ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಶಾಲಾ ಪಠ್ಯದಲ್ಲಿ ಸುರಕ್ಷಿತ ಸಂಭೋಗ : ಪ್ರತಿಭಟನೆ

By Srinath
|
Google Oneindia Kannada News

Text Books on Sex
ಕರಾಚಿ, ಏಪ್ರಿಲ್ 13: ಮತಾಂಧ ಪಾಕಿಸ್ತಾನದಲ್ಲಿ ಪ್ರೌಢಶಾಲೆ ಹಂತದಲ್ಲಿಯೇ ಸುರಕ್ಷಿತ ಸೆಕ್ಸ್ ಪಠ್ಯ ಜಾರಿಗೊಳಿಸಿರುವುದಕ್ಕೆ ಪೋಷಕರು ಕೆಂಡಕಾರಿದ್ದಾರೆ. ಆರರಿಂದ 10ನೇ ತರಗತಿಯವರೆಗಿನ ಪಠ್ಯದಲ್ಲಿ ಲೈಂಗಿಕ ಆರೋಗ್ಯ ವಿಷಯದ ಕುರಿತು 'ಸಂಭೋಗದ ವೇಳೆ ಸುರಕ್ಷಿತ ವಿಧಾನ' ಬೋಧಿಸಲಾಗುತ್ತಿದೆ. ಇಂಥಹದ್ದನ್ನೆಲ್ಲ ಕಲಿಯಲಾ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವುದು ಎಂದು ಅಪ್ಪ-ಅಮ್ಮಂದಿರು ಗರಂ ಆಗಿದ್ದಾರೆ.

'ಜಿಂದಗಿ ಗುಜಾರ್ನೆ ಕಿ ಮಹರತೋ ಪರ್ ಮುಬ್ನಿ ತಾಲೀಮ್' (ಜೀವನಾನುಭವ ಆಧರಿತ ಶಿಕ್ಷಣ) ಎಂಬ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿ ಸೆಕ್ಸ್ ವಿಷಯ ಢಾಳಾಗಿ ಕಂಡುಬಂದಿದೆ. ಸುಖೀ ಸಂಭೋಗಕ್ಕಾಗಿ 12 ಸೂತ್ರ ಎಂಬಂತೆ 'ಪಾಠ 12ರಲ್ಲಿ ಏಡ್ಸ್ ಅಂತಹ ಮಾರಕ ಕಾಯಿಲೆಗಳನ್ನು ದೂರಮಾಡಲು ಸಂಗಾತಿಗಳೊಂದಿಗೆ ಸಂಭೋಗ ಮಾಡುವಾಗ ಸುರಕ್ಷಿತ ವಿಧಾನ ಅನುಸರಿಸಿ' ಎಂದು ವಿವರಿಸಲಾಗಿದೆ.

'ಕಾಯಿಲೆಯಿರುವ ಮನುಷ್ಯ ಅಥವಾ ಅಪರಿಚಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸುವಾಗ ಕಾಂಡೋಮ್ ಬಳಸಿ' ಎಂದೂ ಪಠ್ಯದಲ್ಲಿ ಸುರಕ್ಷಿತ ಬೋಧನೆ ಮಾಡಲಾಗಿದೆ. 'ಅರೆ, ನಮ್ಮ ಮಕ್ಕಳು ಇದನ್ನೆಲ್ಲ ಶಾಲಾ ಹಂತದಲ್ಲಿಯೇ ಕಲಿಯಬೇಕಾ? ಹೇ ಅಲ್ಲಾ' ಎಂದು ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಮನಾರ್ಹವೆಂದರೆ ಅನೇಕ ಶಿಕ್ಷಕರು ಇಂತದ್ದನ್ನೆಲ್ಲ ಪಾಠ ಮಾಡಲು ನಮಗೆ ಸಾಧ್ಯವಿಲ್ಲ ಎಂದಿದ್ದಾರೆ.

English summary
In Pakistan a school book on sexual health, which exhorts use of "secure procedure" during sexual intercourse, has been implemented. The book goes on to instruct, "During sex with an affected person or someone you dont know, a condom should be used". Parents have demanded to withdraw the controversial book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X