ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡ್ಡ ಇದ್ದವನಿಗೆ ಪರೀಕ್ಷೆ ಇಲ್ಲ!

By Srinath
|
Google Oneindia Kannada News

Tabish Patel
ಮುಂಬೈ, ಏಪ್ರಿಲ್ 13: ಅತ್ತ ಅಮೆರಿಕ ಮತ್ತು ಫ್ರಾನ್ಸ್ ಬುರ್ಖಾ ಧರಿಸುವುದರ ಬಗ್ಗೆ ಹಗ್ಗಜಗ್ಗಾಡುತ್ತಿದ್ದರೆ ಇತ್ತ ನಮ್ಮದೇ ಮುಂಬೈನಲ್ಲಿ ವಿಲಕ್ಷಣ ಪ್ರಕರಣವೊಂದು ಅಂಧೇರಿಯಲ್ಲಿ ಬೆಳಕಿಗೆ ಬಂದಿದೆ. ಏಳನೇ ತರಗತಿಯ ತಬೀಶ್ ಪಟೇಲ್ (15) ಸ್ವಲ್ಪ ವಿಕಲಚೇತನ. ಅಂತಹವ ಮಂಗಳವಾರ ಗಣಿತ ಪರೀಕ್ಷೆ ಬರೆದು ಬರುತ್ತೇನೆ ಎಂದು ಬೆಳಗ್ಗೆ ಎಂಟಕ್ಕೇ ಸ್ಕೂಲಿಗೆ ಹೋಗಿ ರಾತ್ರಿ ಮನೆಗೆ ವಾಪಸಾಗಿದ್ದಾನೆ. ಅದಕ್ಕೂ ಮೊದಲು ಮನೆಯವರು ಮಗು ಬಾರದಿರುವುದಕ್ಕೆ ಗಾಬರಿಗೊಂಡು ಮಿಸ್ಸಿಂಗ್ ಕೇಸ್ ಗುಜರಾಯಿಸಿದ್ದರು.

ಈ ಮಧ್ಯೆ ಏನಾಯಿತೆಂದರೆ ಗಡ್ಡ ಬಿಟ್ಟುಕೊಂಡು ಪರೀಕ್ಷೆಗೆ ಬಂದಿದ್ದೀಯಾ. ನೀನು ಪರೀಕ್ಷೆ ಬರೆಯಬೇಡ ಮನೆಗೆ ಹೋಗು ಎಂದು ಸ್ಕೂಲಿನವರು ಮಗುವನ್ನು ವಾಪಸ್ ಅಟ್ಟಿದ್ದಾರೆ. ಕಂಗಾಲಾದ ಮಗು ಮನೆಗೆ ಹೋದರೆ ಬೈಸಿಕೊಳ್ಳಬೇಕಾಗುತ್ತದೆ ಎಂದು ರಾತ್ರಿ ತಡವಾಗಿ ಮನೆಗೆ ವಾಪಸಾಗಿದ್ದಾನೆ. ಅಂದಹಾಗೆ, ವಿಕಲಾಂಗ ಮಕ್ಕಳ ಪುನರ್ವಸತಿ ಶಾಲೆಯೇ ಇಂತಹ ಅಮಾನವೀಯತೆ ಮೆರೆದಿದೆ.

2008ರಲ್ಲಿ ಮಧ್ಯಪ್ರದೇಶದಲ್ಲಿ ಇಂತಹುದೇ ಪ್ರಕರಣ ನಡೆದಿತ್ತು. ಬಾಧಿತ ಸಲೀಂ ಎಂಬ ಯುವಕ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದ. ಸಂವಿಧಾನದ 25ನೇ ಪರಿಚ್ಛೇಧದ ಅಡಿ ಗಡ್ಡ ಬಿಡುವುದು ಧಾರ್ಮಿಕ ಸ್ವಾತಂತ್ರ್ಯ ಎಂದು ಸಲೀಂ ಪರ ವಕೀಲರು ಪ್ರತಿಪಾದಿಸಿದ್ದರು. ಸಲೀಂನನ್ನು ಶಾಲೆಗೆ ಸೇರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಕಿವಿ ಹಿಂಡಿತ್ತು.

English summary
Tabish Patel (15), a student with a grade VII learning disability, went missing from the Society for Rehabilitation of Crippled Children's organisation, Centre for Child Development (CCD), after he was reportedly sent home for arriving at the centre with an unshaven beard; returns home late at night (April 12).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X