ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತುಲಕ್ಷ್ಮಿ ಬಿಡುಗಡೆಗೆ ರಾಜ್ ಕುಮಾರ್ ಅಪಹರಣ ಪ್ರಕರಣ ಅಡ್ಡಿ

|
Google Oneindia Kannada News

Muthulakshmi jailed again
ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಪತ್ನಿಗೆ ಜೈಲಿನಿಂದ ಬಿಡುಗಡೆಯೆಂಬುದು ಮತ್ತೆ ಮರೀಚಿಕೆಯಾಗಿದೆ. ಇನ್ನೇನೂ ಎಲ್ಲಾ ಪ್ರಕರಣಗಳು ಮುಗಿದು ಮನೆ ಸೇರುವ ತವಕದಲ್ಲಿದ್ದ ಆಕೆಯ ಬಿಡುಗಡೆಗೆ ತಮಿಳು ನಾಡಿನ ಪೋಲಿಸರು ಅಡ್ಡಗಾಲು ಹಾಕಿದ್ದಾರೆ. ಡಾ. ರಾಜ್ ಕುಮಾರ್ ಅಪಹರಣ ಪ್ರಕರಣ ಇನ್ನೂ ತಮಿಳುನಾಡು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಆಕೆಯನ್ನು ಬಿಡುಗಡೆ ಮಾಡಬೇಡಿ ಎಂದು ಅಲ್ಲಿನ ಪೋಲಿಸರು ರಾಜ್ಯದ ಪೋಲಿಸರಿಗೆ ತಿಳಿಸಿದ್ದಾರೆ.

ಡಾ. ರಾಜ್ ಕುಮಾರ್ ಅಪಹರಣ ಪ್ರಕರಣ ತಮಿಳು ನಾಡು ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆಯಲ್ಲಿದೆ. ಈ ಪ್ರಕರಣದಲ್ಲೂ ಮುತ್ತುಲಕ್ಷ್ಮಿ ಅಪರಾಧಿಯಾಗಿದ್ದಾಳೆ. ಆ ವಿಚಾರಣೆ ಮುಗಿಯುವರೆಗೆ ಆಕೆಯನ್ನು ಜೈಲಿನಿಂದ ಬಿಡಬಾರದು ಎಂದು ತಮಿಳು ನಾಡು ಪೋಲಿಸರು ತಿಳಿಸಿದ್ದರು. ಹೀಗಾಗಿ ಮುತ್ತುಲಕ್ಷ್ಮಿಗೆ ಜೈಲಿನಿಂದ ಸದ್ಯ ಮುಕ್ತಿ ದೊರಕುವ ಸೂಚನೆಗಳಿಲ್ಲ.

1993ರ ಮೇ 24ರಂದು ಮಹದೇಶ್ವರ ಬೆಟ್ಟ ಠಾಣೆ ಸರಹದ್ದಿನ ರಂಗಸ್ವಾಮಿ ವಡ್ಡುವಿನಲ್ಲಿ ನಡೆದ ಆರು ಪೊಲೀಸರ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆಯ ನೆಪವೊಡ್ಡಿ ಮುತ್ತುಲಕ್ಷ್ಮಿ ಮತ್ತು ವೀರಪ್ಪನ್ ನ ಸಹಚರೆ ಪಾಪತ್ತಿ ಎಂಬುವಳನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಆ ಕ್ಷಣದಲ್ಲಿ ಭಾವುಕಳಾಗಿ "ಕೊನೆಗೂ ನನಗೆ ನ್ಯಾಯ ದಕ್ಕಿತ್ತು, ಮೆಟ್ಟೂರಿನಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮೆಟ್ಟೂರಿನಲ್ಲಿ ನೆಮ್ಮದಿಯಾಗಿ ಜೀವನ ನಡೆಸುವೆ" ಎಂದು ಮುತ್ತು ಲಕ್ಷ್ಮಿ ಹೇಳಿದ್ದಳು.

ಇದನ್ನೂ ಓದಿ: ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಇನ್ನು ಸ್ವತಂತ್ರ ಹಕ್ಕಿ

ಮುತ್ತುಲಕ್ಷ್ಮಿ ಬಿಡುಗಡೆ ನಿರೀಕ್ಷೆಯಲ್ಲಿ ಆಕೆಯ ಎರಡು ಹೆಣ್ಣುಮಕ್ಕಳು ಮತ್ತು ಸಂಬಂಧಿಕರು ಕಾರಾಗೃಹಕ್ಕೆ ತಲುಪಿದ್ದರು. ಆದರೆ ತಮಿಳು ನಾಡು ಪೋಲಿಸರ ವಿರೋಧದಿಂದ ಆಕೆಗೆ ಬಿಡುಗಡೆ ಭಾಗ್ಯ ಸದ್ಯಕ್ಕಿಲ್ಲ ಎಂದು ತಿಳಿದು ನಿರಾಶೆಗೊಂಡಿದ್ದಾರೆ.

English summary
Forest brigand late Veerappan's wife Muthulaksmi was imprisoned again due to the opposition from Tamil Nadu police. Earlier Muthulakshmi was acquitted in all the cases pending against her in Karnataka. But Rajkumar kidnapping case was still pending in a Tamil Nadu court. So the Tamil Nadu police opposed to release Muthulakshmi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X