ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.30ರಿಂದ ನಾಲ್ಕಾಣೆಗೆ ಕವಡೆ ಕಾಸಿನ ಕಿಮ್ಮತ್ತೂ ಇರಲ್ಲ

By Rajendra
|
Google Oneindia Kannada News

Exchange 25 paise coins before June 29
ಬೆಂಗಳೂರು, ಮೇ.5: ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ಹೊರತಂದಿರುವ 25 ಪೈಸೆ, 20 ಪೈಸೆ, 10 ಪೈಸೆ ಹಾಗೂ 5 ಪೈಸೆ ನಾಣ್ಯಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. ನಾಣ್ಯ ನಿಯಮ 1906 ಪ್ರಕರಣ 15 'ಎ' ಪ್ರಕಾರ ಈ ನಾಣ್ಯಗಳನ್ನು ಜೂನ್ 29ರಿಂದ ಆರ್‌ಬಿಐ ಹಿಂಪಡೆಯಲಿದೆ.

ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 25 ಪೈಸೆ ಹಾಗೂ ಅದಕ್ಕಿಂತಲೂ ಕಡಿಮೆ ಮೌಲ್ಯದ ನಾಣ್ಯಗಳನ್ನು ಹಿಂಪಡೆಯಲು ಸೂಚಸಲಾಗಿದೆ ಎಂದು ಆರ್‌ಬಿಐನ ಪ್ರಾದೇಶಿಕ ನಿರ್ದೇಶಕ ಪಿ ವಿಜಯಭಾಸ್ಕರ್ ತಿಳಿಸಿದ್ದಾರೆ. ಸಾರ್ವಜನಿಕರು ತಮ್ಮ ಬಳಿ ಎಷ್ಟೇ ನಾಣ್ಯಗಳಿದ್ದರೂ ಅವನ್ನು ಹಿಂತಿರುಗಿಸಿ ಅಷ್ಟೇ ಮೌಲ್ಯದ ಹಣವನ್ನು ಪಡೆಯಬಹುದು. ಜೂನ್ 30ರಿಂದ 25 ಪೈಸೆ ಹಾಗೂ ಅದಕ್ಕಿಂತಲೂ ಕಡಿಮೆ ಮೌಲ್ಯದ ನಾಣ್ಯಗಳು ಚಲಾವಣೆ ಆಗುವುದಿಲ್ಲ ಎಂದು ತಿಳಿಸಲಾಗಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ 268 ಕರೆನ್ಸಿ ಕೇಂದ್ರಗಳಿವೆ. ನಾಣ್ಯಗಳನ್ನು ಹಿಂಪಡೆಯಲು ಎಲ್ಲಾ ವಾಣಿಜ್ಯ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಆರ್‌ಬಿಐನ ಎಲ್ಲಾ ನೀಡಿಕೆ ಕಚೇರಿಗಳಲ್ಲಿ ಹಾಗೂ ಎಸ್‌ಬಿಐ, ಎಸ್‌ಬಿಎಂ, ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್ ಸೇರಿದಂತೆ 45 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಣ ವಿನಿಮಯ ಮಾಡಿಕೊಳ್ಳಬಹುದು. ತಮಗೆ ಸಮೀಪದವಾಣಿಜ್ಯ ಬ್ಯಾಂಕುಗಳಲ್ಲಿ ಗ್ರಾಮೀಣ ಪ್ರದೇಶದ ಜನರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ.

English summary
Reserve Bank of India (RBI) will take coins of 25 paise or less in exchange for their face value during working hours till June 29, RBI Regional Director P Vijaya Bhaskar said on Wednesday. This follows the announcement that coins of denomination 25 paise or less will literally lose their value from June 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X