ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಮಾಣಿಕರಿಂದಲೂ ಭ್ರಷ್ಟರಿಗೆ ಮನ್ನಣೆ: ಗುಹಾ

|
Google Oneindia Kannada News

ಬೆಂಗಳೂರು: ನಿನ್ನೆ ನಗರದಲ್ಲಿ ನಡೆದ 'ದಿ ಕಾರವಾನ್" ರಾಜಕೀಯ ಸಾಂಸ್ಕೃತಿಕ ಆಂಗ್ಲ ಪತ್ರಿಕೆಯು ನಡೆಸಿದ 'ಭಾರತೀಯ ಪ್ರಜಾಪ್ರಭುತ್ವ 2011: ಚುನಾವಣೆ, ಹಗರಣ ಮತ್ತು ರಾಜಕೀಯ ಪಕ್ಷಗಳು" ಎಂಬ ಸಂವಾದ ನಡೆಯಿತು. ಇದರಲ್ಲಿ ಮನಮೋಹನ್ ಸಿಂಗ್ ಪ್ರಾಮಾಣಿಕ ಎಂದು ಅನಂತಮೂರ್ತಿ ಅಭಿಪ್ರಾಯವ್ಯಕ್ತಪಡಿಸಿದರೆ, ಇತಿಹಾಸ ತಜ್ಞ ರಾಮಚಂದ್ರ ಗುಹಾ ಇದನ್ನು ನಯವಾಗಿ ತಿರಸ್ಕರಿಸಿದರು.

ಸಿಂಗ್ ಪ್ರಾಮಾಣಿಕರೇ?: ಸಂವಾದದಲ್ಲಿ ಯುಆರ್ ಅನಂತಮೂರ್ತಿಯವರು "ಪ್ರಾಮಾಣಿಕ ವ್ಯಕ್ತಿಗಳು ಕೂಡ ಭ್ರಷ್ಟಚಾರದೊಳಗೆ ಸಿಲುಕಿಕೊಳ್ಳುತ್ತಾರೆ" ಎಂಬ ವಾದವನ್ನು ಮುಂದಿಟ್ಟು ಮನಮೋಹನ್ ಸಿಂಗ್ ಅವರ ಉದಾಹರಣೆ ನೀಡಿದರು. ಭಾರತದಲ್ಲಿ ಮನಮೋಹನ್ ಸಿಂಗ್ ಒಬ್ಬರ ಪ್ರಾಮಾಣಿಕ ವ್ಯಕ್ತಿ ಎಂದು ಉದಾಹರಿಸಿದರು.

ಅದಕ್ಕೆ ರಾಮಚಂದ್ರ ಗುಹಾ "ದೇಶದ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಅವರು ಪ್ರಾಮಾಣಿಕ ವ್ಯಕ್ತಿ ಹೌದು. ಆದರೆ ಅವರು ತಮ್ಮ ಸುತ್ತ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಅರಿವಿಲ್ಲದಂತೆ ವರ್ತಿಸುವುದು ಆತಂಕದ ಸಂಗತಿಯಾಗಿದೆ" ಎಂದು ಟಾಂಗ್ ನೀಡಿದರು. "ಸಿಂಗ್ ಅವರು ಪರೋಕ್ಷವಾಗಿ ಪ್ರಾಮಾಣಿಕರಾಗಿದ್ದುಕೊಂಡೇ ಭ್ರಷ್ಟಾಚಾರಕ್ಕೆ ಮನ್ನಣೆ ನೀಡುತ್ತಿದ್ದಾರೆ. ಕಳೆದ 7 ವರ್ಷಗಳ ನಾಯಕತ್ವದಲ್ಲಿ ಸಿಂಗ್ ಹಲವು ತಪ್ಪುಗಳನ್ನು ಮಾಡಿದ್ದಾರೆ" ಎಂದರು.

