗಳಿಗೆ ಶುಕ್ರವಾರ ಜಾವಗಲ್ ಶ್ರೀನಾಥ್‌ರವರು ನಾಮಕರಣ ಮಾಡಿದ್ದು, ಎರಡು ಗಂಡು ಚೀತಾಗಳಿಗೆ ಅರ್ಜುನ್, ತೇಜಸ್ಸು ಹಾಗೂ ಹೆಣ್ಣು ಚೀತಾಗಳಿಗೆ ಬೃಂದಾ, ಮಾಯಾ ಎಂದು ಹೆಸರಿಡಲಾಗಿದೆ. ಮರಿಗಳು ಕಣ್ಣುಬಿಟ್ಟ ನಂತರ ಕೆಲವು ದಿನಗಳ ಬಳಿಕ ಸಾರ್ವಜನಿಕರು ಅವುಗಳನ್ನು ವೀಕ್ಷಿಸಬಹುದಾಗಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ಭಾರತ ತಂಡದ ವೇಗದ ಬೌಲರ್ ಜಾಹೀರ್ ಖಾನ್ ಈಗಾಗಲೆ ಮೈಸೂರು ಝೂನಲ್ಲಿರುವ ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಮತ್ತೊಂದು ವಿಷಯವೇನೆಂದರೆ, ಮೈಸೂರು ಮೃಗಾಲಯದಲ್ಲಿರುವ ಯಾವುದೇ ಪ್ರಾಣಿ ಬಗ್ಗೆ ಮೊಬೈಲಿನಲ್ಲಿಯೇ ತಿಳಿಯಬಹುದು. ಹೇಗೆ ಅಂತೀರಾ? ಈ ಲೇಖನ ಓದಿ.

English summary
Indian cricket team captain Mahendra Singh Dhoni will be adopting animal in Mysore zoo, said former cricketer and present KSCA secretary Javagal Srinath in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X