• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದೈತೆ ಬಾಬಾ ನಿಜವಾದ ಪವಾಡ !

By Srinath
|

ಪುಟ್ಟಪರ್ತಿ, ಏ. 25: ಪುಟ್ಟಪರ್ತಿ ಎಂಬ ಕುಗ್ರಾಮವನ್ನು ವಿಶ್ವಭೂಪಟದಲ್ಲಿ ರಾರಾಜಿಸುವಂತೆ ಮಾಡಿದ ಸಾಯಿಬಾಬಾ ಎಂಬ ಪವಾಡ ಪುರುಷನ ಪವಾಡಗಳು ಇನ್ನೂ ಮುಂದೈತೆ ನೋಡಿ ಎನ್ನುತ್ತಿದ್ದಾರೆ ಅವರ ಭಕ್ತರು. ಶಿವರಾತ್ರಿಗಳಲ್ಲಿ ಬಾಬಾ ಲಿಂಗವನ್ನು ಸೃಷ್ಟಿಸಿದ್ದು, ಕ್ಯಾನ್ಸರ್ ಗುಣಪಡಿಸಿದ್ದು, ವಿಭೂತಿ ಸೃಷ್ಟಿಸಿದ್ದು ಮುಂತಾದವನ್ನು ಬಹಳಷ್ಟು ಜನ ನಂಬದೇ ಇರಬಹುದು ಆದರೆ ಅವರ ಅಭಿಮಾನಿ ವೃಂದ ಇದಕ್ಕಿಂತ ಮಿಗಿಲಾದ ಪವಾಡಗಳನ್ನು ಮಾಡಲಿದ್ದಾರೆ ಎಂಬ ಅಪಾರ ನಿರೀಕ್ಷೆಯಲ್ಲಿದೆ.

ಬಾಬಾ ಅವರೇ ಹೇಳಿದ್ದಂತೆ ಇನ್ನೂ 10 ವರ್ಷ ಅವರು ಬದುಕಿರಬೇಕಿತ್ತು. ಅಂದರೆ ಇನ್ನೂ 10 ವರ್ಷಗಳ ಪವಾಡಗು ಬಾಕಿಯಿವೆ. ಆದ್ದರಿಂದ ತಮ್ಮ ಪುನರ್ಜನ್ಮಕ್ಕೂ ಮುನ್ನ ಬಾಕಿಯಿರುವ ಪವಾಡಗಳನ್ನು ಒಂದೊಂದಾಗಿ ಪೂರೈಸಲಿದ್ದಾರೆ. ಆನಂತರ ಪುನರ್ಜನ್ಮದಲ್ಲಿ ತಮ್ಮ ಪವಾಡಗಳನ್ನು ಮುಂದುವರಿಸಲಿದ್ದಾರೆ ಎಂಬುದು ಭಕ್ತರ ಬಲವಾದ ವಾದ.

ಸಾಯಿಬಾಬಾ ತಮ್ಮ ಉತ್ತರಾಧಿಕಾರಿ ಬಗ್ಗೆ ಕೊನೆವರೆಗೂ ಮೌನವಹಿಸಿದ್ದರು. ಏಕೆಂದರೆ ತಾವೇ ಪುನರ್ ಜನ್ಮತಾಳುವುದಾಗಿ ಹಿಂದೊಮ್ಮೆ ಘೋಷಿಸಿದ್ದರು. ತಮ್ಮ 96ನೇ ವಯಸ್ಸಿನಲ್ಲಿ ಪ್ರೇಮಸಾಯಿಯಾಗಿ ಪುನರ್ ಜನಿಸುವ ಮಾತು ನೀಡಿರುವುದು (ಸೆಪ್ಟೆಂಬರ್ 9, 1960) ಬಾಬಾ ಭಕ್ತರಿಗೆ ಸಂಜೀವಿನಿಯಾಗಿದೆ. ಜೀಸಸ್ ಕ್ರಿಸ್ಟ ಪುನರ್ಜನ್ಮ ಪಡೆದಂತೆ ಬಾಬಾ ಸಹ ನಾಳಿದ್ದು ಬುಧವಾರ ಅವರ ಪಾರ್ಥಿವ ಶರೀರ ಮಣ್ಣಿನಲ್ಲಿ ಲೀನವಾಗುತ್ತಿದ್ದಂತೆ ಮತ್ತೆ ಹುಟ್ಟಿಬರಲಿದ್ದಾರೆ ಎಂದು ನಂಬಿದ್ದಾರೆ.

ಅಲ್ಲಿಯವರೆಗೂ ಜೀವನಪರ್ಯಂತ ಮನುಕುಲಕ್ಕೆ ದುಡಿದ ಹಿರಿಯ ಚೇತನವು ಪ್ರಶಾಂತಿ ಗ್ರಾಮದಲ್ಲಿ ಚಿರಶಾಂತಿ ಹೊಂದಲಿ ಎಂದು ಭಕ್ತರೂ ಸೇರಿದಂತೆ ಎಲ್ಲರೂ ಆಶಿಸಿದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is the greatest miracle of Sathya Sai Baba yet to happen? His death has sparked fresh hopes with devotees in connection with his own predictions that he had made earlier, regarding his death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more