ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೋಕಿಲಾಲಾ ಗಡಾಫಿ ಸೈನಿಕರಿಂದ ಲೈಂಗಿಕ ಹಿಂಸಾಚಾರ
ವಯಾಗ್ರಾ ಭರಿತ ಸೈನಿಕರು ವ್ಯಾಪಕವಾಗಿ ಲೈಂಗಿಕ ದೌರ್ಜನ್ಯದಲ್ಲಿ ತೊಡಗಿದ್ದಾರೆ. ಯುವತಿಯರ ಅಪಹರಣ ಅವ್ಯಾಹತವಾಗಿ ನಡೆದಿದೆ. ಮಕ್ಕಳೂ ಇದಕ್ಕೆ ಬಲಿಯಾಗುತ್ತಿದ್ದು, ಭಯಭೀತರಾಗಿದ್ದಾರೆ. ಅಪ್ಪಂದಿರನ್ನು ಸಾಯಿಸಿ, ಅವರ ತಾಯಂದಿರ ಮೇಲೆ ಮೃಗಗಳಂತೆ ಅತ್ಯಾಚಾರ ನಡೆಸುತ್ತಿದ್ದಾರೆ. ಇದಕ್ಕಾಗಿ ವಯಾಗ್ರಾ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಲಿಬಿಯಾ ದೇಶದ ಮಿಸ್ರತಾ, ಅಜ್ಡಾಬಿಯಾ ರುಸ್ಲಾನುಫ್ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
'ಚೆಕ್ ಪಾಯಿಂಟ್ ಒಂದರಲ್ಲಿ ನನ್ನನ್ನು 15 ಮಂದಿ ಸಮವಸ್ತ್ರಧಾರಿಗಳು ಅಪಹರಿಸಿದರು. ಎರಡು ದಿನಗಳ ಕಾಲ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು. ಪತ್ರಕರ್ತರಿಗೆ ಇದನ್ನು ವಿವರಿಸುವಾಗ ಮತ್ತೆ ನನ್ನನ್ನು ಬಂಧಿಸಿದರು. ನನ್ನ ಮೇಲೆ ದೇಶದ್ರೋಹದ ಆರೋಪವನ್ನೂ ಹೊರಿಸಿದರು' ಎಂದು 28 ವರ್ಷದ ಮಹಿಳೆಯೊಬ್ಬಳು ಹೇಳಿಕೊಂಡಿದ್ದಾಳೆ.
Comments
English summary
Gaddafi''s forces are carrying out widespread sexual abuse. 'Fuelled by Viagra' Forces using rape as weapon against rebel children, women.
Story first published: Tuesday, April 26, 2011, 13:21 [IST]