• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈಎಸ್‌ಆರ್ ಶೈಲಿಯಲ್ಲಿಅರುಣಾಚಲ ಸಿಎಂ ನಾಪತ್ತೆ

By Rajendra
|

ಇಟಾನಗರ, ಮೇ.1: ಅರುಣಾಚಲ ಪ್ರದೇಶದ ಸಿಎಂ ದೋರ್ಜಿ ಖಂಡು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದ್ದು 24 ಗಂಟೆ ಕಳೆದರೂ ಇನ್ನೂ ಸುಳಿವು ಸಿಕ್ಕಿಲ್ಲ. ಈ ಘಟನೆಯು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರ ಹೆಲಿಕಾಪ್ಟರ್ ನಾಪತ್ತೆ ಪ್ರಕರಣವನ್ನು ನೆನಪಿಸುತ್ತಿದೆ. ಹವಾಮಾನ ವೈಫರೀತ್ಯದಿಂದ ಶೋಧ ಕಾರ್ಯಕ್ಕೂ ಅಡ್ಡಿಯುಂಟಾಗಿದೆ. 30 ಸೇನಾ ತುಕಡಿಗಳಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಶನಿವಾರ ಬೆಳಗ್ಗೆ 9.56ಕ್ಕೆ ತವಾಂಗ್ ಬಿಟ್ಟ ಖಂಡು ಪ್ರಯಾಣಿಸುತ್ತಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ 11.30ಕ್ಕೆ ಇಟಾನಗರದಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ತವಾಂಗ್ ಬಿಟ್ಟ 20 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡ ಹೆಲಿಕಾಪ್ಟರ್ ಇದುವರೆಗೂ ಪತ್ತೆಯಾಗಿಲ್ಲ. ಮತ್ತೊಂದೆಡೆ ಖಂಡು ಅವರು ಸುರಕ್ಷಿತವಾಗಿದ್ದಾರಾ ಎಂಬ ಆತಂಕ ವ್ಯಕ್ತವಾಗಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್‌ಆರ್ ಅವರ ದುರಂತ ಅಂತ್ಯ ಇನ್ನೂ ಕಣ್ಮುಂದೆ ಇರಬೇಕಾದರೆ ಖಂಡು ನಾಪತ್ತೆಯಾಗಿರುವುದು ತೀವ್ರ ದುಗುಡಕ್ಕೆ ಎಡೆ ಮಾಡಿಕೊಟ್ಟಿದೆ. ಕಾಪ್ಟರ್‌ನಲ್ಲಿ ಸಿಎಂ ದೋರ್ಜಿ ಖಂಡು, ಅವರ ಸಹೋದರಿ ಹಾಗೂ ತವಾಂಗ್ ಶಾಸಕಿ ತ್ಸವೋಂಗ್ ಧೋಂಪಡ್, ಕ್ಯಾಪ್ಟನ್ ಜೆ ಎಸ್ ಬಬ್ಬರ್, ಕ್ಯಾಪ್ಟನ್ ಕೆ ಎಸ್ ಮಾಲಿಖ್, ಖಂಡು ಅವರ ಭದ್ರತಾಕಾರಿ ಯಶಿ ಛೋಂಡಕ್ ಮತ್ತು ಯೇಶಿ ಲಮು ಪ್ರಯಾಣಿಸುತ್ತಿದ್ದರು.

English summary
As mystery continues over the missing chopper of Arunachal Pradesh Chief Minister Dorjee Khandu, an all-out search operation is on to locate it.The Euro-copter AS350 BR, operated by Pawan Hans, was carrying Khandu, his security officer deputy superintendent of police Yeshi Choddak, the sister of Tawang MLA Tsewang Dhondup, Yeshi Lamu and the two pilots, Captain B. S. Babbar and Captain K S Malick.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more