ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯಿಬಾಬಾ ಸಾವಿನ ಸುದ್ದಿಗೆ ಬಲಿಯಾದ ಭಕ್ತ

By Mahesh
|
Google Oneindia Kannada News

Sathya Sai Baba
ಪುಟ್ಟಪರ್ತಿ, ಏ. 24: ಆರಾಧ್ಯದೈವ ಪುಟ್ಟಪರ್ತಿ ಸಾಯಿಬಾಬಾ ಅವರನ್ನು ಕಳೆದುಕೊಂಡ ಭಕ್ತ ಸಮೂಹದ ಆಕ್ರಂದನ ಮುಗಿಲು ಮುಟ್ಟಿದೆ. ಅನಂತಪುರ ಜಿಲ್ಲೆಯ ಪುಟ್ಟಪರ್ತಿ ಗ್ರಾಮ ಅಕ್ಷರಶಃ ಕಂಬನಿಯಲ್ಲಿ ಮುಳುಗಿದೆ. ಎಲ್ಲೆಡೆ ಪೊಲೀಸ್ ಗಸ್ತು, ಪಹರೆ. ಈ ನಡುವೆ ಬಾಬಾ ಅವರ ಪಾರ್ಥೀವ ಶರೀರ ದರ್ಶನಕ್ಕೆ ಬರುವ ಜನರಿಗೆ ಸಕಲ ವ್ಯವಸ್ಥೆಯ ಸಿದ್ದತೆ ನಡೆದಿದೆ.

ಶೋಕಾಚರಣೆಯಲ್ಲಿ ಮುಳುಗಿರುವ ಪುಟ್ಟಪರ್ತಿಯಲ್ಲಿ ಸುಳ್ಳು ಸುದ್ದಿ ಹಬ್ಬಿ ಭಕ್ತನೊಬ್ಬ ಸಾವನ್ನಪ್ಪಿದ್ದಾನೆ. ಇಂದು ಬೆಳಗ್ಗೆ ಬಾಬಾ ಸಾವಿನ ಸುದ್ದಿ ತಿಳಿದ ಮೇಲೆ ನಾರಾಯಣಮ್ಮ ಎಂಬ ಭಕ್ತೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಇನ್ನೆರಡು ದಿನ ಬಾಬಾರ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಬೇಕಾಗುತ್ತದೆ.

ತಮಿಳುನಾಡಿನ ತಂಜಾವೂರು ಮೂಲಕದ ಭಕ್ತ ಪ್ರಶಾಂತಿಗ್ರಾಮದ ಲಾಡ್ಜ್‌ನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ. ಶುಕ್ರವಾರದಂದು ಬಾಬಾ ಅವರ ಆರೋಗ್ಯದ ವಿಷಯ ತಿಳಿಯದೆ ಒದ್ದಾಡುತ್ತಿದ್ದ ಭಕ್ತ ಸಮೂಹಕ್ಕೆ ಬಾಬಾ ಅವರ ಜೀವಂತ ಸಮಾಧಿಯಾಗಿದೆ. ಬಾಬಾ ದರ್ಶನ ಇಲ್ಲ ಸಾಧ್ಯವಿಲ್ಲ ಎಂದು ಗಾಳಿಸುದ್ದಿಯನ್ನು ಕೇಳಿಸಿಕೊಂಡ ತಾಂಜವೂರು ಮೂಲದ ಭಕ್ತ ತುಂಬಜ(52), ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆದರೆ, ಆತ ಕೌಟುಂಬಿಕ ಕಲಹದಿಂದ ಬೇಸತ್ತು ಈ ರೀತಿ ನಿರ್ಧಾರ ಕೈಗೊಂಡಿದ್ದಾನೆ. ಬಾಬಾ ಅವರ ದರ್ಶನ ಪಡೆಯಲು ಬಂದಿದ್ದ. ಆದರೆ, ಬಾಬಾ ಸಾವಿನ ಗಾಳಿ ಸುದ್ದಿ ಹರಡಿದ್ದರಿಂದ ಈತ ಸಾವನ್ನಪ್ಪಿದ್ದಾನೆ ಎನ್ನಲಾಗುವುದಿಲ್ಲ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಇದಲ್ಲದೆ, ಸುಳ್ಳು ಸುದ್ದಿಯನ್ನು ನಂಬಿ ಯಾವುದೇ ರೀತಿ ಅನಾಹುತ ಕ್ರಮಗಳನ್ನು ಕೈಗೊಳ್ಳಬೇಡಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ಪೊಲೀಸರು ರವಾನಿಸಿದ್ದಾರೆ.

English summary
Puttaparthi Sai Baba has passed today at 7.30 am on April 24. A devottee of Baba Tambuja committed suicide after hearing the hoax news on Baba's condition on Friday. Police say his suicide is nothing to do with Sai Baba's death. But today one old lady dead soon after hearing Baba's demise news today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X