ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕ್ ಭಾರತೀಯರ ಖಾತೆ ವಿಕಿಲೀಕ್ಸ್ ಕೈಗೆ

By Mahesh
|
Google Oneindia Kannada News

Wikileaks on Indian Swiss Bank account
ನವದೆಹಲಿ, ಏ.26: ಭ್ರಷ್ಟಾಚಾರ, ಕಪ್ಪುಹಣದ ವಿರುದ್ಧ ಸಮರ ಸಾರಿರುವ ಮಾಹಿತಿ ಸ್ಫೋಟಕ ವೆಬ್ ಸೈಟ್ ಸ್ಥಾಪಕ ಜುಲಿಯನ್ ಅಸ್ಸಾಂಜ್ ಕೈಗೆ ಸ್ವಿಸ್ ಬ್ಯಾಂಕ್ ಖಾತೆದಾರರ ವಿವರಗಳು ಸಿಕ್ಕಿದೆ. ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಇಟ್ಟಿರುವ ಭಾರತೀಯರ ಹೆಸರನ್ನು ಬಹಿರಂಗಪಡಿಸಲು ಭಾರತದ ಸರ್ಕಾರವೇ ಅಡ್ಡಿಪಡಿಸುತ್ತಿದೆ ಎಂದು ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆಯಂತೆ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ಹೂಡಿಕೆ ಮಾಡಿರುವವರಲ್ಲಿ ಭಾರತೀಯರ ಸಂಖ್ಯೆಯೇ ಅಧಿಕ ಎಂದು ಅಸ್ಸಾಂಜ್ ಹೇಳಿದ್ದಾರೆ.

ಕಪ್ಪು ಹಣವನ್ನ ಪತ್ತೆ ಹಚ್ಚಿ, ಭಾರತಕ್ಕೆ ವಾಪಾಸ್ ತರಲು ಎಲ್ಲಾ ರೀತಿಯ ಅವಕಾಶಗಳಿವೆ ಆದರೆ ಈ ಬಗ್ಗೆ ಯುಪಿಎ ಸರ್ಕಾರದ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಭ್ರಷ್ಟಾಚಾರ ತೊಲಗಿಲು ಜರ್ಮನ್ನರಂತೆ ಭಾರತ ಸರ್ಕಾರ ಕೂಡಾ ಧೈರ್ಯವಾಗಿ ಮುನ್ನುಗ್ಗಬೇಕಿದೆ. ನಮ್ಮಲ್ಲಿರುವ ಮಾಹಿತಿ ಬಹಿರಂಗಪಡಿಸುವಂತೆ ಅನಾಮಧೇಯ ವ್ಯಕ್ತಿಗಳಿಂದ ಭಾರಿ ಆಫರ್ ಗಳು ಸಹ ಬಂದಿತ್ತು.

ನಮಗೆ ಈ ಮಾಹಿತಿಯಿಂದ ಲಾಭ ಮಾಡುವ ಉದ್ದೇಶವಿಲ್ಲ. ಯಾವುದೇ ಸಮಯದಲ್ಲಿ ಬೇಕಾದರೂ ಇದನ್ನು ಸಾರ್ವಜನಿಕರಿಗೆ ಸಿಗುವಂತೆ ಬಹಿರಂಗಪಡಿಸಲಾಗುವುದು. ಇದನ್ನು ಯಾರೂ ಅಡ್ಡಿಪಡಿಸಲಾಗದು ಎಂದು ಜುಲಿಯನ್ ಹೇಳಿದರು. ಸಾಮಾನ್ಯವಾಗಿ ಅನಾಮಧೇಯ ವ್ಯಕ್ತಿಗಳಿಂದ ನಮ್ಮ ಮಾಹಿತಿಗಳು ಸಂಗ್ರಹ ಮಾಡಲಾಗುತ್ತದೆ. ಈ ಬಾರಿ ನಮಗಿಂತ ಮುಂಚೆ ಎಲಮೋರ್ ಮತ್ತು ಅವರ ವಕೀಲರ ತಂಡ ಸ್ವಿಸ್ ಬ್ಯಾಂಕ್ ಖಾತೆ ಮಾಹಿತಿಯನ್ನು ಹೊರಗೆಳೆದು, ಬಂಧನಕ್ಕೊಳಗಾಗಿದೆ. ನಮಗೂ ಎಲ್ಮೋರ್ ತಂಡಕ್ಕೂ ಏನೂ ಸಂಬಂಧವಿಲ್ಲ ಎಂದಿದ್ದಾರೆ.

ಪಾಕಿಸ್ತಾನದ ಐಎಎಸ್ ಐ ಭಯೋತ್ಪಾದಕ ಸಂಘಟನೆ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದ ವಿಕಿಲೀಕ್ಸ್ ಇಂದು ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಖಾತೆಗಳ ಸುದ್ದಿ ಹೊರಗೆಡವಿದೆ. ವಿಕಿಲೀಕ್ಸ್ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಯುಪಿಎಯನ್ನು ಉರುಳಿಸುವ ಕನಸು ಕಾಣುತ್ತಿವೆ.

English summary
WikiLeaks founder Julian Assange today the Indian names in the Swiss bank data list that are going to be made public. But Indian Government is not willing to leak the corrupt persons data into public.India should be more aggressive in approach like Germany in unearthing black money he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X