ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಪ್ರಗತಿಗೆ ಮೋದಿಯೇ ಕಾರಣ

By Srinath
|
Google Oneindia Kannada News

narendra modi
ರಾಜ್ ಕೋಟಾ, ಏ. 26: ಗೋಧ್ರಾ ಹತ್ಯಾಕಾಂಡದಂತಹ ಆರೋಪಗಳು ಆಗಾಗ ಕಾಲಿಗೆ ತೊಡರಿಕೊಳ್ಳುತ್ತಿದ್ದರೂ ವಿಚಲಿತರಾಗದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಪಾಡಿಗೆ ತಾವು ರಾಜ್ಯದ ಅಭಿವರ್ಧನೆಯಲ್ಲಿ ನಿರತರಾಗಿದ್ದಾರೆ. ಸ್ವತಃ ಅವರೇ ಇದನ್ನು ಹೇಳಿದ್ದು, ಕಳೆದ ಐವತ್ತು ವರ್ಷಗಳಲ್ಲಿ ನಡೆಯದ ಅಭಿವೃದ್ಧಿ ಕಾರ್ಯಗಳು 10 ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ನಡೆದಿದೆ ಎಂದಿದ್ದಾರೆ.

'ಹಿಂದಿನ ಸರಕಾರಗಳಿಗಿಂತಲೂ ತಮ್ಮ ಸರಕಾರ ರಾಜ್ಯ ಅಭಿವೃದ್ಧಿಗೆ ಹೆಚ್ಚು ನೀರೆರೆದಿದೆ. 1960ರಲ್ಲಿ ಗುಜರಾತ್ ಪ್ರತ್ಯೇಕಗೊಂಡು, ಸ್ವತಂತ್ರ ರಾಜ್ಯವಾದಾಗ ಚೊಚ್ಚಲ ಬಜೆಟ್ ನಲ್ಲಿ ನೀರಾವರಿಗೆ ಕೇವಲ ಏಳು ಕೋಟಿ ರು. ತೆಗೆದಿರಿಸಲಾಗಿತ್ತು. ಆದರೆ ಕಳೆದ ಬಜೆಟ್ ನಲ್ಲಿ ನೀರಾವರಿಗಾಗಿ ತಾವು ತೆಗೆದಿರಿಸಿರುವ ಮೊತ್ತ ಅಂದಿನ ಅಷ್ಟೂ ಬಜೆಟ್ ಮೊತ್ತಕ್ಕಿಂತ ಅಧಿಕವಾಗಿದೆ. ಅಂದರೆ ಜೀವ ಜಲಕ್ಕೆ ತಮ್ಮ ಸರಕಾರ ಅಷ್ಟೊಂದು ಮಹತ್ವ ನೀಡಿದೆ ' ಎಂದು 'ಜಲ ಶಕ್ತಿ ಸಮ್ಮೇಳನ' ವೇಳೆ ಮೋದಿ ವಿವರಿಸಿದರು.

ಸೋಜಿಗದ ಸಂಗತಿಯೆಂದರೆ ಮಹಾತ್ಮಾ ಗಾಂಧಿ ಮತ್ತು ಅವರ ಕುಟುಂಬದವರು ನೀರಿನ ಬಗ್ಗೆ ತುಂಬಾ ಕಾಳಜಿ ಹೊಂದಿದ್ದರು. ಪೋರಬಂದರಿನಲ್ಲಿರುವ ಮನೆಯಲ್ಲಿ ಜಲ ಸಂಗ್ರಹಣೆ ವ್ಯವಸ್ಥೆಯನ್ನು ಅವರು ಹೊಂದಿದ್ದರು. ನಾಡಿನ ಜನ ಜಲ ಮೌಲ್ಯವನ್ನು ಅರಿತು, ಜಲ ಸಂರಕ್ಷಣೆಯಲ್ಲಿ ತೊಡಗಬೇಕಾಗಿದೆ. ಧರೋನಿ ಪಟ್ಟಣದಲ್ಲಿ ನೀರಾವರಿ ಹಂಚಿಕೆ ವ್ಯವಸ್ಥೆಯಲ್ಲಿ ಮಹಿಳೆಯರು ಅದ್ಭುತ ಕೆಲಸ ಮಾಡಿದ್ದಾರೆ. ಇದಕ್ಕೆ ವಿಶ್ವ ಸಂಸ್ಥೆಯ ಪ್ರಶಸ್ತಿ, ಮನ್ನಣೆಯೂ ಸಂದಿದೆ. ರಾಜ್ಯದ ಇತರೆ ಭಾಗಗಳಲ್ಲೂ ಇದನ್ನು ಅಳವಡಿಸಿಕೊಳ್ಳುವ ಇರಾದೆಯಿದೆ ಎಂದು ಮೋದಿ ಹೇಳಿದರು.

English summary
Gujarat Chief Minister Narendra Modi has claimed that his government was more concerned about development than the predecessors. He claimed that over last one decade, after he became the Chief Minister, more development work was carried out than that carried out in the preceding fifty years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X