ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕೃತ ಕಾಮಿ, ಕೊಲೆಗಾರನ ಹುಡುಕಾಟಕ್ಕೆ ಪೋಲಿಸರಿಗೆ ಸಹಕರಿಸಿ

|
Google Oneindia Kannada News

ವಿಕೃತ ಕಾಮಿ
ತುಮಕೂರು: ಸುಮಾರು 19 ಕೊಲೆ ಮತ್ತು ಹಲವು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಜೈಶಂಕರ್ ಎಂಬ ವಿಕೃತಕಾಮಿ, ಸೈಕೋ ಕಿಲ್ಲರ್ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ತುಮಕೂರು ಪೋಲಿಸರು ಸಾರ್ವಜನಿಕರನ್ನು ಕೇಳಿಕೊಂಡಿದ್ದಾರೆ. ಈತ ಪೋಲಿಸರ ವಶದಿಂದ ತಪ್ಪಿಸಿಕೊಂಡಿದ್ದು, ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆಗೈಯುವ ವಿಕೃತಕಾಮಿಯಾಗಿದ್ದಾನೆ.

ಇವನ ಹೆಸರು ಎಂ. ಶಂಕರ್ ಆಲಿಯಾಸ್ ಜೈಶಂಕರ್. ಸುಮಾರು 19 ಕೊಲೆ, ಅತ್ಯಾಚಾರಗಳ ಪ್ರಕರಣಗಳಲ್ಲಿ ಪೋಲಿಸರಿಗೆ ಈತ ಮೋಸ್ಟ್ ವಾಂಟೆಡ್ ವ್ಯಕ್ತಿ. ವೃತ್ತಿಯಲ್ಲಿ ಚಾಲಕನಾಗಿದ್ದ ಈತನ ಕಪ್ಪು ಬ್ಯಾಗ್ ನಲ್ಲಿ ಮಚ್ಚು ಸದಾ ಇರುತ್ತದೆ. ಹೈವೇ ಬದಿಗಳಲ್ಲಿರುವ ಒಂಟಿ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡುತ್ತಾನೆ. ಯಾರಾದರೂ ಅಡ್ಡ ಬಂದರೆ ಮುಲಾಜಿಲ್ಲದ್ದೆ ಕತ್ತರಿಸಿ ಹಾಕುತ್ತಾನೆ ಎಂದು ಪೋಲಿಸರು ಎಚ್ಚರಿಸಿದ್ದಾರೆ.

ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ತುಮಕೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ 0816-2278000 ಅವರಿಗೆ ಮಾಹಿತಿ ನೀಡಬಹುದು. ಅಥವಾ ತುಮಕೂರು ಗ್ರಾಮಾಂತರ ಸಿಪಿಐ ಓ.ಬಿ. ಕಲ್ಲೇಶಪ್ಪ ಅವರನ್ನು ಮೊಬೈಲ್-9480802931 ಮೂಲಕ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
Tumkur police search for a most wanted psycho killer and rapist. Jai Sankar was involved in 19 cases including nine cases of rape.If you get any information about him contact Tumkur District Police- 0816-2278000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X