ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಇಇಇ ಪ್ರಶ್ನೆ ಪತ್ರಿಕೆ ಬಯಲು; ನಾಲ್ವರ ಬಂಧನ

By Rajendra
|
Google Oneindia Kannada News

AIEEE exam delayed
ಹೈದರಾಬಾದ್, ಮೇ.1: ಎಐಇಇಇ (ಅಖಿಲ ಭಾರತ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ) ಪಶ್ನೆಪತ್ರಿಕೆ ಬಹಿರಂಗವಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಲೆ ಬೀಸಿದ್ದು, ಉತ್ತರ ಪ್ರದೇಶದ ಕಾನ್ಪುರದ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಪ್ರಶ್ನೆಪತ್ರಿಕೆ ಲೀಕ್ ಆದ ಕಾರಣ ಪರೀಕ್ಷೆಗಳು ಎರಡುವರೆ ಗಂಟೆಗಳ ಕಾಲ ಮುಂದೂಡಲಾಗಿತ್ತು.

ದೇಶದಾದ್ಯಂತ ಭಾನುವಾರ (ಮೇ.1) ಎಐಇಇಇ ನಡೆಯುತ್ತಿದೆ. ಈ ಪರೀಕ್ಷೆಯನ್ನು ಎಲ್ಲ ರಾಜ್ಯಗಳಿಂದ 115 ಲಕ್ಷ ಮಂದಿ ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಬಹಿರಂಗವಾದ ಕಾರಣ ಪರೀಕ್ಷೆಯನ್ನು ಮುಂದೂಡಿದ್ದಾಗಿ ಮೂಲಗಳು ತಿಳಿಸಿವೆ.ಆದರೆ ಪರೀಕ್ಷೆಯನ್ನು ಯಾಕೆ ಮುಂದೂಡಲಾಗಿದೆ ಎಂಬ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಯಾವುದೇ ಪ್ರಕಟನೆ ಹೊರಡಿಸಿಲ್ಲ.

ಎಐಇಇಇ ಪೇಪರ್ 1 ಪ್ರಶ್ನೆಪತ್ರಿಕೆ ಬಯಲಾದ ಕಾರಣ ಪರೀಕ್ಷೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಬೆಳಗ್ಗೆ 9.30ಕ್ಕೆ ಇದ್ದ ಪರೀಕ್ಷೆಯನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. ಮಧ್ಯಾಹ್ನ 2ಕ್ಕೆ ನಡೆಯಬೇಕಾಗಿದ್ದ ಎಐಇಇಇ ಪೇಪರ್ 2 ಪರೀಕ್ಷೆಯನ್ನು ಸಂಜೆ 4ಕ್ಕೆ ಮುಂದೂಡಲಾಗಿದೆ.

English summary
The All India Engineering Entrance Examination (AIEEE), which was scheduled to be held on Sunday, May 1 from 9:30 am, has been delayed by three hours. More than 12 lakh students have appeared for this exam all over the country on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X