ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಡೋಮ್ ಆಡ್ ನಿಂದ ವೇಶ್ಯಾವಾಟಿಕೆ ಹೆಚ್ಚಳ!

By Mahesh
|
Google Oneindia Kannada News

Condom Ads Human Trafficking
ನವದೆಹಲಿ, ಏ.12 : ಕಾಂಡೋಮ್ ಬಳಕೆ ಬಗ್ಗೆ ಪ್ರಕಟಗೊಳ್ಳುತ್ತಿರುವ ಜಾಹೀರಾತಿನ ಪರಿಣಾಮವಾಗಿ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಹೆಚ್ಚುತ್ತಿದೆ ಎಂಬ ಗಾಬರಿ ಹುಟ್ಟಿಸುವ ವಿಷಯ ಇತ್ತೀಚಿನ ಎನ್ ಜಿಒ ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ.

" ಲೈಂಗಿಕ ಚಟುವಟಿಕೆ ವೇಳೆ ಕಾಂಡೋಮ್ ಬಳಸುವುದು ಹೆಚ್ಚು ಉತ್ತಮ. ಅದರಲ್ಲೂ ವೇಶ್ಯೆಯರೊಂದಿಗೆ ಬೆರೆಯುವಾಗ ಕಾಂಡೋಮ್ ಬಳಸಲೇ ಬೇಕು. "ಆದರೆ ನೀವು ವೇಶ್ಯೆಯರ ಬಗ್ಗೆ ಚಿಂತೆ ಪಟ್ಟುಕೊಳ್ಳಬೇಡಿ. ಬದಲಾಗಿ ಕಾಂಡೋಮ್ ಆಯ್ಕೆ ವಿಷಯದಲ್ಲಿ ಜಾಗ್ರತೆ ವಹಿಸಿ" ಎಂದು ಜಾಹೀರಾತು ಹೇಳುತ್ತದೆ. ಇದರಿಂದ ಚಿಕ್ಕ ಪುಟ್ಟ ವಯಸ್ಸಿನವರೂ ವೇಶ್ಯಾವಾಟಿಕೆಗೆ ಇಳಿಯುವ ಅಪಾಯ ಇದೆ.

ಕಾಂಡೋಮ್ ಬಗ್ಗೆ ಅತಿಯಾದ ಜಾಹೀರಾತು ಅಪಾಯ ತಂದೊಡ್ಡಿದೆ ಎಂದು ಅಪ್ನೆ ಆಪ್ ಎನ್ ಜಿಒ ಸಂಸ್ಥಾಪಕ ರುಚಿರಾ ಗುಪ್ತಾ ಹೇಳಿದ್ದಾರೆ. ಪ್ರಭಾವ ಬಳಸಿ ಮಕ್ಕಳನ್ನು ವೇಶ್ಯಾವಾಟಿಕೆಗೆ ಇಳಿಸುವಂತಹ ವ್ಯವಹಾರ ಜಾಸ್ತಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಅಶ್ಲೀಲ ವೆಬ್‌ಸೈಟುಗಳ ಕಾರಣದಿಂದಲೂ ಭಾರತದಿಂದ ಶೇ. 70ರಷ್ಟು ಕಾಲೇಜಿನ ಕ್ಯಾಂಪಸಿನಲ್ಲಿರುವ ಕ್ಯಾಂಟೀನ್ ಗಳ ಮಾನವ ಕಳ್ಳಸಾಗಣೆ ಅಡ್ಡಾಗಳಾಗುತ್ತಿದೆ.

ತಂತ್ರಜ್ಞಾನ ಬೆಳೆದಂತೆ ಸೆಕ್ಸ್, ಪೋರ್ನ್ ಸೈಟ್ ಗಳನ್ನು ನೋಡುವುದು ಹೆಚ್ಚುತ್ತಿದೆ. ಸೆಕ್ಸ್ ಸಂಬಂಧಿತ ಸೈಟುಗಳನ್ನು ಇಟ್ಟುಕೊಂಡು ಕನಿಷ್ಠ ಬಂಡವಾಳದಿಂದ ಗರಿಷ್ಠ ಲಾಭವನ್ನು ಪಡೆಯಲಾಗುತ್ತಿದೆ. ಫ್ರೀ ಸೆಕ್ಸ್ ಕಲ್ಪನೆ ಈಗ ಹದಿಹರೆಯದ ಯುವಕ, ಯುವತಿಯರಲ್ಲಿ ಮನೆ ಮಾಡಿದೆ. ಬೇಡದ ಗರ್ಭ ತೆಗೆಸಲು I-pill ಇದೆಯಲ್ಲ ಎಂದು ಧೈರ್ಯವಾಗಿ ಹೇಳುವ ಮಟ್ಟಿಗೆ ಯುವತಿಯರು ಬೆಳೆದಿದ್ದಾರೆ ಎಂದು ಎನ್ ಜಿಒ ಕೈಗೊಂಡ ಅಧ್ಯಯನ ಹೇಳುತ್ತದೆ.

English summary
According to Delhi based NGO, condom campaign through Television advertisement is the reason behind the increase in Human trafficking cases in India. And with the mobile phone and internet penetration child prostitution also increased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X