ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಡಿಗೆ ಸೇಡು ತೀರಿಸಿಕೊಳ್ಳಲು ತವಕಿಸುತ್ತಿರುವ ತಾಲಿಬಾನ್

|
Google Oneindia Kannada News

terror
ಇಸ್ಲಾಮಾಬಾದ್, ಮೇ 5: ಅಮೆರಿಕದ ಜೋಡಿ ಕಟ್ಟಡ ಉರುಳಿಸಿ ಸಾವಿರಾರು ಜನರ ಸಾವಿಗೆ ಕಾರಣನಾದ ಲಾಡೆನ್ ಸಾವಿನಿಂದ ಎಲ್ಲವೂ ಕೊನೆಗೊಂಡಿದೆ ಎಂದು ನಿಟ್ಟುಸಿರು ಬಿಡುವಂತಿಲ್ಲ. ನಾಳಿನ ರಕ್ತಪಾತ, ಭಯೋತ್ಪಾದಕರ ಅಟ್ಟಹಾಸಗಳಿಗೆ ಆತನ ಸಾವು ನಾಂದಿ ಹಾಡುವ ಸೂಚನೆಗಳು ದಟ್ಟವಾಗಿದೆ. ಲಾಡೆನ್ ಸಾವಿನ ಪ್ರತಿಶೋಧಕ್ಕಾಗಿ ಪಾಕಿಸ್ತಾನ ಮತ್ತು ಅಮೆರಿಕದಲ್ಲಿ ರಕ್ತಪಾತ ನಡೆಸಲು ಪಾಕಿಸ್ತಾನಿ ತಾಲಿಬಾನಿಯರು ಮುಂದಾಗಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಆಲ್ ಖೈದಾ ನಾಯಕ ಲಾಡೆನ್ ಸಾವಿನ ಪ್ರತಿಕಾರಕ್ಕಾಗಿ ತಾಲಿಬಾನಿ ಉಗ್ರರು ಹಪಾತಪಿಸುತ್ತಿದ್ದಾರೆ. ಇವರ ಕ್ರೂರ ದೃಷ್ಟಿ ಮೊದಲು ಪಾಕಿಸ್ತಾನದ ಮೇಲೆ. ಆಮೇಲೆ ಅಮೆರಿಕದ ಮೇಲೆ ಬೀಳಲಿದೆ. ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಆಲಿ ಜರ್ದಾರಿ ಸೇರಿದಂತೆ ಹಲವು ಬಲಿ ತೆಗೆದುಕೊಳ್ಳಲು ಉಗ್ರರು ನಿರ್ಧರಿಸಿದ್ದಾರೆ. ಪಾಕಿಸ್ತಾನದ ಸೇನಾ ಮತ್ತು ರಾಜಕೀಯ ನಾಯಕರೇ ಭಯೋತ್ಪದಕರಿಗೆ ಮೊದಲ ಟಾರ್ಗೆಟ್ ಎಂದು ವರದಿ ಹೇಳಿದೆ.

ಒಸಾಮಾ ಬಿನ್ ಲಾಡೆನ್ ಕೊಲೆ ಮಾಡಿರುವುದಕ್ಕೆ ಅಮೆರಿಕಕ್ಕೆ ತಕ್ಕಶಾಸ್ತ್ರಿ ಮಾಡಲು ಉಗ್ರಗಾಮಿಗಳು ನಿರ್ಧರಿಸಿದ್ದರಂತೆ. ರಾಯಿಟರ್ಸ್ ಪತ್ರಿಕಾ ಕಚೇರಿಗೆ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ)ಯ ವಕ್ತಾರನೊಬ್ಬ ಕರೆ ಮಾಡಿದ್ದಾನೆ. "ಈಗ ಪಾಕಿಸ್ತಾನಿ ಆಡಳಿತಗಾರರು, ಅಧ್ಯಕ್ಷ ಜರ್ದಾರಿ ನಮ್ಮ ಮೊದಲ ಟಾರ್ಗೆಟ್. ಅಮೆರಿಕದ ವಿನಾಶ ನಮ್ಮ ಮುಂದಿನ ಗುರಿ" ಎಂದು ಎಚ್ಚರಿಸಿದ್ದಾನೆ. ಹೀಗಾಗಿ ಲಾಡೆನ್ ಸಾವು ಇನ್ನಷ್ಟು ಭಯೋತ್ಪಾದಕ ಘಟನೆಗಳಿಗೆ ಹವಿಸ್ಸಾಗಲಿದೆ ಎನ್ನಲಾಗಿದೆ.

English summary
As feared, the worst might just not have got over with the death of terror lynchpin Osama bin Laden, it may just mark the beginning of a new era of violence and bloodshed. It is a foregone conclusion that the brutal faces of terrorism will grow even more vindictive and try to avenge the death of Laden and the signs of that are coming thick and first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X