ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುರೇಶ್ ಕಲ್ಮಾಡಿ ಮೇಲೆ ಬಿತ್ತು ಚಪ್ಲಿ ಏಟು !

By Srinath
|
Google Oneindia Kannada News

Suresh Kalmadi
ಹೊಸದಿಲ್ಲಿ, ಏ. 26: ಸುರೇಶ್ ಕಲ್ಮಾಡಿಯನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಮಧ್ಯಪ್ರದೇಶದ ಕಪಿಲ್ ಠಾಕೂರ್ ಎಂಬ ನ್ಯಾಯವಾದಿಯೊಬ್ಬರು ಚಪ್ಪಲಿ ಎಸೆದು ತನ್ನ ಆಕ್ರೋಶ ಹೊರಹಾಕಿದ್ದಾನೆ. ತನ್ನತ್ತ ಚಪ್ಪಲಿ ಎಸೆದಿದ್ದರೂ ಏನೂ ಆಗಿಯೇ ಇಲ್ಲವೆಂಬಂತೆ 66 ವರ್ಷ ವಯಸ್ಸಿನ ಕಲ್ಮಾಡಿ ನಸುನಗುತ್ತಲೇ ಬಿರಬಿರನೆ ನ್ಯಾಯಾಲಯದತ್ತ ಹೆಜ್ಜೆಹಾಕಿದರು. [ಯಾರ್ಯಾರ ಮೇಲೆ ಚಪ್ಪಲಿ ಬಿದ್ದಿದೆ]

ಭಾರಿ ಭ್ರಷ್ಟಾಚಾರದ ಚಕ್ರಸುಳಿಗೆ ಸಿಕ್ಕಿ ನಿನ್ನೆಯಷ್ಟೇ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರೂ ಇನ್ನೂ ಕಾಮನ್ ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿರುವ ಸುರೇಶ್ ಕಲ್ಮಾಡಿಯನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪಟಿಯಾಲಾ ಹೌಸ್ ಕೋರ್ಟ್ ಗೆ ಮಂಗಳವಾರ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಪೊಲೀಸರ ಗುಂಪಿನಲ್ಲಿ ಹೋಗುತ್ತಿದ್ದ ಕಲ್ಮಾಡಿಯನ್ನು ಹಿಂದಿನಿಂದ ಅಟ್ಟಿಸಿಕೊಂಡು ಹೋಗಿ ಕಪಿಲ್ ತನ್ನ ಚಪ್ಪಲಿಯನ್ನು ಎಸೆದಿದ್ದಾನೆ. ಕಪಿಲ್ ನನ್ನು ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡಿದ್ದಾರೆ.

ಹಾಸ್ಯ : 'ಉಡುಗೊರೆ'ಯಾಗಿ ಬಂದ ಚಪ್ಪಲಿಗೆ ಮ್ಯೂಸಿಯಂ!

ಅಣ್ಣಾ ಹಜಾರೆ ಇತ್ತೀಚೆಗಷ್ಟೆ ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿ ಇಡೀ ದೇಶವನ್ನು ಬಡಿದೆಬ್ಬಿಸಿದ್ದಾರೆ. ಈ ಘಟನೆಯಿಂದ ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯನ ಸಹನೆ ಕಟ್ಟೆಯೊಡೆದಿರುವುದು ಸಾಬೀತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಪ್ಪಲಿ ಸೇವೆ ಮಾಡಿಸಿಕೊಂಡ ಯಡಿಯೂರಪ್ಪ, ಆಡ್ವಾಣಿ, ನಿತ್ಯಾನಂದ, ಚಿದಂಬರಂ, ಒಮರ್ ಅಬ್ದುಲ್ಲಾ, ಜಾರ್ಜ್ ಬುಷ್, ಮುಷರ್ರಫ್ ಮುಂತಾದವರ ಸಾಲಿಗೆ ಕಲ್ಮಾಡಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

English summary
Kapil Thakur, a lawyer by profession threw the slipper at 66-year-old Kalmadi, the Common Wealth Game organising committee chairman, as he was brought to the Patiala House Court in New Delhi on Tuesday (April 26)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X