ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿಯಲ್ಲಿ ಕೃಷ್ಣದೇವರಾಯ ಕಾಲದ ನಿಧಿ ಪತ್ತೆ!

By * ರೋಹಿಣಿ ಬಳ್ಳಾರಿ
|
Google Oneindia Kannada News

Vijaya Vittala temple (pic : templesofkarnataka.com)
ಬಳ್ಳಾರಿ, ಏ. 30 : ಹಂಪೆಯ ವಿಜಯವಿಠ್ಠಲ ದೇವಸ್ಥಾನದ ಬಳಿ ಕುಡಿಯುವ ನೀರಿನ ಟ್ಯಾಂಕ್ ಕೂಡಿಸಲು ಶನಿವಾರ ಬೆಳಗ್ಗೆ ಕುಣಿ ತೋಡುತ್ತಿದ್ದಾಗ ದಾನಪತ್ರದ ಮಾದರಿಯ ಬಂಗಾರದ ತಗಡು ಸೇರಿ 14 ಬಂಗಾರದ ಚೂರುಗಳು ಸಿಕ್ಕಿವೆ. ಈ ತಗಡು ವಿಜನಗರ ಸಾಮ್ರಾಜ್ಯದ ಅಧಿಪತಿ ಶ್ರೀಕೃಷ್ಣದೇವರಾಯ ಅವರ ಆಡಳಿತಾವಧಿಯಲ್ಲಿ ದಾನವಾಗಿ ನೀಡಿದ್ದ ಪತ್ರ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಅಧಿಕಾರಿಗಳು ಇವನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಸಂಶೋಧನೆ ನಡೆಸುತ್ತಿದ್ದಾರೆ.

ವಿಜಯವಿಠ್ಠಲ ದೇವಸ್ಥಾನದ ಟಿಕೆಟ್ ಕೌಂಟರ್ ಪಕ್ಕದಲ್ಲಿ ಒಂದು ಕುಡಿಯುವ ನೀರಿನ ಟ್ಯಾಂಕ್ ಇದೆ. ಈ ಟ್ಯಾಂಕ್ ಪಕ್ಕದಲ್ಲೇ ಮತ್ತೊಂದು ಟ್ಯಾಂಕ್ ಇರಿಸಲಿಕ್ಕಾಗಿ ಒಂದರಿಂದ ಒಂದೂವರೆ ಅಡಿ ಆಳದ ಕುಣಿಯನ್ನು ತೋಡಿದಾಗ ಈ ತಗಡು ಮತ್ತು ಚಿನ್ನದ ಚೂರುಗಳು ಕುಡಿಕೆಯಲ್ಲಿ ಕಾಣಿಸಿಕೊಂಡಿವೆ.

ಈ ದೇವಸ್ಥಾನದ ಸುತ್ತಲೂ ಇರುವ ಮಂಟಪಗಳು ಭಾಗಶಃ ಶಿಥಿಲಾವಸ್ಥೆಯಲ್ಲಿ ಇದ್ದ ಕಾರಣ ಅವುಗಳ ನವೀಕರಣ ಕಾರ್ಯ ಭರದಿಂದ ಸಾಗಿತ್ತು. ಅಲ್ಲದೇ, ಸಮೀಪದ ವಿಷ್ಣು ಮಂಟಪ (ವಿಷ್ಣು ದೇವಸ್ಥಾನ)ದ ನವೀಕರಣ ಕಾರ್ಯ ಇತ್ತೀಚೆಗೆ ಮುಗಿದಿತ್ತು. ಈ ಹಿನ್ನೆಲೆಯಲ್ಲಿ 100-150 ಮೀಟರ್ ವ್ಯಾಪ್ತಿಯಲ್ಲಿ ಇರುವ ಸಾಲುಮಂಟಪಗಳ ಆಸುಪಾಸಿನಲ್ಲಿ ನವೀಕರಣ ಕಾರ್ಯ ಕೂಡ ನಡೆದಿದೆ.

ಈ ಸಂದರ್ಭದಲ್ಲಿ ಸುತ್ತಲಿನ ಮಣ್ಣಿನ ಪ್ರಮಾಣ ಕಡಿಮೆಯಾಗಿ ರಸ್ತೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭೂಮಟ್ಟವನ್ನು ಸಮತಟ್ಟುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಈ ಚಿನ್ನದ ತಗಡು ಮತ್ತು ಚೂರುಗಳು ಕಾಣಿಸಿಕೊಂಡಿದೆ. ಐತಿಹಾಸಿಕ ಮಹತ್ವವಿರುವ ಈ ವಸ್ತುಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಹೆಚ್ಚಿನ ಉತ್ಖನನ ನಡೆಯಲಿದೆ ಎಂದು ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Treasure has been found at Vijaya Vittala temple in Hampi, suspected to be belonging to Sri Krishnadevaraya era, who was king of Vijayanagar. A golden sheet and some golden items were excavated beside the temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X