ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿಯಲ್ಲಿ ಲಘು ಭೂಕಂಪ; ಪ್ರಮಾಣ ಎಷ್ಟು ಗೊತ್ತಿಲ್ಲ

By Srinath
|
Google Oneindia Kannada News

Madikeri town
ಮಡಿಕೇರಿ, ಏ.27: ನಗರದಲ್ಲಿ ಬುಧವಾರ ಬೆಳಗ್ಗೆ 10.55ಕ್ಕೆ ಲಘು ಭೂಕಂಪವಾಗಿದೆ. ತಕ್ಷಣಕ್ಕೆ ಯಾವುದೇ ಸಾವುನೋವು ವರದಿಯಾಗಿಲ್ಲ. ನಗರದ ನ್ಯೂ ಎಕ್ಸ್ ಟೆನ್ಷನ್, ತ್ಯಾಗರಾಜ ನಗರ, ಕರಣಂಗೇರಿ ಬಡಾವಣೆಗಳಲ್ಲಿ ಭೂಮಿ ಕಂಪಿಸಿದ ವರದಿ ಬಂದಿದೆ.

ಘಟನೆಯಿಂದ ಜನ ಕಂಗಾಲುಗೊಂಡು, ಮನೆಗಳಿಂದ ಹೊರಬಂದಿದ್ದಾರೆ. ಅಬ್ಬಿಫಾಲ್ಸ್ ಮಾರ್ಗದಲ್ಲಿ ಭೂಕಂಪದ ಪ್ರಭಾವ ಹೆಚ್ಚಾಗಿ ಕಂಡುಬಂದಿದೆ. ಹತ್ತಾರು ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಪಾತ್ರೆಗಳು ನೆಲಕ್ಕುರುಳಿವೆ.

ಕೊಡಗು ಜಿಲ್ಲೆಯ ಈ ಭಾಗದಲ್ಲಿ ಭೂಕಂಪದ ಪ್ರಮಾಣ ಅಳೆಯುವ ಸಾಧನ-ಸೌಲಭ್ಯಗಳು ಇಲ್ಲದ ಕಾರಣ ತಕ್ಷಣಕ್ಕೆ ಭೂಕಂಪದ ಪ್ರಮಾಣ ತಿಳಿದುಬಂದಿಲ್ಲ.

English summary
A moderate earth Quake struck Madikeri town in Karnataka today morning (April 27). There were no reports on casualties or damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X