ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡೆನ್ ಹತ್ಯೆ : ಮೈಸೂರು ಅರಮನೆಗೆ ಪ್ರವೇಶ ನಿಷೇಧ

By Prasad
|
Google Oneindia Kannada News

Mysore Palace
ಬೆಂಗಳೂರು, ಮೇ. 03 : ಒಸಾಮಾ ಬಿನ್ ಲಾಡೆನ್ ಹತನಾಗಿರುವ ಹಿನ್ನೆಲೆಯಲ್ಲಿ ಅಲ್ ಖೈದಾದಿಂದ ದಾಳಿಗಳಾಗುವ ಸಂಭವನೀಯತೆ ಇರುವುದರಿಂದ ಮೈಸೂರಿನ ಅರಮನೆ, ಐಟಿ ಕಂಪನಿಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ರಾಜ್ಯ ಸರಕಾರ ಆದೇಶ ನೀಡಿದೆ. ಕೇಂದ್ರ ಗುಪ್ತಚರ ದಳ ಕೂಡ ಕಚ್ಚೆಚ್ಚರ ವಹಿಸುವಂತೆ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅರಮನೆ ಸುತ್ತ ಸಂಸತ್ತಿಗೆ ಒದಗಿಸಿರುವ ಭದ್ರತೆಯ ಮಾದರಿಯಲ್ಲಿ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ. ಜೊತೆಗೆ ಮೈಸೂರು ಮತ್ತು ಸುತ್ತಮುತ್ತಲು ಇರುವ ಪ್ರೇಕ್ಷಣೀಯ ಸ್ಥಳಗಳ ಮೇಲೂ ನಿಗಾ ವಹಿಸುವಂತೆ ಆದೇಶ ನೀಡಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕರು ಕೂಡ ತಣ್ಣಗೆ ಮನೆಯಲ್ಲಿ ಉಳಿಯುವುದು ಮೇಲು.

ಬೆಂಗಳೂರಿನಲ್ಲಿರುವ ಅಮೆರಿಕ ಮೂಲದ ಕಂಪನಿಗಳಿಗೆ ಹೆಚ್ಚಿನ ಭದ್ರತೆ ವಹಿಸಲು ಮುಖ್ಯಮಂತ್ರಿ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಐಟಿ ಸಿಟಿಯಲ್ಲಿಯೇ ಐಬಿಎಂ, ಮೈಕ್ರೊಸಾಫ್ಟ್ ಸೇರಿದಂತೆ 50ಕ್ಕೂ ಹೆಚ್ಚು ಅಮೆರಿಕದ ಸಾಫ್ಟ್ ವೇರ್ ಮತ್ತಿತರ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಮೈಸೂರಿನಲ್ಲಿ ಕೂಡ ಅನೇಕ ಐಟಿ ಕಂಪನಿಗಳು ಬೀಡುಬಿಟ್ಟಿವೆ.

English summary
Tight security has been provided to Mysore palace following death of terrorist Osama Bin Laden. Chief Minister BS Yeddyurappa has ordered security cover for American companies in Bangalore. The center too has sounded a nation-wide alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X