ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ನೋಟು ದಂಧೆಯಲ್ಲಿ ಪೊಲೀಸರ ಮಕ್ಕಳು

By * ರೋಹಿಣಿ, ಬಳ್ಳಾರಿ
|
Google Oneindia Kannada News

Fake currency notes racket busted
ಬಳ್ಳಾರಿ, ಏ. 14: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಪೊಲೀಸ್ ಇಲಾಖಾ ಸಿಬ್ಬಂದಿ, ಪೊಲೀಸರ ಮಕ್ಕಳು ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತರು ಪೊಲೀಸ್ ಇಲಾಖೆಯಲ್ಲಿಯ ಜಾಡಮಾಲಿ ನಾರಾಯಣ ಅಲಿಯಾಸ್ ನಿಕ್ಕರ್ ನಾರಾಯಣ (52), ಚೆಳ್ಳಗುರ್ಕಿಯ ಸರ್ಕಾರಿ ಶಾಲೆಯ ಶಿಕ್ಷಕ, ವಿವಿಧ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕ್ರೀಡಾಪಟು ವಿಲ್ಸನ್ (48), ಜಿಲ್ಲಾ ಸಶಸ್ತ್ರಪಡೆಯ ಮುಖ್ಯಪೇದೆಯ ಮಗ ಎಸ್. ಮಹೇಶ್ ಕುಮಾರ್ (22), ಎಸ್. ನಾಗುಲ್ ಷರೀಫ (21), ಮೃತ ಪೇದೆ, ಸಮಾಜ ಕಾರ್ಯಕರ್ತೆಯ ಪುತ್ರ ಕಿರಣಕುಮಾರ್ (22), ಕಂಪ್ಲಿಯ ಕೆಇಬಿ ಕ್ವಾರ್ಟಸ್‌ನ ಜಗನ್ನಾಥ್ ಮತ್ತು ಬೆಂಗಳೂರಿನ ಯಲಹಂಕದ ಲತಾ (35). ಇವರೆಲ್ಲರೂ ಸೆಂಟ್ರಲ್ ಜೈಲ್ ಮೈದಾನದಲ್ಲಿ ನೋಟು ಚಲಾವಣೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ.

ಬಂಧಿತರಿಂದ ಆರು ಮೊಬೈಲ್, 2 ಲಕ್ಷದ 4 ಸಾವಿರದ 600 ರುಪಾಯಿ ನಕಲಿ ನೋಟುಗಳನ್ನು, ದೂರವಾಣಿ ಸಂಪರ್ಕದ ನಂಬರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ಸುನಿಲ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

'ಜಾಲವೇ ಇದೆ": ಜಿಲ್ಲಾ ಪೊಲೀಸರು ತಿಳಿಸುವಂತೆ, ಈ ತಂಡದ ಹಿಂದೆ ಜಿಲ್ಲೆಯಲ್ಲಿ ಖೋಟಾ ನೋಟು ಚಲಾವಣೆ ಮಾಡುವ ದೊಡ್ಡ ಜಾಲವೇ ಇದೆ. ಸಾವಿರಾರು ರುಪಾಯಿ, ಲಕ್ಷಾಂತರ ರುಪಾಯಿಗಳ ಪ್ರಮಾಣದಲ್ಲಿ ನೋಟುಗಳ ಚಲಾವಣೆ ನಡೆಯುತ್ತಿದೆ. ಈ ಜಾಲವನ್ನು ಹಿಡಿಯುವಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ. ಸಾರ್ವಜನಿಕರು ಕೂಡ ಸುಳಿವು ನೀಡಬೇಕು ಎಂದು ಕೋರಿದ್ದಾರೆ.

English summary
Fake Currency notes network busted and over 2 lakh rupees worth fake currency notes has been seized by Gandhi Nagar Polce, Bellary. Seven people including police constables children who involved in this racket have been held.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X