ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಖಾ ಇರಲಿ ಅಭ್ಯಂತರವಿಲ್ಲ ಎಂದ ಅಮೆರಿಕ

By Srinath
|
Google Oneindia Kannada News

america backs bueqa
ವಾಷಿಂಗ್ಟನ್, ಏಪ್ರಿಲ್ 13: 'ಮುಸ್ಲಿಮರು ಬುರ್ಖಾ ಹಾಕಿಕೊಳ್ಳಲಿ ಬಿಡಿ. ನಮ್ಮದೇನು ಅಭ್ಯಂತರ ಇಲ್ಲ' ಎಂದು ಮಿತ್ರ ರಾಷ್ಟ್ರ ಫ್ರಾನ್ಸ್ ಗೆ ಅಮೆರಿಕ ಚಿಕ್ಕ ಜರ್ಕ್ ನೀಡಿದೆ. ಮೊನ್ನೆಯಷ್ಟೇ ಫ್ರಾನ್ಸ್ ತನ್ನ ದೇಶದಲ್ಲಿ ಯಾರೂ ಬುರ್ಖಾ ಧರಿಸುವಂತಿಲ್ಲ ಎಂದು ಕಟ್ಟಾಜ್ಞೆ ಹೊರಡಿಸಿತ್ತು.

'ಆಯಾ ಧರ್ಮದವರು ಧಾರ್ಮಿಕವಾಗಿ ಆಚರಣೆಯಲ್ಲಿರುವ ಯಾವುದೇ ಉಡುಪನ್ನು ಧರಿಸಬಹುದು. ಇದು ಎಲ್ಲ ಧರ್ಮದವರಿಗೂ ಅನ್ವಯಿಸುತ್ತದೆ' ಎಂದು ಅಮೆರಿಕದ ವಿದೇಶ ಸಚಿವಾಲಯದ ವಕ್ತಾರ ಮಾರ್ಕ್ ಟೋನರ್ ನಾಗರಿಕರ ಧಾರ್ಮಿಕ ಹಕ್ಕುಗಳನ್ನು ಮಂಗಳವಾರ ರಾತ್ರಿ ಪ್ರತಿಪಾದಿಸಿದ್ದಾರೆ. ಆದರೆ ಫ್ರಾನ್ಸ್ ಬುರ್ಖಾಗೆ ನಿಷೇಧ ಹೇರಿರುವುದರ ವಿರುದ್ಧ ಅವರು ಚಕಾರವೆತ್ತಲಿಲ್ಲ.

ಫ್ರಾನ್ಸ್ ಬುರ್ಖಾ ನಿಷೇಧವನ್ನು ಸೋಮವಾರ ಜಾರಿಗೊಳಿಸಿದೆ. ನಿಷೇಧವನ್ನು ಉಲ್ಲಂಘಿಸಿದ ಮೊದಲ ಪ್ರಕರಣ ಪ್ಯಾರಿಸ್ ನಲ್ಲಿ ಮಂಗಳವಾರ ಪತ್ತೆಯಾಗಿದ್ದು 20ರ ಹರಯದ ಮಹಿಳೆಗೆ 216 ಡಾಲರ್ ದಂಡ ವಿಧಿಸಿದೆ.

English summary
The United States has endorsed the right of people to express religious belief through religious attire after French bid adieu to Burqa on Monaday (April 11).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X