ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೀದಿ ನಿರ್ಮಿಸಿದ್ದ ಸಾಯಿಬಾಬಾಗೆ ಸಲಾಂ

By Mahesh
|
Google Oneindia Kannada News

ಪುಟ್ಟಪರ್ತಿ, ಏ.25 : ಕೊಳಚೆ ಪ್ರದೇಶದಂತಿದ್ದ ಪುಟ್ಟಪರ್ತಿಯನ್ನು ಇಂದು ಮೆಟ್ರೋ ಸ್ಥಿತಿಯಂತೆ ರೂಪಿಸಿ, ವಿಶ್ವ ಭೂಪಟದಲ್ಲಿ ಎದ್ದು ಕಾಣುವಂತೆ ಮಾಡಿದ ಕೀರ್ತಿ ಸತ್ಯ ಸಾಯಿಬಾಬಾರಿಗೆ ಸಲ್ಲುತ್ತದೆ. ಕೇವಲ ಮೂಲ ಸೌಕರ್ಯ ಅಭಿವೃದ್ಧಿ ಅಷ್ಟೇ ಅಲ್ಲದೆ, ಜಾತ್ಯಾತೀತರಾಗಿದ್ದ ಬಾಬಾ, ಪುಟ್ಟಪರ್ತಿಯ ಮುಸ್ಲಿಮ್ ಜನಾಂಗದ ಆರಾಧ್ಯ ದೈವವೂ ಹೌದು. ಸಾಯಿಬಾಬಾ ಸಮಾಜ ಸೇವೆ ಹಿಂದೂಗಳಿಗೆ ಮಾತ್ರ ಸೀಮಿತವಾಗದೆ, ಅವರು ಸರ್ವಧರ್ಮೀಯ ಸೇವಕರಾಗಿದ್ದರು. ಇದಕ್ಕೆ 30 ವರ್ಷಗಳ ಹಿಂದೆ ಪುಟ್ಟಪರ್ತಿಯಲ್ಲಿ ಮುಸ್ಲಿಂ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಿರುವ ಮಸೀದಿಯೇ ಸಾಕ್ಷಿ.

ಪುಟ್ಟಪರ್ತಿಯಲ್ಲಿರುವ ಜಾಮಿಯಾ ಮಸೀದಿ ನಿರ್ಮಾಣಕ್ಕಾಗಿ ಸಾಯಿಬಾಬಾರ ಇರಾನಿನ ಭಕ್ತೆಯೊಬ್ಬಳು ದೇಣಿಗೆ ನೀಡಿದ್ದಳಂತೆ. ಆಕೆ ಪುಟ್ಟಪರ್ತಿಗೆ ಬೇಟಿ ನೀಡಿದಾಗ ಅಲ್ಲಿ ಮಸೀದಿ ಇಲ್ಲದಿರುವ ಬಗ್ಗೆ ಆಕೆಯ ಗಮನಹರಿಯುತದೆ. ಆಕೆ ಸ್ವಲ್ಪ ಹಣವನ್ನು ಬಾಬಾರ ಖಾತೆಯಲ್ಲಿ ಠೇವಣಿ ಇಡುತ್ತಾಳೆ. ಅದರಂತೆ, ಸಾಯಿಬಾಬಾ ಮುಸ್ಲಿಂ ಬಾಂಧವರ ಒಂದು ಗುಂಪನ್ನು ಆಹ್ವಾನಿಸಿ ಹಣವನ್ನು ಅವರ ಕೈಗಿತ್ತು ಮಸೀದಿ ನಿರ್ಮಿಸುವಂತೆ ಕೇಳಿಕೊಂಡರು. ಆದರೆ ಅವರು ಹಣ ದುರುಪಯೋಗವಾಗಬಹುದೆಂಬ ಭಯದಿಂದ ಆ ಹಣವನ್ನು ನಿರಾಕರಿಸಿದರು ಬದಲಿಗೆ ಬಾಬಾರೇ ಮಸೀದಿ ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡರು.

