ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳಗಂಗೋತ್ರಿಯಲ್ಲಿ ಜಯಮಾಲ ಮತ್ತು ಕಾಪಿಕಾಡ್

By * ಶಶಾಂಕ, ಮಂಗಳಗಂಗೋತ್ರಿ
|
Google Oneindia Kannada News

Jayamala
ಮಂಗಳೂರು, ಮೇ 04: ಮಂಗಳಗಂಗೋತ್ರಿಯಲ್ಲಿ ಸ್ನಾತಕೋತ್ತರ ವಿಭಾಗಗಳ ನಡುವೆ ನಿನ್ನೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಚಿತ್ರ ನಟಿ ಜಯಮಾಲ ಉದ್ಘಾಟಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನಟಿ ಜಯಮಾಲ ಅವರು "ಮುದ್ದು ಮಕ್ಕಳೇ" ಎಂದು ಪ್ರೀತಿಯಿಂದ ಕರೆದರು. ಅದಕ್ಕೆ ಪ್ರತಿಯಾಗಿ ಎಂಬಂತೆ ಕಾರ್ಯಕ್ರಮ ನಿರೂಪಕಿ ಜಯಮಾಲ ಅವರನ್ನು "ಕ್ವೀನ್ ಆಫ್ ಸ್ಯಾಂಡಲ್ ವುಡ್" ಎಂದು ಕರೆದರು.

ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಮಂಗಳ ಗಂಗೋತ್ರಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದಿದೆ. ಇಲ್ಲಿ ಕಲಿಯುವ ನೀವು ಮತ್ತು ಇಂತಹ ಯುನಿವರ್ಸಿಟಿ ಪಡೆದ ಮಂಗಳೂರಿಗರು ನಿಜಕ್ಕೂ ಧನ್ಯರು ಎಂದು ಜಯಮಾಲ ಹೇಳಿದ್ದಾರೆ. "ಇಲ್ಲಿಂದ ಶಿಕ್ಷಣ ಮುಗಿಸಿ ಹೊರಹೋಗುವ ವಿದ್ಯಾರ್ಥಿಗಳಿಗೆ ಹಣಗಳಿಸೋ ಆಸೆಯೇ ಪ್ರಮುಖವಾಗಬಾರದು. ದೇಶ ಮತ್ತು ಸಮಾಜ ಸೇವೆ ಮಾಡುವ ಮನಸ್ಸು ನಿಮ್ಮದಾಗಲಿ" ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಂಗಳಗಂಗೋತ್ರಿಯ ಉಪ ಕುಲಪತಿ ಟಿ ಎಸ್ ಶಿವಶಂಕರ ಮೂರ್ತಿ ತುಳು ನಟ ಮತ್ತು ನಿರ್ದೇಶಕ ದೇವಿದಾಸ್ ಕಾಪಿಕಾಡ್ ಅವರನ್ನು ಸನ್ಮಾನಿಸಿದರು. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕಾಪಿಕಾಡ್ ತುಳುವಿನಲ್ಲಿ ಮಾತನಾಡಿದರು. ಜೊತೆಗೆ ಕನ್ನಡ ಸಿನಿಮಾ ಗೀತೆಯೊಂದನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ಮಂಗಳಗಂಗೋತ್ರಿಯ ರಿಜಿಸ್ಟರ್ ಆಗಿರುವ ಕೆ ಚಿನ್ನಪ್ಪ ಗೌಡ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಎ. ಎಂ. ಎ ಖಾದರ್ ಸ್ವಾಗತಿಸಿದರು.

English summary
Kannada film actor Jaimala inaugurate “Moments” an inter-departmental cultural festival of students in Mangalagangotri campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X