• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಮ ಪ್ರವೀಣ ಪ್ರಿನ್ಸಿ, ಚಾಲಾಕಿ ಹುಡುಗರು!

By Mahesh
|

ಕುಂದಾಪುರ, ಏ.5: ಇಲ್ಲಿನ ಶೈಕ್ಷಣಿಕ ಸಂಸ್ಥೆಯೊಂದರ ಪ್ರಾಂಶುಪಾಲರಿಗೆ ಕಾಮಕೇಳಿಯ ಚಟ. ಆದರೆ, ಕಾಲೇಜಿನಲ್ಲಿ ಮಾತ್ರ ತುಂಬಾ ಸ್ಟ್ರಿಕ್ಟ್ ಹಾಗೂ ಡಿಸಿಪ್ಲೀನ್ಡ್. ಆದರೆ, ಪ್ರಿನ್ಸಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಸಾಧ್ಯವಾಗದ ಕಾಲೇಜಿನ ವಿದ್ಯಾರ್ಥಿಗಳು ವಾಮಮಾರ್ಗ ಬಳಸಿ ಪ್ರಿನ್ಸಿಯನ್ನು ಥಕ ತೈ ಥಕ ತೈ ಎಂದು ತಾವು ಹಾಕಿದ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದ್ದಾರೆ.

ಪ್ರಿನ್ಸಿಪಾಲ್ ಕಾಮ ಕೇಳಿಯಲ್ಲಿ ತೊಡಗಿರುವ ದೃಶ್ಯಗಳನ್ನು ಚಿತ್ರೀಕರಿಸಿರುವ ವಿದ್ಯಾರ್ಥಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಾ ಆನಂದ ಅನುಭವಿಸುತ್ತಿದ್ದಾರೆ. ಈ ನಡುವೆ ಪ್ರಿನ್ಸಿ ಜೊತೆ ಕಾಮಕ್ರೀಡೆಯಲ್ಲಿ ತೊಡಗಿದ್ದ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿದ್ದಾಳೆ. ವಿದ್ಯಾರ್ಥಿಗಳ ಬ್ಲ್ಯಾಕ್ ಮೇಲ್ ಬೇಡಿಕೆ ಮಿತಿ ಮೀರಿದಾಗ ಎಚ್ಚೆತ್ತುಕೊಂಡ ಪ್ರಿನ್ಸಿ, ಕೊನೆಗೂ ಪೊಲೀಸ್ ಮೊರೆ ಹೊಕ್ಕಿದ್ದಾರೆ.

ಘಟನೆ ಸವಿವರ: ಪ್ರಾಂಶುಪಾಲನೊಂದಿಗೆ ಕಾಮ ಕೇಳಿ ಆಡಿದ ಮಹಿಳೆ ಈ ವಿಚಾರವನ್ನು ಅದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಿದ್ದಳು. ಈ ಸಂದರ್ಭವನ್ನು ಬಳಸಿಕೊಂಡ ವಿದ್ಯಾರ್ಥಿಗಳು ಇವರ ಕಾಮ ಕೇಳಿ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ನಂತರ ಇದನ್ನು ವಿಡಿಯೋ ಕ್ಲಿಪ್ಪಿಂಗ್ಸ್ ಮುಂದಿಟ್ಟುಕೊಂಡು ಪ್ರಾಂಶುಪಾಲರಿಗೆ ಹಣದ ಬೇಡಿಕೆ ಮುಂದಿಟ್ಟಿದ್ದಾರೆ.

ತನ್ನ ಕಾಮಕೇಳಿ ದೃಶ್ಯ ಎಲ್ಲಾ ಮೊಬೈಲ್‌ಗಳಲ್ಲಿ ಬಿತ್ತರವಾಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿಗಳ ಬ್ಲ್ಯಾಕ್ ಮೇಲ್‌ಗೆ ಮಣಿದು ಒಂದಷ್ಟು ಹಣವನ್ನು ಪ್ರಾಂಶುಪಾಲರು ನೀಡಿದ್ದಾರೆ. ಆದರೆ ಕ್ರಮೇಣ ವಿದ್ಯಾರ್ಥಿಗಳ ಬ್ಲ್ಯಾಕ್‌ಮೇಲ್ ಒತ್ತಡ ಹೆಚ್ಚಿ ಭಾರೀ ಮೊತ್ತದ ಹಣಕ್ಕೆ ಬೇಡಿಕೆ ಬಂದಿದೆ. ಇದರಿಂದ ಕಂಗಾಲಾದ ಪ್ರಾಂಶುಪಾಲ ಪೊಲೀಸರ ಮೊರೆ ಹೋಗಿದ್ದು, ಈ ಸಂಬಂಧ ಈಗಾಗಲೇ ಮೂರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ

ಮಹಿಳೆ ಹಿನ್ನೆಲೆ: ಆ ಮಹಿಳೆ ಗಂಗೊಳ್ಳಿಯ ತ್ರಾಸಿ ಮೂಲದವಳಾಗಿದ್ದು, ಈಕೆಯ ಗಂಡ ಕೆಲವು ವರ್ಷಗಳ ಹಿಂದೆ ತಾಯಿಯನ್ನು ಕೊಂದ ಆರೋಪದಲ್ಲಿ ಶಿಕ್ಷೆಗೊಳಗಾಗಿ ಉಡುಪಿ ಜೈಲಿನಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಈ ಮಹಿಳೆ ಈಗಾಗಲೇ ಹಲವು ಯುವಕರ ಸಂಪರ್ಕ ಹೊಂದಿದ್ದಾಳೆ ಎಂದು ಹೇಳಲಾಗುತ್ತಿದೆ.

ಆದರೆ, ಬಂಧಿತ ವಿದ್ಯಾರ್ಥಿಗಳ ಮಾಹಿತಿ ಇನ್ನೂ ಸಿಕ್ಕಿಲ್ಲ. ಈ ಪ್ರಕರಣ ಕುಂದಾಪುರ ತಾಲೂಕಿನಾದ್ಯಂತ ಭಾರೀ ಕುತೂಹಲ ಕೆರಳಿಸಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಪ್ರಿನ್ಸಿಪಾಲ್ ಕಾಮದಾಸೆ, ಬ್ಲ್ಯಾಕ್ ಮೇಲ್‌ ಪ್ರಕರಣ ದಿಂದ ತಾಲೂಕಿನ ಮರ್ಯಾದೆ ಮಣ್ಣುಪಾಲಾಯಿತು ಎಂದು ಜನ ಸಾರ್ವಜನಿಕವಾಗಿ ಛೀಮಾರಿ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A group of student shooted sensual scenes between Kundapur college principal and a woman and started blackmailing the Principal. The woman is now absconding and Principal has booked case against student in Kundapur Station. Police have arrested three students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more