• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಮಂಗಳಮುಖಿಯಿಂದ 50 ಲಕ್ಷ ರು. ದರೊಡೆ

By Prasad
|

ಪಂಚಕುಳ, ಮೇ. 04 : ಪಿಸ್ತೂಲು, ಖಡ್ಗ, ಬೇಸ್ ಬಾಲ್ ಬ್ಯಾಟ್ ಮತ್ತು ಹಾಕಿ ಸ್ಟಿಕ್ ಹಿಡಿದಿದ್ದ 12 ದರೊಡೆಕೋರರ ತಂಡ 10 ಮಂಗಳಮುಖಿಯರಿಂದ 50 ಲಕ್ಷ ರು. ನಗದು ಮತ್ತು 800 ಗ್ರಾಂ ಚಿನ್ನವನ್ನು ದರೊಡೆ ಮಾಡಿದ ಘಟನೆ ಹರ್ಯಾಣಾದ ಪಂಚಕುಳ ಜಿಲ್ಲೆಯ ಕಲ್ಕ ಎಂಬಲ್ಲಿ ನಡೆದಿದೆ. ಈ ಮಂಗಳಮುಖಿಯರ ತಂಡದ ನಾಯಕಿ ಸ್ವೀಟಿ ಬೆಂಗಳೂರಿನಿಂದ ಆಗಷ್ಟೇ ವಾಪಸ್ ಬಂದಾಗ ಈ ಘಟನೆ ನಡೆದಿದೆ.

ಮುಖವಾಡ ತೊಟ್ಟುಕೊಂಡಿದ್ದ ದರೊಡೆಕೋರರ ತಂಡ ಎಂಟಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಹತ್ತಿ ಎರಡಂತಸ್ತಿನ ಮನೆಯನ್ನು ಪ್ರವೇಶಿಸಿದ್ದಾರೆ. ಮಂಗಳಮುಖಿಯರನ್ನು ಒಂದು ಕೋಣೆಯಲ್ಲಿ 1 ಗಂಟೆ ಕಾಲ ಕೂಡಿಹಾಕಿ ಬ್ಯಾಂಕ್ ಲಾಕರಲ್ಲಿ ಇಡಬೇಕಾಗಿದ್ದ ನಗದು ಮತ್ತು ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದರೂ, ಬೆಂಗಳೂರಿನ ಸ್ವೀಟಿ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ದೂರು ದಾಖಲಿಸಲಾಗಿದ್ದು, ಪಂಚಕುಳ ಎಸ್ ಪಿ ಮನೀಶ್ ಚೌಧರಿ ಎಲ್ಲ ಮಂಗಳಮುಖಿಯರಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಸ್ಥಳಕ್ಕೆ ದಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಹಿಜಡಾಗಳ ಬಳಿ ಇಷ್ಟೊಂದು ಹಣ ಮತ್ತು ಆಭರಣಗಳು ಎಲ್ಲಿಂದ ಬಂತು ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಏ.6 ಅಕ್ಷಯ ತೃತೀಯಾ. ಚಿನ್ನ ಕೊಳ್ಳಲು ಶುಭಸಮಯ. ಇಂಥ ಸಮಯದಲ್ಲೇ ದರೊಡೆಕೋರರು ಚಿನ್ನದ ಲೂಟಿ ಹೊಡೆದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Eunuchs were looted by 12 robbers in Panchakula, Haryana, Eunuchs leader Sweety is from Bangalore. Thugs run away with the bounty 50 lakhs rupees and 800 gms gold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more