ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಯತ್ತ ಮತ್ತೆ ಗೋಧ್ರಾ ಅಸ್ತ್ರ

By Srinath
|
Google Oneindia Kannada News

Modi
ಹೊಸದಿಲ್ಲಿ, ಏ. 22: ಗೋಧ್ರಾ ಹತ್ಯಾಕಾಂಡದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕೈವಾಡ ಇದೆಯೆಂದು ಅಂದು ರಾಜ್ಯದ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಸಂಜಯ್ ಭಟ್ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ. 2002ರ ಫೆಬ್ರವರಿ 27ರಂದು ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಯಾನೂ ಪಾಲ್ಗೊಂಡಿದ್ದರಿಂದ ಈ ವಿಷಯ ತನಗೆ ಮನವರಿಕೆಯಾಗಿದೆ ಎಂದು ಭಟ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ ಭಟ್ಟರು ಇಷ್ಟು ದಿನ ಯಾಕೆ ಮೌನವಾಗಿದ್ದರು ಎಂಬುದು ಮನವರಿಕೆಯಾಗುತ್ತಿಲ್ಲ.

ಮೋದಿ ಹೊರಡಿಸಿದ ಫರ್ಮಾನುಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಕಣ್ಮುಚ್ಚಿಕೊಂಡು ಜಾರಿಗೊಳಿಸಿದರು. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತು ಎಂದು ಅವರು ವಿವರಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ದಳದ ( SIT) ಬಗ್ಗೆ ತಮಗೆ ಯಾವುದೇ ನಂಬಿಕೆ ಇಲ್ಲದಿರುವುದರಿಂದ ನೇರವಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ಮತ್ತು ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಅವರು ಕೋರಿದ್ದಾರೆ.

ಗುಜರಾತ್‌ನ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ 31 ಮಂದಿಯನ್ನು ದೋಶಿ ಎಂದು ಸಾರಿದ್ದ ಸಬರಮತಿ ವಿಶೇಷ ನ್ಯಾಯಾಲಯ ಅವರಿಗೆಲ್ಲ ಮಾರ್ಚ್ 1ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತ್ತು. 11 ಮಂದಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿದ್ದು, 20 ಮಂದಿಗೆ ಜೀವಾವಧಿ ಶಿಕ್ಷೆಯಾಗಿದೆ.

English summary
Senior IPS officer Sanjay Bhatt, who was posted in the Intelligence Department, has filed an affidavit in the Supreme Court accusing Gujarat CM Modi of complicity in the 2002 Godhra case. Bhatt in his affidavit states that he was that he attended a meeting held at the chief minister's residence on February 27, 2002.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X