ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಬಳಕೆ ಅನಿಲ ಸಿಲಿಂಡರ್ ಸಂಖ್ಯೆ ಇಳಿಕೆಗೆ ಚಿಂತನೆ

By Srinath
|
Google Oneindia Kannada News

LPG rates
ನವದೆಹಲಿ, ಏ.29: ಕೇಂದ್ರ ಸರಕಾರ ಇತ್ತೀಚೆಗೆ ಪೆಟ್ರೋಲ್ ದರ ನಿಯಂತ್ರಣ ಮುಕ್ತಗೊಳಿಸಿ ಸಬ್ಸಿಡಿ ರಾದ್ಧಾಂತದಿಂದ ಕೈ ತೊಳೆದುಕೊಂಡಿತ್ತು. ಗಾಬರಿಯ ವಿಷಯವೆಂದರೆ ಇದೀಗ ಅಡುಗೆ ಅನಿಲದ ಬೆಲೆಯನ್ನೂ ತನ್ನ ನಿಯಂತ್ರಣದಿಂದ ಮುಕ್ತಗೊಳಿಸಲು ಸಜ್ಜಾಗಿದೆ. ತನ್ಮೂಲಕ ಅನಿಲ ಸಬ್ಸಿಡಿ ರಗಳೆಯೂ ತನಗೆ ಬೇಡ ಎಂಬುದು ಸರಕಾರದ ಚಿಂತನೆ. ಈ ಮಧ್ಯೆ ಗ್ರಾಹಕನ ಪರಿಸ್ಥಿತಿ ಆ ಭಗವಂತನಿಗೇ ಪ್ರೀತಿ.

ಸರಕಾರದ ಹೊಸ ಆಲೋಚನೆಯಿಂದ ಸಾಮಾನ್ಯ ಗೃಹ ಬಳಕೆ ವೆಚ್ಚ ಜನರ ಪಾಲಿಗೆ ಈಗಿರುವ ಬೆಲೆಗಿಂತಲೂ ಅರ್ಧದಷ್ಟು ದುಬಾರಿಯಾಗಲಿದೆ. ಪ್ರಸ್ತುತ ಕೇಂಧ್ರ ಸರಕಾರ ಪ್ರತಿ ಸಿಲಿಂಡರ್ ಗೆ ಭಾರಿ ಸಬ್ಸಿಡಿ ನೀಡುತ್ತಿದೆ. ಗ್ಯಾಸ್ ಸಿಲಿಂಡರ್ ದರ ಮುಕ್ತ ಮಾರುಕಟ್ಟೆಯಲ್ಲಿ 650-700 ರುಪಾಯಿಯಿದೆ. ಸರಕಾದರ ಸಬ್ಸಿಡಿಯಿಂದ ಜನರಿಗೆ ಇದು 350-370 ರುಪಾಯಿ ದರದಲ್ಲಿ ಲಭ್ಯವಾಗುತ್ತಿದೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕ 22 ಸಾವಿರ ಕೋಟಿ ರು. ಹೊರೆಯಾಗಿದೆ.

ಈ ಹೊರೆಯಿಂದ ಹಗುರವಾಗಲು ಬಯಸಿರುವ ಸರಕಾರ ಸಬ್ಸಿಡಿ ವಾಪಸ್ ತೆಗೆದುಕೊಳ್ಳುವುದಿಲ್ಲವಾದರೂ ಸಬ್ಸಿಡಿ ದರದಲ್ಲಿ ಮನೆಗಳಿಗೆ ವಿತರಿಸುತ್ತಿರುವ ಸಿಲಿಂಡರ್ ಗಳ ಸಂಖ್ಯೆಯನ್ನು ಇಳಿಸಲು ಚಿಂತಿಸುತ್ತಿದೆ. ಇದೇ ಜನಸಾಮಾನ್ಯರ ಚಿಂತೆಯನ್ನು ಹೆಚ್ಚಿಸಿರುವುದು. ಇದುವರೆಗೆ ಪ್ರತಿ ಸಂಪರ್ಕಕ್ಕೆ ಎಷ್ಟು ಬೇಕಾದರೂ (ಸರಾಸರಿ 8-10) ಸಬ್ಸಿಡಿ ದರದ ಸಿಲಿಂಡರ್ ಗಳಿಗೆ ಜನ ಆರ್ಡರ್ ಮಾಡಬಹುದಿತ್ತು.

ಆದರೆ ಇನ್ನು ಮುಂದೆ ವರ್ಷಕ್ಕೆ ಕೇವಲ ನಾಲ್ಕು ಸಿಲಿಂಡರ್ ಮಾತ್ರ ವಿತರಿಸಲಿದೆ. ಅಲ್ಲಿಗೆ ಜನರಿಗೆ ಅಗತ್ಯವಾಗುವ ಉಳಿದ ನಾಲ್ಕಾರು ಸಿಲಿಂಡರ್ ಗಳ ಖರೀದಿ ಹೇಗೆ ಎಂಬುದು ಪ್ರಶ್ನೆ. ಅದನ್ನು ಸಬ್ಸಿಡಿ ಇಲ್ಲದ ದರದಲ್ಲಿ ಖರೀದಿಸಿ ಎನ್ನುತ್ತಿದೆ ಸರಕಾರ. ಅಲ್ಲಿಗೆ ಅಡುಗೆ ಅನಿಲದ ದರ ಅರ್ಧಕ್ಕರ್ಧ ದುಬಾರಿ.

English summary
After decontroling that is freeing of petrol and diesel prices to the markets now central government wants to reduce the number of subsidised LPG cylinders supply to 4-5 per annum just to be free from the burden of subsidy. But it will be a much burden to common man who is using 8-10 cylinders annually.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X