ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವಕ್ಕೆ ನಿಜ ಅರ್ಥ ಕೊಟ್ಟ ಅಣ್ಣಾ

By Mahesh
|
Google Oneindia Kannada News

ಕುಗ್ರಾಮವೊಂದರಲ್ಲಿ ಜನಸಿ, ಮುಂದೆ ಭೂಸೇನೆಯಲ್ಲಿ ಸೇರಿ, ಜೀಪ್ ಡ್ರೈವರ್ ಆಗಿದ್ದ ಕಿಶನ್ ಬಾಬುರಾವ್ ಹಜಾರೆ ಇಂದು ದೇಶವನ್ನೇ ಸತ್ಯ ಮಾರ್ಗಕ್ಕೆ ಒಯ್ಯುವ ಸಾಧಕ ಎನಿಸಿದ್ದಾರೆ. ಯುದ್ಧದಲ್ಲಿ ಎದುರಾಳಿಗಳ ದಾಳಿಗೆ ಅಂಜದೆ ಎದೆಯೊಡ್ಡಿದ್ದ ಅಣ್ಣಾ, ಇಂದು ಭ್ರಷ್ಟರ ವಿರುದ್ಧ ಸಾರಿರುವ ಸಮರ, ಇಡೀ ದೇಶವನ್ನು ಒಗ್ಗೂಡಿಸಿದೆ.

74 ವರ್ಷದ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಕಾಯ್ದೆಗಾಗಿ ಒತ್ತಾಯಿಸಿ, ನಡೆಸಿರುವ ಹೋರಾಟದಿಂದ ಸರ್ಕಾರದ ಕಣ್ಣು ತೆರದು, ಲೋಕ್ ಜನಪಾಲ್ ಮಸೂದೆ ಮಂಡನೆಯಾದರೆ ಸಂಘಟಿತ ಹೋರಾಟಕ್ಕೆ ಬೆಲೆ ಬರುತ್ತದೆ. ಮತ್ತೊಂದು ಸಂತೋಷದ ವಿಚಾರ ಎಂದರೆ, ಸತ್ತಂತ್ತಿರುವ ಜನತೆಯನ್ನು ಬಡಿದೆಚ್ಚರಿಸಿ ನಾಗರೀಕ ಪ್ರಜ್ಞೆ ಹಾಗೂ ಜಾಗೃತಿ ಮೂಡಿಸಿದ ಕೆಲಸವಾಗುತ್ತದೆ.

ದೇಶದ ಎಲ್ಲಾ ವರ್ಗದ ಎಲ್ಲಾ ಸ್ತರದ ಜನತೆ ಅಣ್ಣಾ ಬೆಂಬಲಿಸಿ ನಿಂತಿರುವುದು ಪ್ರಜಾಪ್ರಭುತ್ವಕ್ಕೆ ಹೊಸ ಅರ್ಥ ತಂದಿದೆ.

ಯಡವ್ ಬಾಬಾ ದೇಗುಲ ಬಳಿಯ ಸಣ್ಣ ಕೋಣೆಯಲ್ಲೇ ಕೂತು, ಸತ್ಯ ಮಾರ್ಗವನ್ನು ಅನುಸರಿಸಿ, ಮಹಾರಾಷ್ಟ್ರದ ಭ್ರಷ್ಟ ಸಚಿವರನ್ನು ಕೆಡವಿದ ಅಣ್ಣಾ ಅವರ ಇತ್ತೀಚಿನ ಬಲಿ ಶರದ್ ಪವಾರ್. ಭ್ರಷ್ಟಾಚಾರ ನಿರ್ಮೂಲನೆ ಸಚಿವರ ಸಮೂಹದಲ್ಲಿ ಭ್ರಷ್ಟ ಶರದ್ ಏಕೆ ಎಂದು ಗಾಂಧೀವಾದಿ ಅಣ್ಣಾ ಪಟ್ಟು ಹಿಡಿದಿದ್ದು ಫಲ ನೀಡಿದೆ.

1960ರಲ್ಲಿ ಆರ್ಮಿಯಲ್ಲಿ ಟ್ರಕ್ ಚಾಲಕರಾಗಿದ್ದ ಅಣ್ಣಾ, ಬಿಡುವಿನ ವೇಳೆಯಲ್ಲಿ ಓದಿದೆಲ್ಲಾ ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಹಾಗೂ ಆಚಾರ್ಯ ವಿನೋಬಾ ಭಾವೆ ಅವರ ಪುಸ್ತಕಗಳನ್ನು ಮಾತ್ರ.

ಗಾಂಧಿ ಕಂಡ ರಾಮರಾಜ್ಯ: ಆರ್ಮಿಯಿಂದ ಸ್ವಯಂ ನಿವೃತ್ತಿ ಪಡೆದು 1975ರಲ್ಲಿ ಸ್ವಗ್ರಾಮ ರಲೆಗಾನ್ ಸಿದ್ಧಿಗೆ ಭೇಟಿ ನೀಡಿದಾಗ, ಗ್ರಾಮದ ಪರಿಸ್ಥಿತಿ ಕಂಡು ದಂಗಾಗಿಬಿಟ್ಟರು. ಎಲ್ಲೆಡೆ ಕಿತ್ತು ತಿನ್ನುವ ಬಡತನ, ಬರಗಾಲ, ಕಳ್ಳ ಖದೀಮರ ಕಾಟ, ಮದ್ಯ ವ್ಯಸನಿಗಳ ಕೂಟವೇ ರಾರಾಜಿಸುತ್ತಿತ್ತು. ಆದರೆ, ಯುವಕರನ್ನು ಒಗ್ಗೂಡಿಸಿ ಶ್ರಮದಾನದ ಮೂಲಕ ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ ಹೀಗೆ ಸಕಲ ಸೌಕರ್ಯಗಳು ಸಿಕ್ಕಿವೆ.

