ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖುಲ್ಲಂ ಖುಲ್ಲಾ: ಬುರ್ಖಾಗೆ ಫ್ರಾನ್ಸ್ ಗುಡ್ ಬೈ

By Srinath
|
Google Oneindia Kannada News

good bye burqa
ಪ್ಯಾರಿಸ್, ಏ. 11: ಒಂದು ವರ್ಷದಿಂದ ಬುರ್ಖಾ ಇರಬೇಕಾ, ಬೇಡವಾ? ಎಂಬ ವಿಚಾರವನ್ನು ಎಳೆದಾಡಿದ ಫ್ರಾನ್ಸ್ ಸರಕಾರ ಕೊನೆಗೂ ದೇಶದಲ್ಲಿ ಬುರ್ಖಾ ಬಳಸುವುದನ್ನು ನಿಷೇಧಿಸಿದೆ. ಇಂದಿನಿಂದಲೇ (ಏಪ್ರಿಲ್ 11) ಇದು ಖಡಕ್ಕಾಗಿ ಜಾರಿಗೆ ಬರಲಿದ್ದು, ಬುರ್ಖಾ ಧರಿಸಿದವರು ಕಂಡುಬಂದರೆ ಅಂತಹವರಿಗೆ 150 ಯುರೊ (ಅಂದಾಜು 9,500 ರುಪಾಯಿ) ದಂಡ ವಿಧಿಸುವುದಾಗಿ ಸರಕಾರ ಫರ್ಮಾನು ಹೊರಡಿಸಿದೆ.

ಅಂಗಡಿ ಮುಂಗಟ್ಟು, ಶಾಲಾ ಕಾಲೇಜು, ಆಸ್ಪತ್ರೆ ಹೀಗೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಹೆಂಗಸರು ಬುರ್ಖಾ ಧರಿಸಿ ಹೊರಬರಬಾರದು. ಇಲ್ಲವಾದಲ್ಲಿ ದಂಡ ಅಥವಾ ಸಾರ್ವಜನಿಕ ಸೇವೆ ಮಾಡುವ ಶಿಕ್ಷೆ ವಿಧಿಸಲಾಗುವುದು ಎಂದು ಸರಕಾರ ಎಚ್ಚರಿಸಿದೆ. ತಲೆಗೆ ಸ್ಕಾರ್ಫ್ ಸುತ್ತುಕೊಳ್ಳುವುದಕ್ಕೆ, ತಲೆಗೆ ಮುಂಡಾಸು ಹಾಕಿಕೊಳ್ಳುವುದಕ್ಕೆ, ಕನ್ನಡಕ ಧರಿಸುವುದಕ್ಕೆ ಯಾವುದೇ ಬಾಧಕವಿಲ್ಲ. ಒಟ್ಟಿನಲ್ಲಿ ವ್ಯಕ್ತಿಯ ಚಹರೆ ಪತ್ತೆ ಹಚ್ಚುವುದಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯಾವುದೇ ಅಂಗಾಂಗ ಸಾಧನಗಳನ್ನು ಧರಿಸಬಹುದಾಗಿದೆ ಎಂದು ಫ್ರಾನ್ಸ್ ಸರಕಾರ ಸ್ಪಷ್ಟಪಡಿಸಿದೆ.

ಫ್ರೆಂಚ್ ಗಣರಾಜ್ಯದಲ್ಲಿ ಬೋಡು ತಲೆ ಫ್ಯಾಶನ್ ಗೂ ಅವಕಾಶ ನೀಡಿದೆ. ಅಂತಹುದರಲ್ಲಿ ನಖಶಿಖಾಂತ ಬಟ್ಟೆ ಧರಿಸುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಫಿಲ್ಲಾನ್ ಬುರ್ಖಾ ವಿರೋಧಿ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ! ಬರ್ಖಾ ಧರಿಸುವಂತೆ ಪೀಡಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. 30,000 ಯುರೊ ದಂಡ (43,440 ಡಾಲರ್) ಅಥವಾ ಒಂದು ವರ್ಷದ ತುರಂಗ ವಾಸ ಹೇರಲಾಗುವುದು. ಇನ್ನು, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಬುರ್ಖಾ ಧರಿಸುವಂತೆ ಫರ್ಮಾನು ಹೊರಡಿಸಿದರೆ ಅಂತಹವರಿಗೆ ಎರಡು ವರ್ಷ ಜೈಲುವಾಸ ಮತ್ತು 60,000 ಯುರೊ ದಂಡ ವಿಧಿಸುವುದಾಗಿ ಸರಕಾರ ಘೋಷಿಸಿದೆ. ಯುರೋಪಿನಲ್ಲಿ ಅತಿ ಹೆಚ್ಚು ಮುಸ್ಲಿಮರು ನೆಲೆಸಿರುವುದು ಫ್ರಾನ್ಸ್ ನಲ್ಲಿ. ಯುರೋಪಿನ ಇತರೆ ರಾಷ್ಟ್ರಗಳೂ ಈ ಸಂಪ್ರದಾಯವನ್ನು ಆಚರಣೆಗೆ ತರುವ ಹಾದಿಯಲ್ಲಿದೆ.

English summary
After a long controversy over an year, French government, finally, implemented the law to ban the burqa in the country (home to Europe's biggest Muslim population). Now, anyone, wearing burqa, has to pay a fine upto 150 euros. The ban came on effect from Monday, Apr 11
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X