ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಟನ್ ಸಾಯಿಬಾಬಾ ಗೋಲ್ಡ್ ಬೆಂಗಳೂರಿಗೆ ತರಲಾಯಿತೇ?

By Srinath
|
Google Oneindia Kannada News

Puttaparthi Sai Baba
ಬೆಂಗಳೂರು, ಏ. 21: ಪುಟ್ಟಪರ್ತಿ ಸಾಯಿಬಾಬಾ ಆರೋಗ್ಯ ಅಯೋಮಯವಾಗಿದೆ. ಈ ಮಧ್ಯೆ, ಭಕ್ತರಲ್ಲಿ ಆತಂಕ ಮನೆಮಾಡಿದ್ದರೆ ಬಾಬಾ ಸಂಪತ್ತನ್ನು ಲೂಟಿ ಮಾಡುವ ಕಾರ್ಯ ನಿರಾಂತಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದೆ.

ಬಾಬಾ ನಿವಾಸದ ಯಜುರ್ ಮಂದಿರ ಮತ್ತು ಪ್ರಶಾಂತಿ ನಿಲಯದಿಂದ ಸುಮಾರು 1 ಟನ್ ನಷ್ಟು ಚಿನ್ನಾಭರಣವನ್ನು 2 ಲಾರಿಗಳಲ್ಲಿ ತುಂಬಿ, ಬೆಂಗಳೂರಿನ ಕಾಡುಗೋಡಿಯಲ್ಲಿರುವ 'ಬೃಂದಾವನ'ಕ್ಕೆ ಸಾಗಿಸಲಾಗಿದೆ. ಆನ್ ಲೈನ್ ಮೂಲಕ ಕೋಟ್ಯಂತರ ರುಪಾಯಿ ಹಣ ಒಂದೇ ಸಮನೆ ಡ್ರಾ ಆಗುತ್ತಿದೆ.

ವೀಡಿಯೊ: ಸಾಯಿಬಾಬಾ ಆರೋಗ್ಯ ವಿಷಮಸ್ಥಿತಿಗೆ

ಈ ಮಧ್ಯೆ, ಭಾರಿ ಪ್ರಮಾಣದ ಚಿನ್ನಾಭರಣ ಸಾಗಣೆ ಆಗಿರುವ ಮಾಹಿತಿ ಪಡೆದಿರುವ ಆಂಧ್ರ ಪೊಲೀಸ್ ಮಹಾನಿರ್ದೇಶಕರು ತಕ್ಷಣ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಪ್ರಶಾಂತಿ ನಿಲಯಂನ ಯಾವುದೇ ಚರಾಸ್ತಿ ಸಾಗಿಸದಂತೆ ಪುಟ್ಟಪರ್ತಿ ಎಸ್ಪಿ ಷಾನವಾಜ್ ಆದೇಶಿಸಿದ್ದಾರೆ.

ಮಂಗಳವಾರ ನಡುರಾತ್ರಿ ಏನಾಯಿತೆಂದರೆ... ಪುಟ್ಟಪರ್ತಿಯಿಂದ ರಟ್ಟಿನ ಪೆಟ್ಟಿಗೆಗಳಲ್ಲಿ ಚಿನ್ನ ತುಂಬಿ ಲಾರಿಗಳಲ್ಲಿ ಬೆಂಗಳೂರಿನ ಕಾಡುಗೋಡಿ ಆಶ್ರಮಕ್ಕೆ ಸಾಗಿಸಲಾಗಿದೆ. ಲಾರಿಗಳನ್ನು ದೇವನಹಳ್ಳಿ ಬಳಿ ಸುಂಕದ ಅಧಿಕಾರಿಗಳು ತಡೆದಾಗ ಪ್ರಭಾವಿ ರಾಜಕೀಯ ಮುಖಂಡರೊಬ್ಬರು ಮೇಲಾಧಿಕಾರಿಗಳಿಂದ ಒತ್ತಡ ಹಾಕಿಸಿ, ಲಾರಿಯನ್ನು ಬಿಡಿಸಿ ಕಳಿಸಿದರೆಂದು ತಿಳಿದುಬಂದಿದೆ.

