ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಕಿರುವುದು ಒಬ್ಬನಲ್ಲ ಸಾವಿರ ಅಣ್ಣಾ ಹಜಾರೆ

By Prasad
|
Google Oneindia Kannada News

Thousand Anna Hazares wanted
ಕರ್ನಾಟಕದಲ್ಲೂ ಒಬ್ಬ ಅಣ್ಣಾ ಹಜಾರೆ ಇದ್ದಿದ್ದರೆ? ಈ ಪ್ರಶ್ನೆಗೆ ಉತ್ತರ ಸಿಕ್ಕುವುದಿಲ್ಲ. ಕರ್ನಾಟಕವನ್ನು 'ಅಭಿವೃದ್ಧಿ' ಪಥದತ್ತ ಕೊಂಡೊಯ್ಯುತ್ತಿರುವ ಜನಪ್ರತಿನಿಧಿಗಳಿಗೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಬೇಕಾಗೂ ಇಲ್ಲ.

ಈ ಪ್ರಶ್ನೆ ಮತ್ತು ದೇಶದಾದ್ಯಂತ ಭ್ರಷ್ಟಾಚಾರದ ವಿರುದ್ಧದ ಎಚ್ಚರಿಗೆ ಗಂಟೆ ಬಾರಿಸಿರುವ 72 ವರ್ಷ ವಯಸ್ಸಿನ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಚಳವಳಿ ಇಂದಿನ ಸಂದರ್ಭದಲ್ಲಿ ಕರ್ನಾಟಕ್ಕೆ ಹೆಚ್ಚು ಪ್ರಸ್ತುತ. ಯಾಕೆ ಎಂದು ವಿವರಿಸಿ ಹೇಳುವ ಅಗತ್ಯವೇ ಇಲ್ಲ. ಲೋಕಾಯುಕ್ತ ಅಸ್ತಿತ್ವದಲ್ಲಿ ಇದೆಯಾದರೂ, ಹಲ್ಲಿಲ್ಲದ ಹಾವಿನಂತಾಗಿದೆ. ಲೋಕಾಯುಕ್ತರಿಗೆ ಸಿಗಬೇಕಿರುವ ಅಧಿಕಾರವನ್ನು ಸಿಗದಂತೆ ಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪಕ್ಷಭೇದ ಮರೆತು ದೇಶದ ರಾಜಕಾರಣಿಗಳು ಯಾವ ರೀತಿ ಸ್ಪಂದಿಸುತ್ತಾರೆಂಬುದು ಕಾಲಾಂತರದಲ್ಲಿ ಎಲ್ಲರಿಗೂ ತಿಳಿದ ವಿಷಯವೆ. 1968ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲೇ ಮಂಡನೆಯಾಗಬೇಕಾಗಿದ್ದ ಜನ ಲೋಕಪಾಲ ಮಸೂದೆ 45 ವರ್ಷ ಸಂದರೂ ಸಂಸತ್ತಿನ್ನು ದಾಟಿ ಬರಲು ಸಾಧ್ಯವಾಗಿಲ್ಲ. ಮುಂಗಾರು ಅಧಿವೇಶನದಲ್ಲಿ 9ನೇ ಬಾರಿ ಮಂಡನೆಯಾಗಿ ಅನುಮೋದನೆಯಾಗುವುದಾ? ಉತ್ತರ ಎಲ್ಲರಿಗೂ ತಿಳಿದೇ ಇದೆ!

ಒಬ್ಬೇ ಒಬ್ಬ ಅಣ್ಣಾ ಹಜಾರೆಯಿಂದ ದೇಶದಲ್ಲಿ ಇಂಥ ಬಗೆಯ ಕ್ರಾಂತಿ ಸಂಭವಿಸಬಹುದಾದರೆ, ಇನ್ನೂ ಹತ್ತು ಅಣ್ಣಾ ಹಜಾರೆಯಂಥವರು ಹುಟ್ಟಿಬಂದರೆ ವ್ಯವಸ್ಥೆ ಹೇಗಿರಬಹುದು ಚಿಂತಿಸಿ. ಇಂದು ದೇಶಕ್ಕೆ ಬೇಕಿರುವುದು ಬರೀ ಹತ್ತು ಅಣ್ಣಾ ಹಜಾರೆಯವರಲ್ಲ, ಸಾವಿರ ಅಣ್ಣಾ ಹಜಾರೆಯಂಥವರು. ದೇಶ ಮತ್ತು ಕರ್ನಾಟಕ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಎತ್ತ ಸಾಗುತ್ತಿದೆ... ಚುರುಮುರಿ ಬ್ಲಾಗ್ ನಲ್ಲಿ ಪ್ರಕಟವಾಗಿರುವ ಈ ಲೇಖನ ಓದಿರಿ ಮತ್ತು ನಿಮ್ಮ ಅಭಿಪ್ರಾಯ ಅಗತ್ಯವಾಗಿ ತಿಳಿಸಿರಿ.

English summary
Anna Hazares fast-unto-death in New Delhi and the nationwide support the movement has elicited for cleansing the system, has enormous relevance to Karnataka especially in the present context, where the air is thick corruption. Churumuri blog lists the successive governments acts of sins of omission and commission is quite lengthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X