ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರು : ಅಡುಗೆ ಮಾಡದ ಹೆಂಡತಿಯ ಕೊಲೆಗೈದ ಗಂಡ
ಕುಡಿದ ಅಮಲಿನಲ್ಲಿದ್ದ ಗಂಡ ಡೊಮಿನಿಕ್ ತನ್ನ ಹೆಂಡತಿ 48ರ ಹರೆಯದ ಫಿಲೋಮಿನಾ ಅಡುಗೆ ಮಾಡಲಿಲ್ಲವೆಂಬ ಕಾರಣಕ್ಕೆ ಜಗಳ ತೆಗೆದಿದ್ದಾನೆ. ಸಿಟ್ಟಿನ ಭರದಲ್ಲಿ ವಿವೇಚನೆ ಕಳೆದುಕೊಂಡು ಚಾಕುವಿನಿಂದ ಬಾರಿ ಬಾರಿ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದ ಫಿಲೋಮಿನಾ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಡೊಮಿನಿಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನೆರೆಹೊರೆಯವರಿಗೂ ಗಂಡ ಹೆಂಡತಿಯರಿಬ್ಬರೂ ಜಗಳವಾಡಿದ್ದು, ನಂತರ ಫಿಲೋಮಿನಾಳ ಚೀತ್ಕಾರ ಕೇಳಿಸಿದ್ದರಿಂದ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಫಿಲೋಮಿನಾಳ ಪ್ರಾಣಪಕ್ಷಿ ಅಷ್ಟರಲ್ಲಾಗಲೇ ಹಾರಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು, ಮಗ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದಾನೆ. ಮಗಳು ಹೈಸ್ಕೂಲಿನಲ್ಲಿ ಓದುತ್ತಿದ್ದಾಳೆ.
Comments
English summary
Husband murders wife, in fiftees, for not cooking the lunch in Abbigere in Bangalore. The husband who was inabriated has been arrested.
Story first published: Monday, May 2, 2011, 16:26 [IST]