ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯಿಬಾಬಾ ಸಾವು, ನಾನಾ ವ್ಯಾಖ್ಯಾನಗಳಿಗೆ ಹುಟ್ಟು

By * ರೋಹಿಣಿ
|
Google Oneindia Kannada News

Saibaba resting in peace
ಬೆಂಗಳೂರು, ಏ. 24 : ಕೋಟ್ಯಾನುಕೋಟಿ ಭಕ್ತರ ಆರಾಧ್ಯದೈವ, ದೇವಮಾನವ, ಪವಾಡ ಪುರುಷ ಭಗವಾನ್ ಶ್ರೀ ಸತ್ಯ ಸಾಯಿಬಾಬಾ ಅವರ ಸಾವು ಪುನರ್ಜನ್ಮ, ಭವಿಷ್ಯ, ನಂಬಿಕೆ ಕುರಿತ ಚರ್ಚೆಗಳಿಗೆ ಹುಟ್ಟು ನೀಡಿದೆ. ಅವರ ಸಾವು ನಾನಾ ವ್ಯಾಖ್ಯಾನಗಳು ಜೀವತಳೆಯುವಂತೆ ಮಾಡಿದೆ. ಇದೇನು ಕಾಕತೀಳೀಯವೊ, ಅಲ್ಲವೊ ಶ್ರೀಸಾಮಾನ್ಯರೇ ನಿರ್ಧರಿಸಬೇಕು.

ಮೊದಲನೆಯದಾಗಿ, ಇಂದು ಕ್ರೈಸ್ತ ಬಾಂಧವರು ಆಚರಿಸುವ ಈಸ್ಟರ್ ಹಬ್ಬ. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಮತ್ತೆ ಕಾಣಿಸಿಕೊಂಡ ದಿನ. ಅಂದರೆ, ಪುನರುತ್ಥಾನವಾದ ದಿನ. ಸಾಯಿಬಾಬಾ ಕೂಡ ಮತ್ತೆ ಅವತರಿಸುವುದಾಗಿ ಹೇಳಿದ್ದಾರೆ. ಭವಿಷ್ಯದಲ್ಲಿ ಮಂಡ್ಯದ ಸಾಯಿ ಭಕ್ತರ ಮನೆಯೊಂದರಲ್ಲಿ ಪ್ರೇಮ ಸಾಯಿಯಾಗಿ ಮರುಹುಟ್ಟು ಪಡೆಯುವುದಾಗಿ ಹೇಳಿದ್ದರು. ಬಾಬಾ ಮರುಜನ್ಮ ಪಡೆದೇ ಪಡೆಯುತ್ತಾರೆ ಎಂದು ಭಕ್ತರು ಅಪಾರವಾಗಿ ನಂಬಿದ್ದಾರೆ. ಸಾಯಿಬಾಬಾ ಮರುಜನ್ಮ ಪಡೆಯುವರೆ ಕಾಲವೇ ನಿರ್ಧರಿಸಲಿದೆ.

ಎರಡನೆಯದಾಗಿ, ದಕ್ಷಿಣ ಭಾರತ ದೊಡ್ಡ ಧಾರ್ಮಿಕ ಗುರುವೊಬ್ಬರು ಸದ್ಯದಲ್ಲಿಯೇ ಅಸ್ತಂಗತರಾಗಲಿದ್ದಾರೆ ಎಂದು ತಾಳೆಗರಿಗಳ ಮೂಲಕ ಭವಿಷ್ಯ ನುಡಿಯುವಲ್ಲಿ ಸಿದ್ಧಹಸ್ತರಾಗಿರುವ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಯಚೂರಿನಲ್ಲಿ ಇತ್ತೀಚೆಗೆ ಹೇಳಿದ್ದರು. ಅವರ ಭವಿಷ್ಯದಲ್ಲಿದ್ದ ವ್ಯಕ್ತಿ ಸಾಯಿಬಾಬಾ ಅವರಾ? ಹಾಸನ ಜಿಲ್ಲೆಯ ಹಾರೋಹಳ್ಳಿಯ ಕೋಡಿಮಠದ ಸ್ವಾಮೀಜಿಗಳೇ ಸ್ಪಷ್ಟೀಕರಣ ನೀಡಬೇಕು.

ಮೂರನೆಯದಾಗಿ, ಕೋಟಿ ಕೋಟಿ ಬಡವರ ಬಂಧುವಾಗಿ, ಶಿಕ್ಷಣ ಸಂಸ್ಥೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ, ಹಳ್ಳಿಹಳ್ಳಿಗಳಿಗೆ ನೀರು ಹರಿಯುವಂತೆ ಮಾಡಿ ಅಸಾಧಾರಣ ಸೇವೆ ಮಾಡಿ, ಪಡಾಡಗಳಿಂದಾಗಿಯೂ ಸಾಕಷ್ಟು ಹೆಸರು ಮಾಡಿದ್ದ ಬಾಬಾ ಖಂಡಿತವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಂಬಿದ್ದ ಭಕ್ತರಿಗೆ ದ್ರೋಹವಾಗಿರುವುದು. ಪವಾಡದ ನಿರೀಕ್ಷೆಯಲ್ಲಿದ್ದ ಜನರಿಗೆ ಬಾಬಾ ಸಾವನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಪುಟ್ಟಪರ್ತಿಯಲ್ಲಿ ಶೋಕದ ಸುನಾಮಿಯೇ ಅಪ್ಪಳಿಸಿದೆ. 'ವಿಧಿ' ಎನ್ನುವುದು ಎಲ್ಲವನ್ನೂ ಮೀರಿದ್ದೆ? ಈ ಕುರಿತು ಶ್ರೀಮಾನ್ಯರು ಮತ್ತು ಬುದ್ಧಿಜೀವಿಗಳು ಏನು ಹೇಳುತ್ತಾರೆ? [ಗ್ಯಾಲರಿ ನೋಡಿರಿ]

ಕರ್ನಾಟಕದಲ್ಲಿ ರಜಾ ಇಲ್ಲ : ಭಗವಾನ್ ಸತ್ಯ ಸಾಯಿಬಾಬಾ ಅವರ ನಿಧನದ ಪ್ರಯುಕ್ತ ಕರ್ನಾಟಕದಲ್ಲಿಯೂ ಎರಡು ದಿನ ಶೋಕಾಚರಣೆ ಮಾಡಲಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ರಜಾ ಇರುವುದಿಲ್ಲ ಎಂದು ಯಡಿಯೂರಪ್ಪ ಸರಕಾರ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿಯೂ ಸಾಯಿಬಾಬಾ ಅವರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಬಾಬಾ ಅವರ ಗೌರವಾರ್ಥವಾಗಿ ರಜಾ ನೀಡಲಾಗುವುದೆ ಎಂಬ ಪ್ರಶ್ನೆ ಉದ್ಭವವಾಗಿತ್ತು.

English summary
Death of Sri Sathya Saibaba, the godman, has given rise to many interpretations, discussions regarding reincarnation and prediction made by Kodihalli Swamiji that one religious leader from South India would breath last. What the common people and the intellectuals think about it?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X