ವಿಡಿಯೋಗಳು : ಶೋಕಸಾಗರದಲ್ಲಿ ಪುಟ್ಟಪರ್ತಿ | ಅಂತಿಮ ದರ್ಶನ ಪಡೆದುಬಿಡಿ |ಹಳ್ಳಿ ಹುಡ್ಗ ದೇವಮಾನವ | ಸಚಿನ್ ಶ್ರದ್ಧಾಂಜಲಿ|

ಹೀಗೆ 1978 ರಲ್ಲಿ ಮುಸ್ಲಿಂ ಭಕ್ತರಿಗಾಗಿ ಶಿವಾಲಯಮ್‌ನಲ್ಲಿ ಜಾಮಿಯಾ ಮಸೀದಿ ಸಿದ್ಧಗೊಂಡಿತು. ಕುತೂಹಲಕಾರಿ ಸಂಗತಿಯೆಂದರೆ ಶಿವಾಲಯಮ್ ಬಾಬಾರ ಹುಟ್ಟಿದ ಸ್ಥಳವಾಗಿದೆ. ಮಸೀದಿ ಉದ್ಘಾಟನಾ ಸಮಾರಂಭದಲ್ಲಿ ಹೈದ್ರಾಬಾದಿನ ಒಸ್ಮಾನಿಯ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಭಾಗವಹಿಸಿದ್ದರು. ಹಿಂದೂ ಮುಸ್ಲೀಮರು ಸೋದರ ಭಾವದಲ್ಲಿ ಬಾಳುವಂತೆ ಮಾಡಿದ ಬಾಬಾರ ನಿಜಕ್ಕೂ ಆದರ್ಶ ಪುರುಷ ಎಂದು ಮೌಲ್ವಿ ಅಬ್ದುಲ್ಲ ರಜಾಕ್ ಹೇಳುತ್ತಾರೆ.

ಆಗ 75 ಕುಟುಂಬಗಳಿದ್ದ ಮುಸ್ಲಿಮರ ಸಂಖ್ಯೆ ಇಂದು 500 ಕುಟುಂಬಗಳಿಗೆ ಹೆಚ್ಚಾಗಿದೆ. ಇದಕ್ಕೆ ಸತ್ಯಸಾಯಿಬಾಬಾರ ಧರ್ಮಸಹಿಷ್ಣುತಾ ಸೇವೆಯೇ ಕಾರಣ. ರಾಮ ಜನ್ಮ ಭೂಮಿ-ಬಾಬ್ರಿ ಮಸೀದಿ ವಿವಾದ ಸಂದರ್ಭದಲ್ಲಿ ಬಾಬಾ ತಟಸ್ಥ ನೀತಿ ಅನುಸರಿಸಿದ್ದರು.ಶಿರಡಿ ಸಾಯಿಬಾಬಾರಂತೆ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸತ್ಯ ಸಾಯಿ ಬಾಬಾ ಹೆಚ್ಚಿನ ಮಹತ್ವ ನೀಡಿದ್ದರು. ಎಲ್ಲ ಧರ್ಮ ಸಿದ್ದಾಂತಗಳಿಗೂ ಬೆಲೆ ಕೊಡಬೇಕು. ಮಾನವೀಯತೆಗೆ ಬೆಲೆ ನೀಡಬೇಕು ಎಂದು ಸಾಯಿಬಾಬಾ ಅನೇಕ ಪ್ರವಚನಗಳಲ್ಲಿ ಹೇಳಿದ್ದರು. ಇಂದು ಬಾಬಾರನ್ನು ಕಳೆದುಕೊಂಡ ಪುಟ್ಟಪರ್ತಿಯ ಮುಸ್ಲಿಂ ಸಮುದಾಯ, ಶೋಕಾಚರಣೆಯಲ್ಲಿ ಮುಳುಗಿದೆ.

English summary
More than 30 years ago when Muslims at Puttaparthi didnot had a proper mosque to pray. Sathya Sai Baba noticed this and helped Muslim community to built a Jama Masjid and integrated Hindu Muslim to live peacefully. Puttaparthi Muslims mourn and remember to Baba's Religion Harmony works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X