ಈ ವಿಷಯ ಬಹಿರಂಗಗೊಂಡ ನಂತರ ಸುಂಕದ ಅಧಿಕಾರಿಗಳು, ಪುಟ್ಟಪರ್ತಿ ಆಶ್ರಮದಿಂದ ಹಲವು ವಸ್ತುಗಳನ್ನು ಕಾಡುಗೋಡಿ ಆಶ್ರಮಕ್ಕೆ ರವಾನೆಯಾಗಿರುವುದು ನಿಜ. ಆದರೆ ಇದೇನೂ ಮೊದಲಲ್ಲ. ರವಾನೆಯಾದ ವಸ್ತುಗಳೆಲ್ಲ ಆಶ್ರಮಕ್ಕೆ ಸಂಬಂಧಿಸಿದ್ದುಬ ಎಂಬುದರ ಬಗ್ಗೆ ಟ್ರಸ್ಟ್ ನ ಅಧಿಕೃತ ಪತ್ರ ಇದ್ದ ಕಾರಣ ಹಾಗೆಯೇ ಬಿಟ್ಟು ಕಳಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಆದರೆ ಬಾಬಾ ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ವ್ಯವಹಾರಗಳ ಬಗ್ಗೆ ಭಕ್ತರಿಗೆ ಅನುಮಾನ, ಆತಂಕ ಕಾಡುತ್ತಿದೆ. ಟ್ರಸ್ಟ್ ಬಗ್ಗೆ ನಂಬಿಕೆ ಇಲ್ಲದಾಗಿದೆ. ಬಾಬಾ 23 ದಿನಗಳಿಂದ ಆಸ್ಪತ್ರೆಯಲ್ಲಿರುವಾಗ ಚಿನ್ನಾಭರಣ ಸಾಗಣೆ, ಭಾರಿ ಮೊತ್ತದ ಹಣ ಡ್ರಾ ಮಾಡುವ ಅವಶ್ಯಕತೆ ಇತ್ತೇ? ಇದ್ದರೂ ಯಾರ ಅನುಮತಿ ಪಡೆಯಲಾಗಿದೆ? ಎಂಬುದು ಭಕ್ತರ ಅಮಾಯಕ ಪ್ರಶ್ನೆ.

ಪುಟ್ಟಪರ್ತಿ ಆಶ್ರಮದಲ್ಲಿ ಬಾಬಾಗೆ ಕಾಣಿಕೆ ರೂಪದಲ್ಲಿ ಭಕ್ತರು ನೀಡಿರುವ ಚಿನ್ನಾಭರಣ ಅಂದಾಜು 10 ಟನ್ ನಷ್ಟಿದೆ. ವಜ್ರದ ಆಭರಣಗಳೂ ಇದರಲ್ಲಿ ಸೇರಿದೆ. ಆದರೆ ಇವುಗಳನ್ನು ಅಧಿಕೃತವಾಗಿ ಲೆಕ್ಕ ಇಡಲಾಗಿಲ್ಲ. ಚೆಕ್, ಡಿಡಿ ಹೀಗೆ ಬ್ಯಾಂಕ್ ಮೂಲಕ ಭಕ್ತರು ನೀಡಿದ ಕಾಣಿಕೆ ಹಣ ಮಾತ್ರ ಲೆಕ್ಕ ಇಡಲಾಗಿದೆ.

ವೈಟ್ ಫೀಲ್ಡ್ ನಲ್ಲಿ 1984ರ ಏ. 26ರಂದು ಸಾಯಿಬಾಬಾ ಅವರ ಹಸ್ತದಿಂದಲೇ ಉದ್ಘಾಟನೆಗೊಂಡ 'ಬೃಂದಾವನ', ಬಾಬಾ ಅವರು ಬೆಂಗಳೂರಿಗೆ ಬಂದಾಗ ಅವರ ಆಶ್ರಯಕ್ಕಾಗಿ ವಿಶೇಷವಾಗಿ ನಿರ್ಮಿಸಲಾದ ತಾಣ ಇದಾಗಿದೆ. ಎರಡು ವರ್ಷಗಳ ಹಿಂದೆ ಬಾಬಾ ಇಲ್ಲಿಗೆ ಆಗಮಿಸಿದ್ದರು. ನಂತರದ ದಿನಗಳಲ್ಲಿ ಬಾಬಾ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಆಶ್ರಮದ ಮೂಲಗಳು ತಿಳಿಸಿವೆ.

English summary
According to official sources one ton of gold jewellery belonging to Sai Baba Trust in Puttaparthi has been transported to Kadugodi Ashram (Brindavan) in Bangalore on Tuesday mid night (April 19). But Baba continues to be bed ridden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X