ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಣ್ಣಾ ಹಜಾರೆ ಚಳವಳಿಗೆ ವಿಕಿಲೀಕ್ಸ್ ಸ್ಫೂರ್ತಿ?

By Mahesh
|
Google Oneindia Kannada News

Julian Assange inspires Anna Hazare Movement
ಲಂಡನ್, ಏ.11: ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ಚಳವಳಿಯೊಂದಕ್ಕೆ ಸ್ಫೂರ್ತಿ ನೀಡುವಲ್ಲಿ ನೆರವಾಗಿದೆ ಎಂದು ಸ್ಫೋಟಕ ರಹಸ್ಯ ಮಾಹಿತಿಗಳನ್ನು ಹೊರಹಾಕುತ್ತಾ ಹಲವಾರು ಸರ್ಕಾರಗಳ ಬುಡ ಅಲ್ಲಾಡಿಸುತ್ತಿರುವ ಅಂತರ್ಜಾಲ ತಾಣ ವಿಕಿಲೀಕ್ಸ್ ನ ಸ್ಥಾಪಕ ಜುಲಿಯನ್ ಅಸ್ಸಾಂಜ್ ಅಭಿಪ್ರಾಯಪಟ್ಟಿದ್ದಾರೆ. ಲಂಡನ್‌ನ ನ್ಯೂ ಸ್ಟೇಟ್ಸ್‌ಮನ್ ಹಾಗೂ ಫ್ರಂಟ್‌ಲೈನ್ ಕ್ಲಬ್ ಏರ್ಪಡಿಸಿದ್ದ ಬಹಿರಂಗ ಚರ್ಚೆಯೊಂದರಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಅಮೆರಿಕ ದೂತಾವಾಸದ ರಹಸ್ಯ ದಾಖಲೆಗಳ ಬಗ್ಗೆ ಗಂಟೆಗಟ್ಟಲೆ ಹೇಳಬಹುದು. ಭಾರತದಲ್ಲಿ ಪ್ರಮುಖ ಪತ್ರಿಕೆ(ದಿ ಹಿಂದೂ)ಯೊಂದು ವಿಕಿಲೀಕ್ಸ್ ಬಹಿರಂಗಪಡಿಸಿದ ರಹಸ್ಯ ದಾಖಲೆಗಳನ್ನು 'ಇಂಡಿಯಾ ಕೇಬಲ್‌ಗೇಟ್" ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ. ಇದರಿಂದ ಭಾರತದಲ್ಲಿ ವಿಪಕ್ಷಗಳು ನಾಲ್ಕು ಬಾರಿ ಸಂಸತ್ತಿನಿಂದ ಹೊರನಡೆಯಲು ಹಾಗೂ ರಾಷ್ಟ್ರದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಪ್ರಗತಿಗೆ ಚಾಲನೆ ದೊರೆತಿದೆ ಎಂದವರು ಅಭಿಪ್ರಾಯಿಸಿದ್ದಾರೆ.

ಯುಪಿಎ ಸರಕಾರವು ಭಾರತ-ಅಮೆರಿಕ ಅಣು ಒಪ್ಪಂದದ ಪರವಾಗಿ ವಿಶ್ವಾಸ ಮತ ಖರೀದಿಸಲು ಆರ್ ಎಲ್ ಡಿ ಸಂಸದರಿಗೆ ಯುಪಿಎ ಸರ್ಕಾರದಿಂದ ಲಂಚ ನೀಡಲಾಗಿದೆ ಎಂಬ ಮಾಹಿತಿಯನ್ನು ವಿಕಿಲೀಕ್ಸ್ ರಹಸ್ಯ ಕೇಬಲ್ ಬಯಲುಗೊಳಿಸಿತ್ತು.

English summary
Julian Assange, the chief of the whistle-blower WikiLeaks, however, claimed that his works inspired the social-activist Hazare to hold the hunger strike against corruption and demand for anti corruption bill JanLokpal bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X