ಅಂಕಲ್ ಅಶ್ಲೀಲ ಚಿತ್ರಗಳನ್ನು ಹೆಚ್ಚಾಗಿ ನೋಡ್ತಾರೆ!
ಬಿಬಿಸಿ ರೇಡಿಯೊ ಕೈಗೊಂಡಿದ್ದ ಸಮೀಕ್ಷೆ ಪ್ರಕಾರ, ಒಂದು ಸಾವಿರ ಯುವ ಅಂಕಲ್ ಗಳಲ್ಲಿ ಶೇ. 25ರಷ್ಟು ಮಂದಿ ವಿಪರೀತವಾಗಿ ಲೈಂಗಿಕ ಚಿತ್ರಗಳನ್ನು (pornography) ನೋಡ್ತಾರಂತೆ. ಮೂವರಲ್ಲಿ ಒಬ್ಬರು ವಾರಕ್ಕೆ ಗಂಟೆ ಕಾಲ ಲೈಂಗಿಕ ಚಿತ್ರಗಳನ್ನು ವೀಕ್ಷಿಸುತ್ತಾರಂತೆ. ಇದರಿಂದಾಗಿ ಮಾಡಲೇಬೇಕಾದ ದೈನಂದಿನ ಕೆಲಸವನ್ನು ಮುಂದೂಡಿದ್ದಾರೆ. ಅಂದರೆ ದೈನಂದಿನ ಕೆಲಸಕ್ಕಿಂತ ಲೈಂಗಿಕ ಚಿತ್ರಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.
ಆದರೆ ಇನ್ನೂ ಕೆಲವು ಮಂದಿ ಇದ್ದಾರೆ. ಅವರು ವಾರಕ್ಕೆ 10 ಗಂಟೆ ಕಾಲ ಕಂಪ್ಯೂಟರ್ ಮುಂದೆ ಪದ್ಮಾಸನ ಹಾಕಿಕೊಂಡು ಕುಳಿರುತ್ತಾರಂತೆ. ಮನೋವೈದ್ಯರ ಪ್ರಕಾರ ಇದು ದೈಹಿಕಕ್ಕಿಂತ ಹೆಚ್ಚಾಗಿ ಮಾನಸಿಕ ಕಾಯಿಲೆಯಾಗಿದೆ. ಇವರಂತೂ ದೈನಂದಿನ ಕೆಲಸ ಒತ್ತಟ್ಟಿಗಿರಲಿ ಮೊದಲು ಚಿತ್ರ ನೋಡೋಣ ಅನ್ನೋ ಜಾತಿಯವರು.
'ಆದರೆ ಈ ಮಂದಿ (ಸೆಕ್ಸ್) ಜೀವನವನ್ನು ಎಂಜಾಯ್ ಮಾಡುವುದಿಲ್ಲ. ಸುಮ್ಮನೆ ಕಾಲಹರಣ ಮಾಡುತ್ತಿರುತ್ತಾರೆ. ಇವರಿಗೆ ಜೀವನದಲ್ಲಿ ಬೇರೇನೂ ಮಹತ್ತರವಾದುದು ಇರುವುದಿಲ್ಲ. ಇಂತಹವರು ತಮ್ಮ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಇವರು ಸಂಬಂಧಗಳ ನಡುವೆ ಸಮಸ್ಯೆಯ ಗೋಡೆಗಳನ್ನು ಎಬ್ಬಿಸಿಕೊಂಡಿರುತ್ತಾರೆ. ಜೀವನವನ್ನು ಸೆಕ್ಸ್, ಪಾರ್ನ್ ಆಚೆಗೂ ನೋಡಬೇಕಿದೆ' ಎಂದು ಮನೋವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.