ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ ಜಿಲ್ಲೆಯಲ್ಲಿ 243 ಯುವತಿಯರು ನಾಪತ್ತೆ

By Rajendra
|
Google Oneindia Kannada News

Amit Singh, Superintendent of Police Hassan
ಹಾಸನ, ಮೇ.6: ಪ್ರತಿ ಎರಡು ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಯುವತಿಯೊಬ್ಬಳು ನಾಪತ್ತೆಯಾಗುತ್ತಿದ್ದಾಳೆ ಎಂಬ ಅಂಶ ಜಿಲ್ಲೆಯ ಅಪರಾಧ ದಾಖಲೆಗಳ ಬ್ಯೂರೋ ಹೊರಗೆಡವಿದೆ. ಜನವರಿ 2010ರಿಂದ ಏಪ್ರಿಲ್ 2011ರತನಕ 243 ಯುವತಿಯರು ಕಾಣೆಯಾಗಿದ್ದಾರೆ. ಇವರಲ್ಲಿ 120 ಮಂದಿ 18 ವರ್ಷಕ್ಕಿಂತಲೂ ಕಡಿಮೆ ವಯೋಮಾನದವರು ಎಂಬ ಅಂಶಗಳು ಗಾಬರಿ ಹುಟ್ಟಿಸುವಂತಿವೆ.

ಇದುವರೆಗೂ 171 ಮಂದಿ ಮರಳಿ ಮನೆ ಬಂದಿದ್ದಾರೆ ಅಥವಾ ಪತ್ತೆಹಚ್ಚಲಾಗಿದೆ. ಬಾಕಿ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಉಳಿದ ಪ್ರಕರಣಗಳು ಬಗೆಹರಿಯುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಈ ಎಲ್ಲಾ ವಿವರಗಳನ್ನು ಹಾಸನ ಪೊಲೀಸರು sphsn.blogspot.com ಎಂಬ ಬ್ಲಾಗ್‌ನಲ್ಲಿ ದಾಖಲಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಐದು ದಿನಗಳ ಸಮಯದಲ್ಲಿ ಮೂರು ಮಂದಿ ಯುವತಿಯರು ಹಾಸನ ಜಿಲ್ಲೆಯಲ್ಲಿ ಕಾಣೆಯಾಗಿದ್ದರು. ಈ ನಾಪತ್ತೆ ಪ್ರಕರಣಗಳು ಹೊಳೆನರಸಿಪುರ ತಾಲೂಕಿನ ಕ್ಯಾತನಹಳ್ಳಿ ಹಾಗೂ ಬೇಲೂರು ತಾಲೂಕಿನ ಅರೆಹಳ್ಳಿಯಿಂದ ವರದಿಯಾಗಿದ್ದವು. ಬೇಲೂರು ತಾಲೂಕಿನ ಹಳೆಬೀಡು ಸಮೀಪದ ಬಂಡಿಲಕ್ಕನಕೊಪ್ಲು ಗ್ರಾಮದಿಂದ ಏಪ್ರಿಲ್ 24ರಂದು ಮಹಿಳೆಯೊಬ್ಬರು ತನ್ನ ಎರಡು ವರ್ಷದ ಮಗನೊಂದಿಗೆ ಕಾಣೆಯಾಗಿದ್ದರು.

ಯುವತಿಯರು ಇದ್ದಕ್ಕಿಂದ್ದಂತೆ ಯಾಕೆ ಕಾಣೆಯಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಪೊಲೀಸರು ಕಡೆಗೂ ಉತ್ತರ ಹುಡುಕಿದ್ದಾರೆ. ಪೊಲೀಸ್ ಸೂಪರಿಂಟೆಂಡೆಂಟ್ ಅಮಿತ್ ಸಿಂಗ್ ಅವರ ಪ್ರಕಾರ, ಯುವತಿಯರು ಮನೆ ಬಿಟ್ಟು ಓಡಿಹೋಗಲು ಕಾರಣ ಲವ್ ಮ್ಯಾರೇಜ್, ಬಾಯ್ ಫ್ರೆಂಡ್‌ಗಳ ಜೊತೆ ಮದುವೆಯಾಗಲು ಎಂಬ ಅಂಶ ಬಯಲಾಗಿದೆ.ಪ್ರಿಯಕರನೊಂದಿಗೆ ಮದುವೆಗೆ ಮನೆಯವರ ವಿರೋಧದ ಕಾರಣ ಯುವತಿಯರು ಮನೆ ಬಿಟ್ಟು ಹೋಗುತ್ತಿದ್ದಾರೆ ಎಂಬ ಅಂಶ ಬೆಳಕು ಕಂಡಿದೆ.

ಜಿಲ್ಲೆಯಲ್ಲಿ ಯುವತಿಯರ ಅಕ್ರಮ ಸಾಗಾಣಿಕೆ ಜಾಲದ ಇಲ್ಲ ಎಂಬುದನ್ನೂ ಹೇಳಲಾಗದು. ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಯುವತಿಯರು ಅವರಷ್ಟೇ ಓಡಿಹೋಗುತ್ತಿದ್ದಾರೆಯೇ ಅಥವಾ ಅಕ್ರಮ ಸಾಗಾಣಿಕೆ ಜಾಲದ ಕೈವಾಡ ಏನಾದರೂ ಇದೆಯೇ ಎಂಬುದನ್ನು ತನಿಖೆ ಮಾಡಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.

English summary
According to the Hassan district crime records bureau, as many as 243 girls have gone missing between January 2010 and April 2011. Among them, 120 were below the age of 18 years. Girls had reportedly left their home with boyfriends to get married, in the wake of opposition from their parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X