ಭ್ರಷ್ಟರ ಲೋಕ: ಆದರ್ಶ ರಾಜ್ಯ ಪರಿಕಲ್ಪನೆಯು ಕೇವಲ ಕಲ್ಪನೆಯಲ್ಲಿಯೇ ಉಳಿಯುವ ಆತಂಕವನ್ನು ಅನಂತಮೂರ್ತಿ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. "ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯ, ಖಾಸಗಿ ವಲಯ ಮತ್ತು ನಾಗರಿಕ ಸಮಾಜ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯಾಂಗದ ಕಾರ್ಯವ್ಯಖರಿ ಹಾಳಾಗಲು ಖಾಸಗಿ ವಲಯದ ಭ್ರಷ್ಟಚಾರ ಕಾರಣವಾಗಿದೆ. ಆಗ ನಾಗರಿಕ ಸಮಾಜವು ಮಾಹಿತಿ ಹಕ್ಕು ಮತ್ತು ಆಂದೋಲನಗಳನ್ನು ನಡೆಸಿ ಪ್ರತಿಭಟನೆ ವ್ಯಕ್ತಪಡಿಸುತ್ತವೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಕ್ಷಣಿಕ ಅನಿಸಿದರೂ ಅದೊಂದು ಮಹತ್ವದ್ದಾಗಿದೆ ಮತ್ತು ದೇಶದ ಯುವಕರನ್ನು ಬಡಿದೆಬ್ಬಿಸಿದೆ. ಇವರ ಈ ಆಂದೋಲನವು ಗಾಂಧಿ, ಲೋಹಿಯಾ, ನೆಹರು ಅವರ ಆದರ್ಶಗಳನ್ನು ಇನ್ನೂ ಜೀವಂತವಾಗಿಟ್ಟಿದೆ" ಎಂದು ಅನಂತ್ ಮೂರ್ತಿ ಹೇಳಿದ್ದಾರೆ.

ಕಪ್ಪು ಹಣದ ಕೈವಾಡ:
"ಈಗ ಬೃಹತ್ ಮಟ್ಟದ ಧಾರ್ಮಿಕ ಕ್ಷೇತ್ರಗಳು, ಕೆಲವು ಧರ್ಮಗುರುಗಳು, ದೊಡ್ಡ ಬಜೆಟ್ ನ ಸಿನಿಮಾಗಳ ಹಿಂದೆ ಕಪ್ಪು ಹಣ ಕೆಲಸ ಮಾಡುವುದು ದುರಾದೃಷ್ಟಕರ ಸಂಗತಿ" ಎಂದರು. ಪಕ್ಷಗಳೆಲ್ಲ ಅಭಿವೃದ್ಧಿ ಮಾತನಾಡುತ್ತಿವೆ. ಆದರೆ ಆದಿ ವಾಸಿಗಳ ಬದುಕನ್ನು ನಾಶ ಮಾಡುತ್ತಿವೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

"ದೇಶದಲ್ಲಿ ಸರಳ ಚುನಾವಣೆ ನಡೆಯುವುದು ಅಸಾಧ್ಯವಾಗಿದೆ. ರಾಜಕೀಯ ಪಕ್ಷಗಳು ಕಪ್ಪು ಹಣವನ್ನು ಬಳಸಿ ಓಟ್ ರಾಜಕೀಯ ಮಾಡುತ್ತಿವೆ" ಎಂದು ಮೂರ್ತಿ ವಿಶಾದಿಸಿದ್ದಾರೆ. "ರಾಜ್ ಕುಮಾರ್ ಸಾವಿನ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳಿಗೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಅಶಾಂತ ಮತ್ತು ನಿರುದ್ಯೋಗಿ ಮನಸ್ಥಿತಿಯ ಯುವಕರು ಕಾರಣ" ಎಂದರು.

English summary
UR Ananthamurthy said "even the intensely honest are forced into inevitable corruption, referred to Manmohan Singh as one of the most honest men in India". Historian and writer Ramachandra Guha opposed Ananthamurthy observation and said "Singh's complicity in the wrongdoing by former telecom minister A Raja and some of his other ministers".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X