ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರು ಗ್ಯಾರಿ ಸ್ಥಾನ ಬೇಡೆಂದ ಶೇನ್ ವಾರ್ನ್

By Mahesh
|
Google Oneindia Kannada News

Shane Warne
ಜೈಪುರ, ಏ.7: ಗ್ಯಾರಿ ಕರ್ಸ್ಟನ್ ರಾಜೀನಾಮೆಯಿಂದ ತೆರವಾಗಿರುವ ಟೀಮ್ ಇಂಡಿಯಾ ಕೋಚ್ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಶೇನ್ ವಾರ್ನ್ ಈಗ, ಗುರು ಗ್ಯಾರಿ ಸ್ಥಾನ ತುಂಬಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ. ಆಸ್ಟ್ರೇಲಿಯದ ಸ್ಪಿನ್ ದಂತಕಥೆ ಶೇನ್ ವಾರ್ನ್ ಸದ್ಯ ಶಿಲ್ಪಾಶೆಟ್ಟಿ ಒಡೆತನದ ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶುಕ್ರವಾರದಿಂದ ಆರಂಭವಾಗಲಿರುವ ಐಪಿಎಲ್ ಟ್ವೆಂಟಿ 20 ನಾಲ್ಕನೆ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ವನ್ನು ಸಮರ್ಥವಾಗಿ ಮುನ್ನೆಡೆಸುವ ಜವಾಬ್ದಾರಿಯಿದೆ. ಗ್ಯಾರಿ ಭಾರತ ಕೋಚ್ ಆಗಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿದ್ದರು. ಈಗ ಆ ಹುದ್ದೆಗೆ ನೇಮಕವಾಗುವ ಕೋಚ್ ಗೆ ಕಠಿಣ ಸವಾಲು ಎದುರಾಗಲಿದೆ ಎಂದು 41ರ ಹರೆಯದ ಲೆಗ್ ಸ್ಪಿನ್ನರ್ ವಾರ್ನ್ ಹೇಳಿದ್ದಾರೆ.

ವಾರ್ನ್ ಟೆಸ್ಟ್‌ನಲ್ಲಿ 708 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 293 ವಿಕೆಟ್‌ಗಳನ್ನು ಪಡೆದು 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2008ರಲ್ಲಿ ರಾಜಸ್ತಾನ ರಾಯಲ್ಸ್‌ನ ಕೋಚ್ ಮತ್ತು ನಾಯಕ ಹುದ್ದೆಯನ್ನು ವಹಿಸಿಕೊಂಡ ವಾರ್ನ್ 2008ರ ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಪ್ರಶಸ್ತಿ ತಂದು ಕೊಡುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು.

ಆದರೆ, ಮುಂದಿನ ಎರಡು ಐಪಿಎಲ್ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ಕಳಪೆ ಪ್ರದರ್ಶನ ನೀಡಿತ್ತು. ಆದರೂ, ಯುವ ಆಟಗಾರರನ್ನು ಸಮರ್ಥವಾಗಿ ಬೆಳಸಿದ ಮೆಚ್ಚುಗೆಗೆ ಶೇನ್ ಪಾತ್ರರಾಗಿದ್ದರು. ಈ ಬಾರಿ ಏ. 9ರಂದು ಕುಮಾರ ಸಂಗಕ್ಕಾರ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ತಂಡದ ವಿರುದ್ಧ ರಾಜಸ್ತಾನ್ ರಾಯಲ್ಸ್ ಮೊದಲ ಪಂದ್ಯ ಆಡಲಿದೆ. [ವೇಳಾಪಟ್ಟಿ ನೋಡಿ]

ರಾಜಸ್ತಾನ್ ರಾಯಲ್ಸ್ ತಂಡ: ಶೇನ್ ವಾರ್ನ್( ನಾಯಕ), ಶೇನ್ ವಾಟ್ಸನ್, ರಾಹುಲ್ ದ್ರಾವಿಡ್, ಜೊಹಾನ್ ಬೋಥಾ, ರಾಸ್ ಟೇಲರ್, ಶಾನ್ ಟೈಟ್, ಪಂಕಜ್ ಸಿಂಗ್, ಸಿದ್ದಾರ್ಥ್ ತ್ರಿವೇದಿ, ಫೈಜ್ ಫಜಲ್, ಅಭಿಷೇಕ್ ರೌತ್, ಅಮಿತ್ ಪೌನಿಕರ್, ಅದಿತ್ಯಾ ಡೊಲೆ, ಅಜಿಂಕಾ ರಹಾನೆ, ದಿಶಾಂತ್ ಯಾಗ್ನಿಕ್, ಆಕಾಶ್ ಚೋಪ್ರಾ, ಅಶೋಕ್ ಮೆನರಿಯಾ, ಸಮದ್ ಫಲ್ಲಾ, ನಯನ್ ದೋಷಿ,

English summary
Shane Warne has declined that he is not in the race for Team India Coach. The Legendary leg spinner is now busy with Rajasthan Royals in IPL 4 for which he is the captain and coach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X