ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌತ್ ಕೋರಿಯಾ ಗೂಗಲ್ ಕಚೇರಿ ಮೇಲೆ ಪೊಲೀಸ್ ದಾಳಿ

By Srinath
|
Google Oneindia Kannada News

Google's Korea Office
ಸೋಲ್, ಮೇ 3: ತನ್ನ ಗ್ರಾಹಕರ ಕುರಿತು ಅನಧಿಕೃತವಾಗಿ ಮಾಹಿತಿ ಸಂಗ್ರಹಿಸುತ್ತಿದೆ ಎಂಬ ಅನುಮಾನದ ಮೇಲೆ ದಕ್ಷಿಣ ಕೊರಿಯಾದ ಸೈಬರ್ ಕ್ರೈಂ ಪೊಲೀಸರು ಇಲ್ಲಿನ ಗೂಗಲ್ ಕಚೇರಿ ಮೇಲೆ ಮಂಗಳವಾರ ದಾಳಿ ನಡೆಸಿದ್ದಾರೆ.

ಗೂಗಲ್ ಸಂಗ್ರಹಿಸಿರುವ ಮಾಹಿತಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಗೂಗಲ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗೂಗಲ್ ಸಂಗ್ರಹಿರುವ ಮಾಹಿತಿ ಎಂತಹುದು, ಎಷ್ಟೆಲ್ಲ ಮಾಹಿತಿ ಸಂಗ್ರಹಿಸಲಾಗಿದೆ ಎಂಬುದನ್ನು ಪರಿಶೀಲನೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಐಫೋನ್ ಮತ್ತು ಆಂಡ್ರ್ಯಾಡ್ ಸ್ಮಾರ್ಟ್ ಫೋನ್ ಬಳಕೆದಾರರು ಇಂಟರ್ ನೆಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ.

ಆಸ್ಟ್ರೇಲಿಯಾ, ಜರ್ಮನಿ, ಅಮೆರಿಕದಲ್ಲೂ ಸೈಬರ್ ಕ್ರೈಂ ಪೊಲೀಸರು ಈ ಹಿಂದೆ ಇಂತಹುದೇ ದಾಳಿಗಳನ್ನು ನಡೆಸಿದ್ದಾರೆ. ಗ್ರಾಹಕರ ಖಾಸಗಿ ಮಾಹಿತಿ ಮತ್ತು ಅದರ ಗೌಪ್ಯತೆಯನ್ನು ಗೂಗಲ್ ನಂತಹ ಖಾಸಗಿ ಕಂಪನಿಗಳು ನಿರ್ವಹಿಸುವುದು ಎಷ್ಟು ಸಮಂಜಸ ಮತ್ತು ಅವು ಎಷ್ಟು ಸಮರ್ಥ ಎಂಬುದರ ಬಗ್ಗೆ ಸರಕಾರಗಳು ತಲೆಕೆಡಿಸಿಕೊಳ್ಳಲಾರಂಭಿಸಿವೆ.

English summary
South Korean police raided Google's Seoul office on Tuesday, on suspicion the internet search giant illegally collected data from users. They believe the company may have collected information about users' location without proper consent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X