ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ದಲಿತರಿಂದ ಕ್ಷೌರಿಕರಿಗೆ ಬಹಿಷ್ಕಾರ!

|
Google Oneindia Kannada News

hair cutting
ತುಮಕೂರು, ಮೇ 2 : ಈ ಗ್ರಾಮದ ಕ್ಷೌರಿಕರು ದಲಿತರ ಕ್ಷೌರ ಮಾಡಲು ನಿರಾಕರಿಸುತ್ತಿದ್ದರು ಅಥವಾ ಅವರ ಹೇರ್ ಕಟ್ಟಿಂಗ್ ಗಾಗಿ ಪ್ರತ್ಯೇಕ ಕತ್ತರಿ ಬಳಸುತ್ತಿದ್ದರು. ಊರಿನ ಕ್ಷೌರಿಕರ ಈ ತಾರತಮ್ಯಕ್ಕೆ ಆ ಊರಿನ ದಲಿತರು ನೊಂದರು. ಹಾಗಂತ ಅವರು ಪ್ರತಿಭಟಿಸುವ ಗೋಜಿಗೆ ಹೋಗಲಿಲ್ಲ. ತಾವೇ ಕತ್ತರಿ ಕನ್ನಡಿ ಹಿಡಿದುಕೊಂಡು ಕ್ಷೌರಿಕ ವೃತ್ತಿ ಕಲಿತು ಸ್ವಂತ ಸಲೂನ್ ಆರಂಭಿಸಿದರು. ಜೊತೆಗೆ ಕ್ಷೌರಿಕರಿಗೆ ಬಹಿಷ್ಕಾರ ಹಾಕಿದರು.

ಇಂತಹ ಘಟನೆ ನಡೆದಿರುವುದು ತುಮಕೂರು ಜಿಲ್ಲೆಯ ಬಿಸಿಲೆಹಳ್ಳಿ ಎಂಬಲ್ಲಿ. ಈಗ ದಲಿತರು ತಮ್ಮ ಕೇರಿಯಲ್ಲಿ ತಮ್ಮದೇ ಸಲೂನ್ ಆರಂಭಿಸಿದ್ದಾರೆ. ಜೊತೆಗೆ ಆ ಊರಿನ ಕ್ಷೌರಿಕರಿಗೆ ಬಹಿಷ್ಕಾರವನ್ನು ಹಾಕಿದ್ದಾರೆ. ಈಗ ಅಲ್ಲಿನ ಯಾವ ದಲಿತರು ಆ ಕ್ಷೌರಿಕರ ಬಳಿ ಹೋಗುತ್ತಿಲ್ಲವಂತೆ.

ಓದಲು ಮರೆಯದಿರಿ : ಹಜಾಮತ್ ಸೆ ಹಜಾಮತ್ ತಕ್!

ದಲಿತರ ಪ್ರಾಬಲ್ಯ ಹೆಚ್ಚಿರುವ ಬಿಸಿಲೆಹಳ್ಳಿಯಲ್ಲಿ ಹೆಚ್ಚಿನವರು ಓದು ಬರಹ ಬಲ್ಲವರಾಗಿದ್ದಾರೆ. ಕೆಲವರು ಸರಕಾರಿ ಉದ್ಯೋಗದಲ್ಲಿದ್ದರೆ, ಇನ್ನು ಕೆಲವರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. "ನಮ್ಮ ಹೇರ್ ಕಟ್ಟಿಂಗ್ ನಿರಾಕರಿಸುವುದು, ಪ್ರತ್ಯೇಕ ಕತ್ತರಿ ಬಳಸುವುದು ನಮಗೆ ಅಪಮಾನ ಉಂಟುಮಾಡುತ್ತಿತ್ತು. ಇದಕ್ಕಾಗಿ ನಮ್ಮ ಊರಿನಲ್ಲಿ ನಾವೇ ಸ್ವತಃ ಸಲೂನ್ ಆರಂಭಿಸಲು ನಿರ್ಧರಿಸಿದ್ದೇವು" ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳುತ್ತಾರೆ.

"ನಾವೀಗ ವಿವಿಧ ಸ್ಟೈಲ್ ಹೆರ್ ಡ್ರೆಸ್ ಮಾಡೋದನ್ನು ಕಲಿಯುತ್ತಿದ್ದೇವೆ. ನಾವು ವೃತ್ತಿಪರ ಕ್ಷೌರಿಕರೊಂದಿಗೆ ಪೈಪೋಟಿ ನಡೆಸಲು ಸಿದ್ಧರಾಗಿದ್ದೇವೆ" ಎಂದು ದಲಿತರ ಕೇರಿಯಲ್ಲಿ ಕ್ಷೌರಿಕ ವೃತ್ತಿ ಆರಂಭಿಸಿರುವರೊಬ್ಬರು ಹೇಳುತ್ತಾರೆ. "ಈ ಕುರಿತು ತನಗೆ ಮಾಹಿತಿ ಇಲ್ಲ. ಆದರೆ ಈ ಕುರಿತು ಪರಿಶೀಲಿಸಿ ಜಾತಿಭೇದ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ" ತುಮಕೂರು ಡೆಪ್ಯೂಟಿ ಕಮಿಷನರ್ ಸೋಮಶೇಖರ್ ಹೇಳುತ್ತಾರೆ.

English summary
The barbers in the Dalit-dominated Bisilehalli(Tumkur) village refused to cut their hair as they were dalits. Dalits took this as a challenge and decided not to visit the village saloons. And they started their own saloons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X