ಇಂದು ಸರ್ಕಾರದ ನೆರವಿಲ್ಲದೆ, ಗ್ರಾಮಸ್ಥರ ನೆರವಿನಿಂದ ಸುಗ್ರಾಮವಾಗಿ ಬೆಳೆದಿದೆ. ಈ ಗ್ರಾಮ ಸಂಪೂರ್ಣ ಮದ್ಯ ಪಾನ, ಮಾದಕ ದ್ರವ್ಯ ತಂಬಾಕು ಮುಕ್ತವಾಗಿರುವುದು ವಿಶೇಷ.

ಅಸ್ಪೃಶ್ಯತೆ ನಿವಾರಣೆ, ಬದಲಾದ ಶಿಕ್ಷಣ ವ್ಯವಸ್ಥೆ, ಸಾಮೂಹಿಕ ವಿವಾಹಗಳು, ಗ್ರಾಮ ಸಭೆ ಮುಂತಾದವುಗಳನ್ನು ಪರಿಚಯಿಸಿ ನಿಜವಾಗಿ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಿಸಲು ಅಣ್ಣಾ ಶ್ರಮಿಸಿದ್ದಾರೆ.

2002ರಲ್ಲಿ ತಾಯಿ ಲಕ್ಷ್ಮಿ ಬಾಯಿ ಅವರನ್ನು ಕಳೆದುಕೊಂಡ ಅಣ್ಣಾ ಅವರಿಗೆ ಇಬ್ಬರು ಸೋದರಿಯರಿದ್ದಾರೆ. ಒಬ್ಬರು ಮುಂಬೈನಲ್ಲಿ ಮತ್ತೊಬ್ಬರು ಅಹಮದಾಬಾದ್ ಜಿಲ್ಲೆಯಲ್ಲಿ ವಾಸವಾಗಿದ್ದಾರೆ.

ಸತ್ಯಾಗ್ರಹ ಮಂತ್ರ: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹವನ್ನು ಪ್ರಬಲ ಅಸ್ತ್ರವಾಗಿ ಬಳಸಿದ ಗಾಂಧೀಜಿ ಮಾರ್ಗದಲ್ಲೇ ಅಣ್ಣಾ ನಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸೇನಾ ಸರ್ಕಾರ ಇಬ್ಬರು ಭ್ರಷ್ಟ ಸಂಪುಟ ಸಚಿವರನ್ನು ಹಾಗೂ ಕಾಂಗ್ರೆಸ್ ಎನ್ ಸಿಪಿ ಅವಧಿಯಲ್ಲಿ ನಾಲ್ಕು ಸಚಿವರನ್ನು ಕೆಳಗಿಳಿಸಿದ್ದಾರೆ.

ಕಳೆದ ಮೂರು ದಶಕಗಳಲ್ಲಿ ಶಿವ ಸೇನಾ ಬಿಜೆಪಿ, ಕಾಂಗ್ರೆಸ್ ಎನ್ ಸಿಪಿ ಭ್ರಷ್ಟ ಸಚಿವರುಗಳಿಗೆ ಇದೇ ರೀತಿ ಚುರುಕು ಅಣ್ಣಾ ಮುಟ್ಟಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಥವಾಗಿ ಬಳಕೆ ಮಾಡುತ್ತಾ ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದಾರೆ. ಶಿವ ಸೇನಾ ಬಾಳಾಠಾಕ್ರೆ ಹಿಂದೊಮ್ಮೆ "ಕಪಟ ಮುಖದ ಗಾಂಧಿ" ಎಂದು ಅಣ್ಣಾ ಅವರನ್ನು ಜರೆದಿದ್ದರು.

ಆದರೆ, ಇಂದು ಅಣ್ಣಾ ಅವರ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಕೂಡಾ ವಿಧಿಯಿಲ್ಲದೆ ಅಣ್ಣಾ ಹಜಾರೆ ಅವರ ಸುದ್ದಿ ಬಿತ್ತರಿಸುತ್ತಿವೆ.

ಪದ್ಮಭೂಷಣ, ಪದ್ಮಶ್ರೀ, ವೃಕ್ಷಮಿತ್ರ ಮುಂತಾದ ಎಲ್ಲಾ ಪ್ರಶಸ್ತಿಗಳಿಗಿಂತ ಹೆಚ್ಚಿನ ಹಾಗೂ ಅತಿ ದೊಡ್ಡ ಪ್ರಶಸ್ತಿಯನ್ನು ಇಂದು ದೇಶದ ಮಹಾಜನತೆ ಅವರಿಗೆ ನೀಡಿದೆ. ಅವರಿಂದ ಋತ ಮಾರ್ಗದಲ್ಲಿ ನಡೆದರೆ ಜಯ ಎಂಬ ಸದ್ಭೋದೆಯನ್ನು ಜನತೆ ಪಡೆದಿದೆ. ವಿಜಯೀಭವ ಅಣ್ಣಾ...

English summary
Then Corrupt Maharashtra politicians had fear of Anna Hazare, Now, Whole politicians are fear Anna Hazare after his hunger strike at Delhi to amend Janlokpal bill. Here is Hazare life at glance how a driver become driving force against corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X