• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಪ್ರಿಲ್ 27ರಂದು ಪುಟ್ಟಪರ್ತಿಯಲ್ಲಿ ಬಾಬಾ ಅಂತ್ಯಕ್ರಿಯೆ

By Srinath
|

ಪುಟ್ಟಪರ್ತಿ (ಅನಂತಪುರ), ಏ. 24: ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದ ಧಾರ್ಮಿಕ ಗುರು ಸಾಯಿ ಬಾಬಾ ಅವರ ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ (ಏಪ್ರಿಲ್ 27) ನಡೆಯಲಿದೆ. ಈ ಮಧ್ಯೆ ಸಾಯಿಬಾಬಾ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಸಾಯಿ ಕುಲವಂತ ಹಾಲ್ ಗೆ ತೆಗೆದುಕೊಂಡು ಬರಲಾಗಿದೆ.
;

ಎಲ್ಲ ಧರ್ಮಗಳಲ್ಲಿಯೂ ಅಪಾರ ಭಕ್ತರನ್ನು ಹೊಂದಿದ್ದ ಬಾಬಾ ಅವರ ಭಕ್ತರು ವಿಶ್ವವ್ಯಾಪಿಯಾಗಿದ್ದಾರೆ. ಎಲ್ಲ ಭಕ್ತರಿಗೂ ಬಾಬಾ ಅಂತಿಮ ದರ್ಶನ ಕಲ್ಪಿಸುವ ಉದ್ದೇಶದಿಂದ ಮೂರು ದಿನಗಳ ತರುವಾಯ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಬಾಬಾ ಅವರ ಪರಮಭಕ್ತೆ, ಆಂಧ್ರ ಸಚಿವೆ ಜೆ. ಗೀತಾ ರೆಡ್ಡಿ ತಿಳಿಸಿದ್ದಾರೆ.

;

ಸೋಮವಾರ ಮತ್ತು ಮಂಗಳವಾರ ಸಾಯಿ ಕುಲವಂತ ಹಾಲ್ ನಲ್ಲಿ ಬಾಬಾ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಬಾಬಾ ಜನ್ಮ ದಿನದ ವೇಳೆ ಇಲ್ಲಿಯೇ ವಿಶೇಷ ಪ್ರಾರ್ಥನೆಗಳು ನಡೆಯುತ್ತಿದ್ದವು. ಅಪಾರ ಭಕ್ತ ವೃಂದಕ್ಕೆ ಜಮಾಯಿಸಲು ಇದು ಸೂಕ್ತ ವೇದಿಕೆ. ಆದ್ದರಿಂದ ಬಾಬಾ ಅಂತಿಮ ವಿಧಿ, ವಿಧಾನಗಳೂ ಇಲ್ಲಿಯೇ ನೆರವೇರಲಿವೆ ಎಂದು ಗೀತಾ ಹೇಳಿದ್ದಾರೆ.

ಪ್ರಶಾಂತಿ ನಿಲಯದ ಆಗುಹೋಗುಗಳನ್ನು ನೋಡಿಕೊಳ್ಳುವ ಪುಟ್ಟಪರ್ತಿ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಪ್ರಕಾರ 114 ದೇಶಗಳಲ್ಲಿ ಸತ್ಯ ಸಾಯಿಬಾಬಾ ಕೇಂದ್ರಗಳಿವೆ. 178 ರಾಷ್ಟ್ರಗಳಲ್ಲಿ ಬಾಬಾ ಭಕ್ತರಿದ್ದಾರೆ. ಈಶ್ವರಮ್ಮ ಮತ್ತು ಪೆದ್ದವೆಂಕಮ್ಮ ರಾಜು ರತ್ನಾಕರಂ ದಂಪತಿಯ ಪುತ್ರನಾಗಿ ನವೆಂಬರ್ 23, 1926 ಜನಿಸಿದ ಬಾಬಾ ಅವರ ಮೂಲ ಹೆಸರು ಸರ್ಯನಾರಾಯಣ ರಾಜು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sai Baba funeral has been fixed for April 27, that is three days after the death of the 85-year-old Sai Baba. It is to facilitate devotees from far and near to have a last glimpse of Sai Baba. Sathya Sai Baba Centres are located in as many as 114 countries and followers in 178.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more