ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಯುಸಿರೆಳೆದ ಪುಟ್ಟಪರ್ತಿ ಸಾಯಿಬಾಬಾ

By Srinath
|
Google Oneindia Kannada News

ಪುಟ್ಟಪರ್ತಿ (ಅನಂತಪುರ), ಏ. 24: ಸುಮಾರು ಒಂದು ತಿಂಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ಸಾಯಿ ಬಾಬಾ (86) ಅವರು ಭಾನುವಾರ ಬೆಳಗ್ಗೆ 7.40ಕ್ಕೆ ಕೊನೆಯುಸಿರೆಳೆದಿದ್ದಾರೆ. ದೇವಮಾನವ ಸಾಯಿಬಾಬಾ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಹೃದಯ ಸ್ತಂಭನಗೊಂಡು ಸಾವನ್ನಪ್ಪಿದ್ದಾರೆ.

ಈ ಕುರಿತು ಸತ್ಯಸಾಯಿ ಬಾಬಾ ಟ್ರಸ್ಟ್ 10.10ಕ್ಕೆ ಅಧಿಕೃತ ಘೋಷಣೆ ಮಾಡಿದೆ. ಪುಟ್ಟಪರ್ತಿಯಲ್ಲಿ ಸ್ಮಶಾನ ಮೌನ ನೆಲೆಸಿದೆ. ಸಾಯಿ ಕುಲವಂತ್ ಹಾಲ್ ನಲ್ಲಿ ಸಾಯಿಬಾಬಾ ಅಂತಿಮ ದರ್ಶನಕ್ಕೆ ಇಂದು ಸಂಜೆ 6 ಗಂಟೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಾನುವಾರ, ಮಂಗಳವಾರ ಮತ್ತು ಬುಧವಾರವೂ ಭಕ್ತರಿಗಾಗಾಗಿ ಬಾಬಾ ಅಂತಿಮ ದರ್ಶನ ಇರುತ್ತದೆ.

ಸಾಯಿಬಾಬಾ ಬಂಧುಗಳು ಒಬ್ಬೊಬ್ಬರಾಗಿ ಮರಣಶಯ್ಯೆಯಲ್ಲಿರುವ ಬಾಬಾ ಅವರನ್ನು ಭೇಟಿ ಮಾಡುತ್ತಿದ್ದಾರೆ. ಬಾಬಾ ಭಕ್ತರು ದುಃಖದ ಮಡುವಿನಲ್ಲಿದ್ದಾರೆ. ಲಕ್ಷಾಂತರ ಭಕ್ತರು ಪುಟ್ಟಪರ್ತಿಯತ್ತ ಧಾವಿಸುತ್ತಿದ್ದಾರೆ. ಪುಟ್ಟಪರ್ತಿ ತುಂಬಾ ಖಾಕಿ ಪಡೆ ಗರ್ಜಿಸುತ್ತಿದೆ. ಪಟ್ಟಣದಲ್ಲಿ ಅಘೋಷಿತ ಬಂದ್ ಇದೆ. ಎಲ್ಲ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಸಮೀಪದ ಹೆಲಿಪ್ಯಾಡ್ ಗಣ್ಯ ವ್ಯಕ್ತಿಗಳ ಆಗಮನಕ್ಕಾಗಿ ಕಾಯುತ್ತಿದೆ.

ಹಲವು ದಿನಗಳಿಂದ ಬಾಬಾ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟು, ವಿಷಮಸ್ಥಿತಿ ತಲುಪಿತ್ತು. ಅವರ ಸರ್ವಾಂಗಗಳು ನಿಷ್ಕ್ರಿಯವಾಗಿದ್ದವು. ಯಾವುದೇ ಚಿಕಿತ್ಸೆಗೂ ಬಾಬಾ ಸ್ಪಂದಿಸುತ್ತಿರಲಿಲ್ಲ.

English summary
Sri Sathya Sai Baba, undergoing treatment for over three weeks at the Puttaparthi super specialty hospital has passed today at 7.30 am on April 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X