• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಂಗಶಂಕರದಲ್ಲಿ ಮತ್ತೆ ತೇಜಸ್ವಿ ಜುಗಾರಿ ಕ್ರಾಸ್ !

By Mahesh
|

ಬೆಂಗಳೂರು, ಏ.14: ಸಮುದಾಯ ಬೆಂಗಳೂರು ಅಭಿನಯಿಸುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್ ದಿನಾಂಕ 16 ಮತ್ತು 17 ಏಪ್ರಿಲ್ 2011 ಈ ಎರಡು ದಿನಗಳ ಕಾಲ ಜೆಪಿ ನಗರದ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ವಾರಾಂತ್ಯದಲ್ಲಿ ಮಕ್ಕಳಿಂದ ಮುದುಕವರೆಗೆ ಮನರಂಜನೆ ನೀಡಬಲ್ಲ ಈ ನಾಟಕ ನೋಡಲು ಮರೆಯದಿರಿ ಎಂದು ಸಮುದಾಯ ತಂಡದ ಕಾರ್ಯದರ್ಶಿ ರವೀಂದ್ರನಾಥ್ ಸಿರಿವರ ಅವರು ತಿಳಿಸಿದ್ದಾರೆ.

ನಟರಾಜ ಹೊನ್ನವಳ್ಳಿಯವರ ನಿರ್ದೇಶನದ ಈ ನಾಟಕ ಈಗಾಗಲೇ 50 ಪ್ರದರ್ಶನಗಳನ್ನು ಕಂಡಿದೆ. ಏಪ್ರಿಲ್ 16 ರಂದು ಸಂಜೆ 7.30 ಕ್ಕೆ ಮತ್ತು ಏಪ್ರಿಲ್ 17 ರಂದು ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಎರಡು ಪ್ರದರ್ಶನಗಳಿವೆ. ಟಿಕೆಟ್ ದರ 70 ರೂಪಾಯಿಗಳು.

ಜುಗಾರಿ ಕ್ರಾಸ್ ಬಗ್ಗೆ : ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯವರ ಜುಗಾರಿ ಕ್ರಾಸ್ ಒಂದು ವಿಶಿಷ್ಟ ಕಾದಂಬರಿ. ಕಾಡುಗಳ್ಳರ.ಕಾಳದಂಧೆಗಳ ಕುರಿತು ಈ ಕೃತಿಯಲ್ಲಿ ಮಾತನಾಡುವ ತೇಜಸ್ವಿಯವರು ಪರಿಸರ, ಪ್ರಾಕೃತಿಕ ಸಂಪತ್ತು, ಅವುಗಳನ್ನು ಕಾಪಾಡುವ ಬಗ್ಗೆ ತಮ್ಮದೇ ನೆಲೆಯಲ್ಲಿ ಮಾತನಾಡುತ್ತ ಬಂದವರು. ಕಾಡು ಮೇಡುಗಳಲ್ಲಿ ಅಲೆಯುತ್ತ ಪಕ್ಷಿ ಪರಿಸರಗಳ ಕುರಿತು ವಿಶೇಷ ಅಧ್ಯಯನ ಮಾಡಿದ ತೇಜಸ್ವಿ ಕಟ್ಟಿಕೊಟ್ಟ ಕಥೆಯನ್ನು ನಾಟಕ ರೂಪಕ್ಕೆ ತಂದವರು ಕನ್ನಡ ರಂಗಭೂಮಿಯ ಮತ್ತೊಬ್ಬ ವಿಶೇಷ ಪ್ರತಿಭೆ ನಟರಾಜ ಹೊನ್ನವಳ್ಳಿ ಯವರು.

ನಾಟಕ : ಜುಗಾರಿ ಕ್ರಾಸ್

ರಚನೆ : ಕೆ. ಪಿ. ಪೂರ್ಣಚಂದ್ರ ತೇಜಸ್ವಿ

ನಾಟಕ ರೂಪ ಮತ್ತು ನಿರ್ದೇಶನ : ನಟರಾಜ್ ಹೊನ್ನವಳ್ಳಿ

ಸಂಗೀತ :ಗಜಾನನ ಟಿ. ನಾಯ್ಕ

ಸ್ಥಳ : ರಂಗಶಂಕರ, ಜೆ.ಪಿ. ನಗರ. ಬೆಂಗಳೂರು

ದಿನಾಂಕ/ವಾರ : 16.04.2011 ಶನಿವಾರ ಮತ್ತು 17.042011ಭಾನುವಾರ

ಸಮಯ : ಶನಿವಾರ ಸಂಜೆ 7.30 ಹಾಗೂ ಭಾನುವಾರ : 3.30, 7.30

ಸಂಪರ್ಕಿಸಿ : 99001 82400.

ವೆಬ್ ಸೈಟ್ : www.indianstage.in

ನಾಟಕದ ವಿವರ: ಈ ನಾಟಕ ಕೇವಲ 24 ಗಂಟೆಗಳಲ್ಲಿ ನೆಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್, ಜೊತೆಗೆ ಇದು ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವದ ಸಾಮಾಜಿಕ ಕಾದಂಬರಿ. ಮಲೆನಾಡಿನ ದಟ್ಟ ಕಾಡೇ ಕಾಳ ಧಂಧೆಗಳ ತವರೂರಾಗುವುದು, ಕಾಡಿನಿಂದ ಉತ್ಪತ್ತಿಯಾಗುವ ಕಾಳಧನ ದೇಶದ ರಾಜಕೀಯವನ್ನೇ ನಿಯಂತ್ರಿಸುವುದು, ಈ ಕಾಳ ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಅನೇಕ ವೇಳೆ ಇದ್ಯಾವುದಕ್ಕ್ಕೂ ಸಂಬಂಧಿಸದ ಮುಗ್ಧರನ್ನೂ ಪ್ರಾಣಾಪಾಯದ ಅಂಚಿಗೆ ತಳ್ಳಬಹುದು ಎಂಬುದೇ ಈ ಕಥೆಯ ಹಿನ್ನೆಲೆ.

ಏಲಕ್ಕಿ ಬೆಳೆಗಾರ ಸುರೇಶ ಮತ್ತು ಅವನ ಹೆಂಡತಿ ಗೌರಿ ಏಲಕ್ಕಿ ವ್ಯಾಪಾರಕ್ಕೆಂದು ಪೇಟೆಗೆ ಬಂದವರು, ಅವರಿಗೇ ತಿಳಿಯದೇ ಕಳ್ಳ ಧಂಧೆಗೆ ಸಿಕ್ಕಿಕೊಂಡು ಕ್ಷಣ ಕ್ಷಣಕ್ಕೂ ರೋಚಕವಾಗಿ ಸಾಗುವ, ಬೆಚ್ಚಿಬೀಳಿಸುವ ಅಂಡರ್‌ವರ್ಲ್ಡ್‌ನ ಕಥೆಯೊಂದಿಗೆ ಹೆಣೆದುಕೊಂಡಿರುವ ನಾಟಕವೇ ಜುಗಾರಿ ಕ್ರಾಸ್.

English summary
Samudaya Team is performing Jugari Cross Kannada play based on KP Poornachandra Tejaswi's novel by the same name. Samudaya Team has already completed 50th show of Jugari Cross Play and now this weekend April 16th and 17th people can enjoy the play which is romantic thriller at Rangashankara, JP Nagar, Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X