ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪುರುಷರು ಸಲಿಂಗಿಗಳಾಗಲಿದ್ದಾರೆ: ಫಾರೂಖ್ ಅಬ್ದುಲ್ಲಾ ಭವಿಷ್ಯ
'ಅಂತಹ ದಿನಗಳು ದೂರವೇನೂ ಇಲ್ಲ. ಯುವತಿಯರು ಸಿಗದೆ ನಾವೆಲ್ಲ ಸಲಿಂಗಿಗಳಾಗಬೇಕಾಗುತ್ತದೆ. ಇದು ಶತಸಿದ್ಧ. ಇದ್ಯಾಕಪ್ಪಾ ಹೀಗೆ ಕೇಡುಗಾಲ ಎಂದರೆ ಮಹಿಳೆಯರ ಸಂಖ್ಯೆ ದಿನೇ ದಿನೆ ಕುಸಿಯುತ್ತಿರುವುದೇ ಇದಕ್ಕೆ ಕಾರಣ. ಮಹಿಳೆಯರು ನಿಖಾಲಿಯಾಗುತ್ತಿದ್ದಾರೆ. ಪುರುಷರದ್ದೇ ದರ್ಬಾರು ಆಗುತ್ತಿದೆ' ಎಂದು ಅಬ್ದುಲ್ಲಾ ಸಾಹೇಬರು ಒಕ್ಕಣೆ ನೀಡಿದ್ದಾರೆ. ಅವರ ಮಾತಿನ ಅರ್ಥ ಏನಪಾ ಅಂತಂದಂದ್ರೆ... ಹೆಣ್ಣು ಭ್ರೂಣ ಹತ್ಯೆ ಇನ್ನಾದರೂ ನಿಲ್ಲಿಸಿ ಎಂಬ ಕಳಕಳಿ ಅವರದ್ದು.
ಫಾರೂಖ್ ಹೇಳುವುದರಲ್ಲೂ ಗಂಭೀರತೆ ಇದೆ. ಏಕೆಂದರೆ 2011-ಜನಗಣತಿ ಪ್ರಕಾರ ಪ್ರತಿ 1,000 ಪುರುಷರಿಗೆ 914 ಮಹಿಳೆಯರು ಮಾತ್ರವೇ ಇದ್ದಾರೆ. ಈ ಮಧ್ಯೆ, ಕಾಂಗ್ರೆಸ್ ಪಕ್ಷ ಫಾರೂಖ್ ರ ಇಂತಹ ಹೇಳಿಕೆಗೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ಮುಜುಗರದಿಂದ ಜಾರಿಕೊಂಡಿದೆ. ಆದರೆ ಸಮಸ್ಯೆಯಂತೂ ಗಂಭೀರವಾಗಿದೆ ಎಂದು ಸೂಕ್ಷ್ಮವಾಗಿ ಹೇಳಿದೆ.
Comments
English summary
Concerned at the growing uneven sex ratio in the country, Union Minister Farooq Abdullah today (Apr 14) said there will be a day when men will have no girls to marry and they may have to turn "gay".
Story first published: Thursday, April 14, 2011, 19:06 [IST]